Headlines

IIT Madras Summer Internship 2026: IIT ಮದ್ರಾಸ್ ಸಮ್ಮರ್ ಇಂಟರ್ನ್‌ಶಿಪ್; ತರಬೇತಿಯ ಜೊತೆಗೆ 30,000 ರೂ. ಸ್ಟೈಫಂಡ್ – Kannada News | IIT Madras Summer Internship 2026: Apply Now for Rs 30,000 Stipend and Research Experience

ಭಾರತೀಯ ತಂತ್ರಜ್ಞಾನ ಸಂಸ್ಥೆ (IIT) ಮದ್ರಾಸ್ ತನ್ನ ಸಮ್ಮರ್​ ಫೆಲೋಶಿಪ್/ಇಂಟರ್ನ್‌ಶಿಪ್ ಕಾರ್ಯಕ್ರಮವನ್ನು ಘೋಷಿಸಿದ್ದು, ದೇಶದಾದ್ಯಂತದ ವಿದ್ಯಾರ್ಥಿಗಳಿಗೆ ಮಹತ್ವದ ಅವಕಾಶ ಒದಗಿಸಿದೆ. ವಿಶೇಷವಾಗಿ IIT ಹೊರಗಿನ ವಿದ್ಯಾರ್ಥಿಗಳಿಗೆ ಸಂಶೋಧನಾ ಅನುಭವ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ರೂಪಿಸಲಾಗಿದ್ದು, ಆಯ್ಕೆಯಾದವರಿಗೆ ಆಕರ್ಷಕ ಸ್ಟೈಫಂಡ್ ಕೂಡ ನೀಡಲಾಗುತ್ತದೆ. ಇಂಟರ್ನ್‌ಶಿಪ್ ಯಶಸ್ವಿಯಾಗಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಒಟ್ಟು 30,000 ರೂ. ಸ್ಟೈಫಂಡ್ ಪಡೆಯಲಿದ್ದಾರೆ. ಈ ಇಂಟರ್ನ್‌ಶಿಪ್ ಎರಡು ತಿಂಗಳ ಅವಧಿಯದ್ದಾಗಿದ್ದು, ಮೇ 18 ರಿಂದ ಜುಲೈ 17 ರವರೆಗೆ ನಡೆಯಲಿದೆ. ಆಯ್ಕೆಯಾದ ವಿದ್ಯಾರ್ಥಿಗಳು ಈ…

Read More

ದೇಶದ್ರೋಹಿ ಸ್ನೇಹಿತ; ಕೇಂದ್ರ ಸಚಿವ ರವನೀತ್ ಬಿಟ್ಟುಗೆ ರಾಹುಲ್ ಗಾಂಧಿ ಲೇವಡಿ, ಸಂಸತ್ ಹೊರಗೆ ವಾಗ್ವಾದ – Kannada News | My Traitor Friend; Rahul Gandhi’s dig At BJP Minister Ravneet Bittu outside Parliament Sparks Row

ನವದೆಹಲಿ, ಫೆಬ್ರವರಿ 4: ಇಂದು ಬೆಳಿಗ್ಗೆ ಸಂಸತ್ ಭವನದ ಹೊರಗೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಮತ್ತು ಕೇಂದ್ರ ಸಚಿವ ರವನೀತ್ ಸಿಂಗ್ ಬಿಟ್ಟು ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಇಂದಿನ ಕಲಾಪದ ಆರಂಭಕ್ಕೂ ಮುನ್ನ ಪಾರ್ಲಿಮೆಂಟ್ ಹೊರಗೆ ಮೆಟ್ಟಿಲಿನ ಬಳಿ ಕಾಂಗ್ರೆಸ್ ಸಂಸದರು ಕುಳಿತಿದ್ದರು. ಆಗ ಅಲ್ಲಿಗೆ ಬಂದ ಕೇಂದ್ರ ಸಚಿವ ರವನೀತ್ ಸಿಂಗ್ ಬಿಟ್ಟು (Ravneet Singh Bittu) ಅವರನ್ನು ನೋಡಿ ತಮಾಷೆ ಮಾಡಿದ್ದಾರೆ. “ನನ್ನ ದೇಶದ್ರೋಹಿ ಸ್ನೇಹಿತ…

