Headlines

ಕದಿಯಲು ಹೋಗಿ ಸಿಕ್ಕಿಬಿದ್ದವನಿಂದ ತಾನು ಕಳ್ಳತನಕ್ಕೆ ಯತ್ನಿಸಿದ ಮನೆಯವರ ವಿರುದ್ಧವೇ ದೂರು! – Kannada News | First Time Thief Caught in Bengaluru, Complains of Assault by Victims

ಬೆಂಗಳೂರು, ಫೆಬ್ರವರಿ 05: ಕಳ್ಳತನ ಮಾಡಲು ಹೋದಾಗ ಅವರನ್ನು ಯಾರಾದ್ರೂ ನೋಡಿದ್ರೆ ಅವರ ಮೇಲೆಯೇ ಈ ಖದೀಮರು ಹಲ್ಲೆ ನಡೆಸಿ ಎಸ್ಕೇಪ್​​ ಆಗೋದನ್ನು ನಾವು ನೋಡಿದ್ದೇವೆ. ಇಲ್ಲವೇ ಸಿಕ್ಕಿಬಿದ್ದು ಜೈಲು ಸೇರಿರುವವರ ಕತೆ ಕೇಳಿದ್ದೇವೆ. ಆದರೆ ಸಿಲಿಕಾನ್​​ ಸಿಟಿ ಬೆಂಗಳೂರಲ್ಲೊಂದು ವಿಚಿತ್ರ ಪ್ರಕರಣ ನಡೆದಿದೆ. ಫಸ್ಟ್​​ ಟೈಂ ಕಳ್ಳತನಕ್ಕೆ ಹೋದ ವ್ಯಕ್ತಿಯೊಬ್ಬ ಮನೆಯವರ ಬಳಿ ಸಿಕ್ಕಿಬಿದ್ದು ಪೆಟ್ಟು ತಿಂದು ಬಂದಿದ್ದಾನೆ. ಸಾಲದ್ದಕ್ಕೆ ಕದಿಯಲು ಹೋದ ವೇಳೆ ಆ ಮನೆಯವರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ…

Read More

ಧನುಶ್ ಹುಟ್ಟೂರಿನ ವಿಷಯ ಬರುತ್ತಿದ್ದಂತೆ ನಾಚಿ ನೀರಾದ ಮೃಣಾಲ್ ಠಾಕೂರ್ – Kannada News | Mrunal Thakur Blushes as Dhanush’s Chennai is Mentioned Amidst Marriage Rumors

ಮೃಣಾಲ್ ಠಾಕೂರ್ ಹಾಗೂ ಧನುಶ್ (Dhanush) ವಿವಾಹ ಆಗುತ್ತಾರೆ ಎಂಬ ಸುದ್ದಿ ಇತ್ತೀಚೆಗೆ ಜೋರಾಗಿದೆ. ಆದರೆ, ಇದಕ್ಕೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ. ಕೆಲವರು ಇದನ್ನು ಫೇಕ್ ಸುದ್ದಿ ಎನ್ನುತ್ತಿದ್ದಾರೆ. ಹೀಗಿರುವಾಗಲೇ ಮೃಣಾಲ್ ಠಾಕೂರ್ ಅವರಿಗೆ ಧನುಶ್ ಹುಟ್ಟೂರಾದ ಚೆನ್ನೈ ವಿಷಯ ಚರ್ಚೆಗೆ ಬಂದಿದೆ. ಆ ಬಳಿಕ ಮೃಣಾಲ್ ಠಾಕೂರ್ ಅವರು ಅಕ್ಷರಶಃ ನಾಚಿ ನೀರಾಗಿದ್ದಾರೆ. ಅಷ್ಟಕ್ಕೂ ವೇದಿಕೆ ಮೇಲೆ ನಡೆದಿದ್ದು ಏನು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ. ಮೃಣಾಲ್ ಠಾಕೂರ್ ಅವರು ‘ದೋ ದೀವಾನೆ ಸೆಹೆರ್ ಮೇ’…

Read More

‘ಜನ ನಾಯಗನ್’ ಸಿನಿಮಾದಿಂದಾಗಿ 100 ಕೋಟಿ ನಷ್ಟ ಅನುಭವಿಸಿದ ಚಿತ್ರಮಂದಿರಗಳು – Kannada News | Due to Jana Nayagan movie release delay theaters loss more than 100 crore rs

