ವಿಜಯಪುರ PSI ಜೊತೆಗೆ ವಿವಾಹಿತ ಮಹಿಳೆ ಪರಾರಿ ಕೇಸ್ಗೆ ಟ್ವಿಸ್ಟ್: ಸತ್ಯ ಬಿಚ್ಚಿಟ್ಟ ಸಂತ್ರಸ್ತೆ – Kannada News | Vijayapura Police Officer Illicit Affair Case: Victim Clarifies Rumours
ವಿಜಯಪುರ, ಡಿಸೆಂಬರ್ 30: ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದವಳ ಜೊತೆ ಪೊಲೀಸ್ ಅಧಿಕಾರಿ ಸಂಬಂಧ ಆರೋಪ ವಿಚಾರವಾಗಿ ಸ್ವತಃ ಮಹಿಳೆಯೇ ಟವಿ9 ಕನ್ನಡದ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಭೀಮಾಶಂಕರ ಪತ್ನಿ ಅನುರಾಧಾ ತನಗಾದ ಸಮಸ್ಯೆಗಳ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದು, ಗಂಡನ ಕಿರುಕುಳದಿಂದ ನಾನು ಆತನಿಂದ ದೂರವಾಗಿದ್ದೇನೆ. ಕುಡಿದು ಬಂದು ಹಲ್ಲೆ ಜೊತೆಗೆ ಕೊಲೆಗೂ ಆತ ಯತ್ನಿಸಿದ್ದ. ಹೀಗಾಗಿ ಗಂಡನಿಂದ ದೂರವಾಗಿ 4 ವರ್ಷಗಳು ಕಳೆದಿವೆ ಎಂದು ತಿಳಿಸಿದ್ದಾರೆ. ಊರಲ್ಲಿದ್ದ ಜಮೀನು ಮಾರಿ ಬೆಂಗಳೂರಿನಲ್ಲಿ ನಿವೇಶನ ಖರೀದಿ…