Read More

ಜ್ಯೋತಿಷಿ ಕಮಲಾಕರ್​​ ಭಟ್​​ ಕೇಸ್​​: ಬಿ.ಕೆ. ಹರಿಪ್ರಸಾದ್​- ಸುರೇಶ್​​ ಕುಮಾರ್​ ನಡುವೆ ವಾಕ್ಸಮರ; ಕಾರಣ ಇಲ್ಲಿದೆ – Kannada News | Astrologer Murder Case: BJP MLA Suresh Kumar Counters Congress MLC B.K. Hariprasad’s Allegations

ಹರಿಪ್ರಸಾದ್​ Vs ಸುರೇಶ್​​ ಕುಮಾರ್​Image Credit source: Google ಬೆಂಗಳೂರು, ಫೆಬ್ರವರಿ 04: ವಿವಾಹಿತ ಮಹಿಳೆಯೋರ್ವರ ಜೊತೆಗೆ ಜ್ಯೋತಿಷಿ ಕಮಲಾಕರ್ ಭಟ್ ಅಕ್ರಮ ಸಂಬಂಧ ಆರೋಪ ವಿಚಾರವಾಗಿ ನಡೆದ ಗಲಾಟೆಯಲ್ಲಿ ಓರ್ವ ಮೃತಪಟ್ಟಿರುವ ಘಟನೆಯೀಗ ಪರಿಷತ್​​ ಕಾಂಗ್ರೆಸ್ ಸದಸ್ಯ ಬಿ.ಕೆ. ಹರಿಪ್ರಸಾದ್​​ ಮತ್ತು ಬಿಜೆಪಿ ಶಾಸಕ ಎಸ್​​.ಸುರೇಶ್​​ ಕುಮಾರ್​ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. ಪ್ರಕರಣ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​​ ಮಾಡಿರುವ ಹರಿಪ್ರಸಾದ್​​ ಬಿಜೆಪಿ ಮತ್ತು ತಮ್ಮ ಹೆಸರನ್ನು ಉಲ್ಲೇಖಿಸಿರುವ ಬಗ್ಗೆ ಸುರೇಶ್​​ ಕುಮಾರ್​​ ಗರಂ ಆಗಿದ್ದು,…

Read More

ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಮುರುಡೇಶ್ವರಕ್ಕೆ ಪ್ರವಾಸ ಹೋಗುವವರಿಗೆ kstdcನಿಂದ ವಿಶೇಷ ಪ್ಯಾಕೇಜ್​​ – Kannada News | Explore Karnataka’s Sacred South: KSTDC’s Affordable 6 Day Temple Tour Package

ಬೆಂಗಳೂರು, ಫೆ.4: ಕರ್ನಾಟಕದ ದಕ್ಷಿಣ ಭಾಗಗಳಲಾಗದ ಮಂಗಳೂರು, ಉಡುಪಿ, ಇನ್ನು ಹಲವು ಜಿಲ್ಲೆಗಳು ಒಳ್ಳೆಯ ಪ್ರವಾಸಿ ತಾಣಗಳನ್ನು ಹೊಂದಿದೆ. ಇತ್ತೀಚಿನ ಕೇಂದ್ರ ಬಜೆಟ್​​​ನಲ್ಲೂ ಪ್ರವಾಸಿತಾಣಗಳಿಗೆ ಹೆಚ್ಚಿನ ಆದ್ಯತೆಗಳನ್ನು ನೀಡಲಾಗಿದೆ. ರಾಜ್ಯ ಸರ್ಕಾರ ಕೂಡ ಈ ಪ್ರವಾಸಿನ ತಾಣಗಳ ಅಭಿವೃದ್ಧಿ ಹಾಗೂ ಅಲ್ಲಿ ಹೆಚ್ಚಿನ ಪ್ರವಾಸಿಗಳು ಭೇಟಿ ನೀಡಬೇಕು ಎಂಬ ಕಾರಣಕ್ಕೆ ವಿಶೇಷ ಪ್ಯಾಕೇಜ್​​ಗಳನ್ನು ನೀಡಿದೆ. ಇದೀಗ kstdc ಕರ್ನಾಟಕದ ದಕ್ಷಿಣ ಭಾಗಗಳಲ್ಲಿರುವ ಪುಣ್ಯಕ್ಷೇತ್ರಕ್ಕೆ ಹೋಗಲು ವಿಶೇಷ ಪ್ಯಾಕೇಜ್​​​ ಒಂದನ್ನು ನೀಡಿದೆ. ಒಟ್ಟು 6 ದಿನಗಳ ಪ್ರವಾಸ ಇದ್ದಾಗಿದೆ….