ದಳಪತಿ ವಿಜಯ್ (Thalapathy Vijay) ನಟನೆಯ ‘ಜನ ನಾಯಗನ್’ ಸಿನಿಮಾ ಜನವರಿ 10ಕ್ಕೆ ತೆರೆ ಕಾಣಬೇಕಿತ್ತು. ಆದರೆ ಸಿಬಿಎಫ್​​ಸಿ, ಪ್ರಮಾಣ ಪತ್ರ ನೀಡಲು ವಿಳಂಬ ಮಾಡಿದ್ದು ಅದರ ನಂತರ ನಡೆದ ಬೆಳವಣಿಗೆಗಳ ಕಾರಣದಿಂದಾಗಿ ಸಿನಿಮಾ ಈ ವರೆಗೆ ಬಿಡುಗಡೆ ಆಗಿಲ್ಲ. ಪ್ರಕರಣ ನ್ಯಾಯಾಲಯದಲ್ಲಿದ್ದು, ಸಿನಿಮಾದ ಬಿಡುಗಡೆ ಇನ್ನಷ್ಟು ತಡ ಆಗುವ ಸಾಧ್ಯತೆ ದಟ್ಟವಾಗಿದೆ. ತಮಿಳುನಾಡು ವಿಧಾನಸಭೆ ಚುನಾವಣೆ ಮುಗಿಯುವವರೆಗೆ ಸಿನಿಮಾ ಬಿಡುಗಡೆ ಆಗುವುದಿಲ್ಲ ಎಂಬ ಅಭಿಪ್ರಾಯಗಳು ಸಹ ಅಲ್ಲಲ್ಲಿ ಹರಿದಾಡುತ್ತಿವೆ. ಸಿನಿಮಾ ಬಿಡುಗಡೆ ತಡವಾಗಿರುವುದರಿಂದ ನಿರ್ಮಾಪಕ ಕೆವಿಎನ್…

Read More

ಬೆಂಗಳೂರು: ಇಬ್ಬಲೂರು ಜಂಕ್ಷನ್​ನಲ್ಲಿ ನಿರ್ಮಾಣವಾಗಲಿದೆ ಹೊಸ ಫ್ಲೈಓವರ್, ಟ್ರಾಫಿಕ್​ಗೆ ಸಿಗಲಿದೆ ಮುಕ್ತಿ – Kannada News | New Flyover Planned at Ibbaluru Junction in Bengaluru to Ease Traffic Congestion; DPR Preparation Begins

ಬೆಂಗಳೂರು, ಫೆಬ್ರವರಿ 5: ಬೆಂಗಳೂರಿನ ಇಬ್ಬಲೂರು ಜಂಕ್ಷನ್ ವಾಹನ ಸವಾರರಿಗೆ ನಿತ್ಯ ತಲೆನೋವಾಗಿ ಪರಿಣಮಿಸಿದೆ. ಬೆಳ್ಳಂದೂರು, ಸರ್ಜಾಪುರ, ಎಚ್‌ಎಸ್‌ಆರ್ ಲೇಔಟ್ ಮತ್ತು ಕಾಡುಬೀಸನಹಳ್ಳಿಯಂತಹ ಪ್ರದೇಶಗಳಿಂದ ಬರುವ ವಾಹನಗಳು ಇದೇ ಜಂಕ್ಷನ್ ಮೂಲಕ ಹಾದು ಹೋಗುವುದರಿಂದ ಇಲ್ಲಿ ನಿರಂತರವಾಗಿ ಗಂಟೆಗಟ್ಟಲೆ ಸಂಚಾರ ದಟ್ಟಣೆ ಉಂಟಾಗುತ್ತದೆ. ಅಸ್ತಿತ್ವದಲ್ಲಿರುವ ಮೇಲ್ಸೇತುವೆ ಕಿರಿದಾಗಿದ್ದು, ವಾಹನಗಳ ದಟ್ಟಣೆಯನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿಲ್ಲ. ಈ ಸಮಸ್ಯೆಯನ್ನು ಪರಿಹರಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹೊಸ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಜಿಬಿಎ ಮುಖ್ಯ ಆಯುಕ್ತ ಎಂ. ಮಹೇಶ್ವರ ರಾವ್ ಅವರು…

Read More

ಭಾರತ್ ಟ್ಯಾಕ್ಸಿಗೆ ಇಂದು ಅಧಿಕೃತ ಚಾಲನೆ; ಸಹಕಾರಿ ತತ್ವದಲ್ಲಿ ಕ್ಯಾಬ್ ಚಲಾಯಿಸುವವರು ಚಾಲಕರಲ್ಲ, ಸಾರಥಿಗಳು – Kannada News | Official launch of Bharat Taxi, the cab service model that offers win win for both drivers and customers

