ಟ್ರೈನ್ ಟಿಕೆಟ್ ಬೆಲೆ ಪ್ರತೀ ಕಿಮೀಗೆ 1-2 ಪೈಸೆ ಹೆಚ್ಚಳ; ಡಿ. 26ರಿಂದ ಹೊಸ ದರ ಜಾರಿ – Kannada News | Indian Railways hikes fares for long distance travel, revised rates from Dec 26th
ನವದೆಹಲಿ, ಡಿಸೆಂಬರ್ 21: ರೈಲು ಪ್ರಯಾಣ ಮುಂದಿನ ದಿನಗಳಲ್ಲಿ ತುಸು ದುಬಾರಿಯಾಗಲಿದೆ. ರೈಲು ಪ್ರಯಾಣ ಟಿಕೆಟ್ ದರಗಳಲ್ಲಿ ಅಲ್ಪ ಏರಿಕೆ ಮಾಡಲು ಭಾರತೀಯ ರೈಲ್ವೇಸ್ (Indian Railways) ನಿರ್ಧರಿಸಿದೆ. ದೂರ ಪ್ರಯಾಣದ ದರಗಳನ್ನು ಏರಿಕೆ ಮಾಡಲಾಗುತ್ತಿದೆ. ಸಬರ್ಬನ್ ರೈಲುಗಳ ದರಗಳಲ್ಲಿ ಬದಲಾವಣೆ ಇರುವುದಿಲ್ಲ. ಡಿಸೆಂಬರ್ 26ರಿಂದ ಪರಿಷ್ಕೃತ ದರಗಳು ಜಾರಿಗೆ ಬರಲಿವೆ. ವರದಿ ಪ್ರಕಾರ 215 ಕಿಮೀ ದೂರದವರೆಗಿನ ಜನರಲ್ ಕ್ಲಾಸ್ ಕಂಪಾರ್ಟ್ಮೆಂಟ್ಗಳ ಟಿಕೆಟ್ ಬೆಲೆಗಳಲ್ಲಿ ಬದಲಾವಣೆ ಇರುವುದಿಲ್ಲ. ಅದಕ್ಕೂ ಹೆಚ್ಚಿನ ದೂರದ ಪ್ರಯಾಣವಾದರೆ, 215 ಕಿಮೀ…