Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 28ರ ದಿನಭವಿಷ್ಯ
ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1): ಪರ್ಸನಾಲಿಟಿ ಡೆವಲಪ್ ಮೆಂಟ್ ಸೆಷನ್ ಗಳಲ್ಲಿ ಭಾಗವಹಿಸುವ ನಿರ್ಧಾರ ಮಾಡುತ್ತೀರಿ. ನಿಮ್ಮ ಉದ್ಯೋಗ- ವೃತ್ತಿ ಜೀವನದಲ್ಲಿನ ಬದಲಾವಣೆಗಳು ನಿಧಾನವಾದರೂ ಸ್ಥಿರವಾಗಿ ಆಗಲಿದೆ. ಮನಸ್ಸಿನಲ್ಲಿ ನಡೆಯುತ್ತಿರುವ ಗೊಂದಲಕ್ಕೆ ಸ್ಪಷ್ಟತೆ ಸಿಗುವ ಸಾಧ್ಯತೆ ಇದೆ. ಸಂಬಂಧಗಳಲ್ಲಿನ ತಾಕಲಾಟಗಳಿಂದ ಹೊರಗೆ ಬರುವುದಕ್ಕೆ ಸಾಧ್ಯವಾಗಲಿದೆ. ಹಳೆಯ ವಿಚಾರಗಳು ಮತ್ತೆ ನೆನಪಾಗಲಿವೆ, ಆದರೆ ಅವುಗಳಿಂದ ಪಾಠ ಕಲಿಯುವ ಸಮಯ ಇದು. ಕೆಲಸದ ವಿಷಯದಲ್ಲಿ ಅತಿಯಾದ ಆತುರ ಬೇಡ;…