ನವದೆಹಲಿ, ಫೆಬ್ರುವರಿ 5: ಸಹಕಾರಿ ತತ್ವದಲ್ಲಿ ರೂಪುಗೊಂಡಿರುವ ಕ್ಯಾಬ್ ಸರ್ವಿಸ್ ಕಂಪನಿಯಾದ ಭಾರತ್ ಟ್ಯಾಕ್ಸಿಯ (Bharat Taxi) ಸೇವೆ ಇಂದು ಗುರುವಾರ ಅಧಿಕೃತವಾಗಿ ಚಾಲನೆಗೊಳ್ಳುತ್ತಿದೆ. ಅಮುಲ್ ಸೇರಿದಂತೆ ವಿವಿಧ ಸರ್ಕಾರಿ ಸಂಸ್ಥೆಗಳಿಂದ ಬೆಂಬಲಿತವಾಗಿರುವ ಈ ಕ್ಯಾಬ್ ಸರ್ವಿಸ್ ಸದ್ಯ ದೆಹಲಿ ಎನ್​ಸಿಆರ್ (Delhi-NCR) ಪ್ರದೇಶದಲ್ಲಿ ಅಧಿಕೃತವಾಗಿ ಶುರುವಾಗಲಿದೆ. ಗುರುವಾರ ಮಧ್ಯಾಹ್ನ ಗೃಹ ಸಚಿವ ಅಮಿತ್ ಶಾ ಅವರು ಭಾರತ್ ಟ್ಯಾಕ್ಸಿ ಸರ್ವಿಸ್​ಗೆ ಚಾಲನೆ ಕೊಡಲಿದ್ದಾರೆ. ಈ ಮೂಲಕ ಕ್ಯಾಬ್ ಸರ್ವಿಸ್ ಕ್ಷೇತ್ರದಲ್ಲಿ ಓಲಾ, ಊಬರ್​ನ ಪ್ರಾಬಲ್ಯಕ್ಕೆ ಸೆಡ್ಡು…

Read More

ಕಲಬುರಗಿ ಆರ್​ಟಿಒ ಕಚೇರಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ: ಇಲ್ಲಿ ದುಡ್ಡು ಕೊಟ್ಟರೆ ಎಲ್ಲವೂ ಸಿಗುತ್ತೆ!

ಕಲಬುರಗಿ, ಫೆಬ್ರವರಿ 5: ಕಲಬುರಗಿ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ (ಆರ್ಟಿಓ) ನಡೆಯುತ್ತಿರುವ ಭ್ರಷ್ಟಾಚಾರವನ್ನು ‘ಟಿವಿ9’ ಸುದ್ದಿ ವಾಹಿನಿ ಬಯಲು ಮಾಡಿದೆ. ಆರ್​​ಟಿಒ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ಸಿಬ್ಬಂದಿ ಲಂಚಕ್ಕೆ ಬೇಡಿಕೆ ಇಡುತ್ತಿರುವುದು ಮತ್ತು ದಾಖಲೆಗಳನ್ನು ಅನಧಿಕೃತವಾಗಿ ವಿತರಿಸುತ್ತಿರುವುದು ಬಹಿರಂಗವಾಗಿದೆ. ಈ ಕಚೇರಿಯಲ್ಲಿ ಹಣ ನೀಡಿದರೆ ವಾಹನಗಳ ಆರ್​ಸಿ ಕಾರ್ಡ್‌ಗಳು ಸೇರಿದಂತೆ ಎಲ್ಲಾ ಸರ್ಕಾರಿ ದಾಖಲೆಗಳು ಸುಲಭವಾಗಿ ಲಭ್ಯವಾಗುತ್ತವೆ. ಅರ್ಹರಲ್ಲದವರಿಗೂ ಅಥವಾ ಅನಗತ್ಯ ವ್ಯಕ್ತಿಗಳಿಗೂ ಈ ಭೂಪರು ಸರ್ಕಾರಿ ದಾಖಲೆಗಳನ್ನು ನೀಡುತ್ತಾರೆ. ಲಂಚ ಪಡೆದು ಆರ್​​ಸಿ ಕಾರ್ಡ್‌ ವಿತರಿಸುವ…