Read More

ಯಶ್ ಚಿತ್ರಕ್ಕೆ ಕೌಂಟರ್ ಕೊಡೋಕೆ ಬಂತು ಮತ್ತೊಂದು ‘ರಾಮಾಯಣ’; ರಾಮನ ಪಾತ್ರದಲ್ಲಿ ಸ್ಟಾರ್ ಹೀರೋ – Kannada News | Mahesh Babu Confirms Rama Role in Rajamouli’s Varanasi: Intense Training for Epic Saga

ರಣಬೀರ್ ಕಪೂರ್ (Ranbir Kapoor) ನಟನೆಯ ‘ರಾಮಾಯಣ’ ಸಿನಿಮಾ ಈ ವರ್ಷ ದೀಪಾವಳಿಗೆ ರಿಲೀಸ್ ಆಗುತ್ತಿದೆ. ಈ ಸಿನಿಮಾದಲ್ಲಿ ಯಶ್ ರಾವಣನ ಪಾತ್ರ ಮಾಡುತ್ತಿದ್ದಾರೆ. ಈಗಾಗಲೇ ರಾಮಾಯಣದ ಮೇಲೆ ಸಾಕಷ್ಟು ಸಿನಿಮಾಗಳು ಬಂದು ಹೋಗಿವೆ. ಈಗ ಈ ಸಾಲಿಗೆ ಮತ್ತೊಂದು ಸಿನಿಮಾ ಸೇರ್ಪಡೆ ಆಗುತ್ತಿದೆ. ‘ರಾಮಾಯಣ’ ಆಧರಿಸಿ ರಾಜಮೌಳಿ ಸಿನಿಮಾ ಮಾಡುತ್ತಿದ್ದಾರೆ! ಮಹೇಶ್ ಬಾಬು ಇದಕ್ಕೆ ಹೀರೋ! ರಾಜಮೌಳಿ ಅವರು ಮಹೇಶ್ ಬಾಬು ಜೊತೆ ‘ವಾರಣಾಸಿ’ ಹೆಸರಿನ ಸಿನಿಮಾ ಮಾಡುತ್ತಿದ್ದಾರೆ.ಈ ಬಗ್ಗೆ ಮೊದಲೇ ಘೋಷಣೆ ಆಗಿದೆ. ಆದರೆ,…

Read More

Lakkundi Gold Treasure: ಲಕ್ಕುಂಡಿಯ ಜೈನ ಬಸದಿಗಳಲ್ಲೂ ನಿಧಿ ಇದ್ಯಾ? ಸರ್ಪಗಳು ಕಾವಲು ಕಾಯ್ತಿದ್ಯಾ? – Kannada News | Ancient Wealth of Lakkundi: Locals Believe Snakes Protect Gold in Jain Basadis

ಗದಗ, ಫೆಬ್ರುವರಿ 04: ಜಿಲ್ಲೆಯ ಐತಿಹಾಸಿಕ ಲಕ್ಕುಂಡಿಯಲ್ಲಿ ಅಡಗಿರುವ ನಿಧಿ ಮತ್ತು ಅದನ್ನು ಸರ್ಪಗಳು ಕಾಯುತ್ತವೆ ಎಂಬ ಕುರಿತು ವ್ಯಾಪಕ ಚರ್ಚೆ ನಡೆಯುತ್ತಿದೆ. ಲಕ್ಕುಂಡಿ ಗ್ರಾಮದ ಹಿರಿಯರಾದ ವಿರುಪಾಕ್ಷಪ್ಪ ಯಾವಗಲ್ ಅವರು ಟಿವಿ9ಗೆ ನೀಡಿರುವ ಹೇಳಿಕೆಯ ಪ್ರಕಾರ, ಇಲ್ಲಿನ ಜೈನ ಬಸದಿಗಳ ಭಾಗದಲ್ಲಿ ಸಾಕಷ್ಟು ಸರ್ಪಗಳಿದ್ದು, ಅವು ನಿಧಿಗೆ ಕಾವಲು ಕಾಯುತ್ತವೆ. ಪ್ರಸ್ತುತ ನಾಗನಾಥ ದೇವಾಲಯ ಎಂದು ಗುರುತಿಸಲಾಗುವ ಸ್ಥಳ ಮೂಲತಃ ಜೈನ ಬಸದಿ ಎಂಬುದಕ್ಕೆ ಹಲವು ಕುರುಹುಗಳು ದೊರೆತಿವೆ. ಈ ಭಾಗದಲ್ಲಿ ಹಿಂದೆ ಸುಮಾರು ಏಳು…

