ಆರ್‌ಎಸ್‌ಎಸ್ ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ – Kannada News | Congress leader Manickam Tagore compares RSS to Al Qaeda
ನವದೆಹಲಿ, ಡಿಸೆಂಬರ್ 28: ಬಿಜೆಪಿ ಮತ್ತು ಆರ್‌ಎಸ್‌ಎಸ್ ಅನ್ನು ಹೊಗಳುವ ಮೂಲಕ ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ (Digvijay Singh) ವಿವಾದ ಸೃಷ್ಟಿಸಿದ್ದರು. ದಿಗ್ವಿಜಯ ಸಿಂಗ್ ಎಕ್ಸ್ (ಹಿಂದಿನ ಟ್ವಿಟರ್)ನಲ್ಲಿ ಹಳೆಯ, ದಿನಾಂಕವಿಲ್ಲದ ಫೋಟೋವನ್ನು ಹಂಚಿಕೊಂಡಿದ್ದರು. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಬಿಜೆಪಿಯ ಹಿರಿಯ ಎಲ್‌ಕೆ ಅಡ್ವಾಣಿ ಅವರೊಂದಿಗೆ ಇದ್ದಾರೆ. ಈ ಪೋಸ್ಟ್ನಲ್ಲಿ ದಿಗ್ವಿಜಯ್ ಸಿಂಗ್ ಆರ್‌ಎಸ್‌ಎಸ್‌ನ ಸಾಂಸ್ಥಿಕ ಬಲವನ್ನು ಶ್ಲಾಘಿಸಿದ್ದರು. ಇದು ಸಾಮಾನ್ಯ ಕಾರ್ಯಕರ್ತರನ್ನು ರಾಜಕೀಯ ನಾಯಕರನ್ನಾಗಿ ಪರಿವರ್ತಿಸಲು ಸಹಾಯ ಮಾಡಿದೆ ಎಂದು ಹೇಳಿದ್ದರು….