Read More

ರಾಜ್ಯದಲ್ಲಿ ಅನಧಿಕೃತವಾಗಿ ನೆಲೆಸಿರುವ ವಿದೇಶಿಯರಿಗೆ ನಡುಕ ಶುರು: ಅಕ್ರಮ ವಲಸಿಗರ ಪತ್ತೆಗೆ ವಿಶೇಷ ಕಾರ್ಯಾಚರಣೆ – Kannada News | Karnataka Launches Special Drive To Identify Illegal Bangladeshi Immigrants

ಬೆಂಗಳೂರು, ಫೆಬ್ರವರಿ 05:  ಅಕ್ರಮ ವಲಸಿಗರನ್ನು ಪತ್ತೆಹಚ್ಚಲು ರಾಜ್ಯ ಸರ್ಕಾರವು ವಿಶೇಷ ಕಾರ್ಯಾಚರಣೆಯನ್ನು ಆರಂಭಿಸಿದೆ. ಬಾಂಗ್ಲಾದೇಶ ಮತ್ತು ಇತರ ದೇಶಗಳಿಂದ ಅನಧಿಕೃತವಾಗಿ ನೆಲೆಸಿರುವ ವಿದೇಶಿಯರನ್ನು ಗುರುತಿಸುವುದು ಈ ಕಾರ್ಯಾಚರಣೆಯ ಮುಖ್ಯ ಉದ್ದೇಶವಾಗಿದೆ. ಹೈಕೋರ್ಟ್‌ನ ಸೂಚನೆಯ ನಂತರ ರಾಜ್ಯ ಸರ್ಕಾರ ಈ ಕ್ರಮಕ್ಕೆ ಮುಂದಾಗಿದ್ದು, ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಈಗಾಗಲೇ ಸಂಬಂಧಪಟ್ಟ ಇಲಾಖೆಗೆ ನಿರ್ದೇಶನ ನೀಡಿದ್ದಾರೆ. ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಸಚಿವರು, ರಾಜ್ಯಾದ್ಯಂತ ಅನಧಿಕೃತವಾಗಿ ವಾಸಿಸುತ್ತಿರುವ ಬಾಂಗ್ಲಾದೇಶಿಗರು ಮತ್ತು ವಿದೇಶಿಯರನ್ನು ಹುಡುಕಲು ನಿರ್ದೇಶನ…

Read More

ಟೀಚರ್ ತನ್ನ ಪ್ರೀತಿ ಒಪ್ಪಿಕೊಳ್ಳಲಿಲ್ಲವೆಂದು ರಸ್ತೆಯಲ್ಲಿ ತುಟಿ ಕಚ್ಚಿ ತುಂಡರಿಸಿದ ವಿದ್ಯಾರ್ಥಿ – Kannada News | Mainpuri Shocker: Student Attacks Teacher After Rejection, Biting Lips

ಮೈನ್​ಪುರಿ, ಫೆಬ್ರವರಿ 05: ನಾವು ಪ್ರೀತಿಸಿದವರು ಒಪ್ಪಿಕೊಳ್ಳಲಿಲ್ಲವೆಂದರೆ ಎಲ್ಲೇ ಇರಲಿ ಅವರು ಸುಖವಾಗಿರಲಿ ಎಂದು ಬಯಸುವುದು ನಿಜವಾದ ಪ್ರೀತಿ(Love). ಆದರೆ ಇಲ್ಲೊಬ್ಬ 12ನೇ ತರಗತಿ ವಿದ್ಯಾರ್ಥಿ ಶಿಕ್ಷಕಿ ತನ್ನ ಪ್ರೀತಿ ಮಾಡುವುದಿಲ್ಲ ಎಂದು ಗೊತ್ತಾದ ಬಳಿಕ ಆತ ರಸ್ತೆಯಲ್ಲೇ ಶಿಕ್ಷಕಿಯ ತುಟಿಯ ಕಚ್ಚಿ ತುಂಡರಿಸಿರುವ ಘಟನೆ ಉತ್ತರ ಪ್ರದೇಶದ ಮೈನ್​ಪುರಿಯಲ್ಲಿ ನಡೆದಿದೆ. ಶಿಕ್ಷಕಿ ತನ್ನ ಪ್ರೀತಿಯನ್ನು ಒಪ್ಪಿಕೊಂಡಿಲ್ಲವೆಂದು ಕ್ರೌರ್ಯದ ಎಲ್ಲಾ ಮಿತಿಗಳನ್ನು ಆತ ದಾಟಿದ್ದಾನೆ. ಗಂಭೀರವಾಗಿ ಗಾಯಗೊಂಡ ಶಿಕ್ಷಕಿಯನ್ನು ಆಗ್ರಾಕ್ಕೆ ಕಳುಹಿಸಲಾಗಿದೆ, ಆಕೆಯ ಸ್ಥಿತಿ ಇನ್ನೂ ಗಂಭೀರವಾಗಿದೆ…