Read More

Viral Video: ಆಹಾರ ಡೆಲಿವರಿ ಏಜೆಂಟ್​​ಗೆ ಸ್ಮಶಾನದಿಂದ ಬಂತೊಂದು ಕರೆ – Kannada News | Food Delivery Takes Unexpected Turn at Graveyard, Video Sparks Online Buzz

ನವದೆಹಲಿ, ಫೆಬ್ರವರಿ 04: ಸಾಮಾನ್ಯವಾಗಿ ರಾತ್ರಿ ಹೊತ್ತು ಸ್ಮಶಾನದ ಅಕ್ಕಪಕ್ಕದ ಜಾಗದಲ್ಲಿ ಹಾದುಹೋಗುವಾಗಲೇ ಜೀವ ಬಾಯಿಗೆ ಬಂದಂಥಾ ಅನುಭವವಾಗುತ್ತೆ. ಇನ್ನು ಸ್ಮಶಾನದಿಂದಲೇ ಕಾಲ್ ಬಂದರೆ ಭಯವಾಗದೇ ಇದ್ದೀತೆ. ಆಹಾರ ವಿತರಣಾ ಏಜೆಂಟ್​​ಗೆ ತಡರಾತ್ರಿ ಸ್ಮಶಾನದಿಂದ ಕರೆ ಬಂದಿರುವ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಸಣ್ಣ ವಿಡಿಯೋದಲ್ಲಿ ಡೆಲಿವರಿ ಏಜೆಂಟ್​ ಗ್ರಾಹಕನಿಗೆ ಕರೆ ಮಾಡಿ ಆ ಜಾಗವನ್ನು ತಲುಪಿದ್ದರು. ಫೋನ್‌ನಲ್ಲಿರುವ ಮಹಿಳೆ ಶಾಂತವಾಗಿ ಅವರಿಗೆ ಮುಂದೆ ನಡೆಯಲು ಹೇಳುತ್ತಾಳೆ. ನಾಯಿಯನ್ನು ತೋರಿಸುತ್ತಾಳೆ ಮತ್ತು ಚಿಂತಿಸಬೇಡಿ ಎಂದೂ…

Read More

ಸದನದಲ್ಲಿ ವೈಯಕ್ತಿಕವಾಗಿ ಬೈದಾಡಿಕೊಂಡ ಶಾಸಕ ಶರಣು ಸಲಗರ್- ಶಿವಲಿಂಗೇಗೌಡ – Kannada News | Talks War Between BJP MLA Sharanu Salagar And Congress MLA shivalingegowda In Session

ಬೆಂಗಳೂರು, (ಫೆಬ್ರವರಿ 04): ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ, ಲಂಚ ಆರೋಪ ಪ್ರಕರಣ ಸಂಬಂಧ ವಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ (BJP And JDS) ರಾಜ್ಯ ಸರ್ಕಾರದ ವಿರುದ್ಧ ಮುಗಿಬಿದ್ದಿದ್ದು, ಸಚಿವ ತಿಮ್ಮಾಪುರ ರಾಜೀನಾಮೆ ನೀಡಬೇಕೆಂದು ಧರಣಿ ನಡೆಸಿವೆ. ನಿನ್ನೆ(ಫೆಬ್ರವರಿ 03) ಅಹೋರಾತ್ರಿ ಧರಣಿ ನಡೆಸಿ ತಿಮ್ಮಾಪುರ ರಾಜೀನಾಮೆಗೆ ಪಟ್ಟು ಹಿಡಿದಿದ್ದು, ಇಂದು (ಫೆ.04)  ಸಹ ಪ್ರತಿಭಟನೆ ಮುಂದುವರೆಸಿವೆ. ಈ ವೇಳೆ ಬಸವಕಲ್ಯಾಣ  ಬಿಜೆಪಿ  ಶಾಸಕ ಶರಣು ಸಲಗರ್ ಹಾಗೂ ಅರಸೀಕರೆ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ವೈಯಕ್ತಿಕವಾಗಿ ಬೈದಾಡಿಕೊಂಡಿಕೊಂಡಿರುವ…