Read More

ಟಿ20 ವಿಶ್ವಕಪ್​ನಲ್ಲಿ 10 ಹೊಸ ನಿಯಮಗಳು ಜಾರಿ! – Kannada News | New Rules in ICC T20 World Cup 2026

ಬಹುನಿರೀಕ್ಷಿತ ಟಿ20 ವಿಶ್ವಕಪ್​ಗೆ ವೇದಿಕೆ ಸಿದ್ಧವಾಗಿದೆ. ಫೆಬ್ರವರಿ 7 ರಿಂದ ಶುರುವಾಗಲಿರುವ 20 ತಂಡಗಳ ಚುಟಕು ಮಹಾ ಸಮರಕ್ಕೂ ಮುನ್ನವೇ ಐಸಿಸಿ ಕೆಲ ನಿಯಮಗಳನ್ನು ಜಾರಿಗೊಳಿಸಿದೆ. ಈ ನಿಯಮಗಳ ಮೂಲಕ ಪಂದ್ಯವನ್ನು ಮತ್ತಷ್ಟು ರೋಚಕ ಹಾಗೂ ನ್ಯಾಯಯುತವಾಗಿ ಆಯೋಜಿಸಲು ನಿರ್ಧರಿಸಲಾಗಿದೆ. ಅದರಂತೆ ಈ ಬಾರಿಯ ಟಿ20 ವಿಶ್ವಕಪ್​ನಲ್ಲಿ ಜಾರಿಯಲ್ಲಿರುವ ಹೊಸ ನಿಯಮಗಳಾವುವು ಎಂದು ನೋಡುವುದಾದರೆ… ಸ್ಟಾಪ್ ಕ್ಲಾಕ್ ನಿಯಮ: ಓವರ್‌ಗಳ ನಡುವೆ ಕಡ್ಡಾಯ 60-ಸೆಕೆಂಡ್‌ಗಳ “ಸ್ಟಾಪ್ ಕ್ಲಾಕ್” ಈಗ ಜಾರಿಯಲ್ಲಿರಲಿದೆ. ಅಂದರೆ ಹಿಂದಿನ ಓವರ್ ಮುಗಿದ ಒಂದು…

Read More

ಸಿದ್ದರಾಮಯ್ಯ Vs ಡಿ.ಕೆ. ಶಿವಕುಮಾರ್​​: ಎಐಸಿಸಿ ನಾಯಕರ ಮೌನದ ಬಗ್ಗೆ ‘ಕೈ ‘ ಶಾಸಕರಲ್ಲೇ ಬೇಸರ! – Kannada News | Karnataka Congress Leadership Crisis: MLAs Blame High Command’s Silence, Fear Election Impact

ರಾಜ್ಯ ಕಾಂಗ್ರೆಸ್​​ನಲ್ಲಿ ನಾಯಕತ್ವ ಬದಲಾವಣೆ ಗೊಂದಲImage Credit source: Google ಬೆಂಗಳೂರು, ಫೆಬ್ರವರಿ 05: ರಾಜ್ಯ ಕಾಂಗ್ರೆಸ್​​ನಲ್ಲಿ ಕಳೆದ ಕೆಲ ದಿನಗಳಿಂದ ಬೂದಿ ಮುಚ್ಚಿದ ಕೆಂಡದಂತಿದ್ದ ನಾಯಕತ್ವ ಬದಲಾವಣೆ ವಿಚಾರ ಮತ್ತೆ ಭುಗಲೇಳುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್​ ಮೌನದ ಬಗ್ಗೆ ಕಾಂಗ್ರೆಸ್​ ಶಾಸಕರು ಬೇಸರ ಹೊರಹಾಕಿದ್ದು, ನಾಯಕತ್ವ ಬದಲಾವಣೆ ಗೊಂದಲದಿಂದ ನಮ್ಮ ಸ್ಥಿತಿ ಅಡಕತ್ತರಿಯಲ್ಲಿ ಸಿಲುಕಿದಂತಾಗಿದೆ ಎಂದು ಅಲವತ್ತುಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಅಲ್ಲದೆ ಕೆಲವೇ ತಿಂಗಳಲ್ಲಿ…

Read More