Read More

ಕರ್ನಾಟಕದಲ್ಲಿ ಮಾನವ-ವನ್ಯಜೀವಿ ಸಂಘರ್ಷಕ್ಕೆ ಶಾಶ್ವತ ತಡೆ; ಕೇಂದ್ರದ ಅರಣ್ಯ ಸಚಿವರ ಜತೆ ಹೆಚ್​ಡಿಕೆ ಮಾತುಕತೆ – Kannada News | Elephant Attacks in Karnataka: HDK Urges Central Govt for Urgent Human Wildlife Conflict Solutions

ಕೇಂದ್ರದ ಅರಣ್ಯ ಸಚಿವರ ಜತೆ ಮಹತ್ವದ ಮಹತ್ವದ ಮಾತುಕತೆ ನಡೆಸಿದ ಹೆಚ್.ಡಿ. ಕುಮಾರಸ್ವಾಮಿ ನವದೆಹಲಿ, ಫೆಬ್ರುವರಿ 04: ಕರ್ನಾಟಕದಲ್ಲಿ ನಿರಂತರವಾಗಿ ನಡೆಯುತ್ತಿರುವ ಮಾನವ-ವನ್ಯಜೀವಿ ಸಂಘರ್ಷಕ್ಕೆ ಶಾಶ್ವತವಾಗಿ ತಡೆಯೊಡ್ಡಿ ಜನರ ಜೇವ ರಕ್ಷಣೆ ಮಾಡುವ ಬಗ್ಗೆ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ (H D Kumaraswamy) ಅವರು, ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆ ಸಚಿವರಾದ ಭೂಪೇಂದ್ರ ಯಾದವ್‌ ಅವರನ್ನು ಭೇಟಿ ಮಾಡಿ ಮಹತ್ವದ ಚರ್ಚೆ ನಡೆಸಿದರು. ಸಂಸತ್‌…

Read More

ವಂಟಮೂರಿ ಮಹಿಳೆ ವಿವಸ್ತ್ರ ಕೇಸ್; 12 ಆರೋಪಿಗಳಿಗೆ 5 ವರ್ಷ ಕಠಿಣ ಶಿಕ್ಷೆ – Kannada News | Vantamuri Woman Assault Case: 12 Accused Get 5 Year Rigorous Imprisonment in Belagavi

ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಿದ ಕೋರ್ಟ್​​Image Credit source: Google ಬೆಳಗಾವಿ, ಫೆಬ್ರುವರಿ 04: ವಂಟಮೂರಿ ಗ್ರಾಮದಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ಪ್ರಕರಣದಲ್ಲಿ 12 ಜನ ಆರೋಪಿಗಳಿಗೆ ಐದು ವರ್ಷಗಳ ಕಠಿಣ ಶಿಕ್ಷೆಯನ್ನು ಬೆಳಗಾವಿಯ ಹೆಚ್ಚುವರಿ 10ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಿಧಿಸಿದೆ. ಈ ಕುರಿತು ನ್ಯಾಯಾಧೀಶ ಎಚ್.ಎಸ್. ಮಂಜುನಾಥ ಅವರು ತೀರ್ಪು ಪ್ರಕಟಿಸಿದ್ದಾರೆ. ಪ್ರಕರಣದಲ್ಲಿ ಒಟ್ಟು 12 ಸೆಕ್ಷನ್‌ಗಳ ಅಡಿಯಲ್ಲಿ ಆರೋಪ ಸಾಬೀತಾಗಿದ್ದು, ಪ್ರತಿಯೊಂದು ಸೆಕ್ಷನ್‌ಗೆ ಒಂದೊಂದು ಸಾವಿರ ರೂಪಾಯಿ ದಂಡವನ್ನೂ ವಿಧಿಸಲಾಗಿದೆ….

Read More