Madikeri: ಅರಣ್ಯ ಸಿಬ್ಬಂದಿಯಿಂದಲೇ ಮರಗಳ್ಳತನ; ರಕ್ಷಕನೇ ಇಲ್ಲಿ ಭಕ್ಷಕ! – Kannada News | Karnataka Timber Theft: Kodagu Forest Staff Involved in Teak Smuggling
ವಶಪಡಿಸಿಕೊಳ್ಳಲಾಗಿರುವ ಮರದ ದಿಮ್ಮಿಗಳು. ಮಡಿಕೇರಿ, ಡಿಸೆಂಬರ್ 23: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಕೊಡಗಿನಲ್ಲಿ ಅಕ್ಷರಶಃ ಸತ್ಯವಾಗಿದೆ. ಕಾಡಿನಲ್ಲಿರುವ ಅಪಾರ ಬೆಲೆ ಬಾಳುವ ಮರಗಳ ರಕ್ಷಣೆ ಕೆಲಸ ಮಾಡಬೇಕಿದ್ದ ಸಿಬ್ಬಂದಿಯೇ ಅವುಗಳ ಮಾರಣ ಹೋಮ ಮಾಡಿ ಕಳ್ಳತನ ನಡೆಸುತ್ತಿದ್ದ ಎಂಬ ಆಘಾತಕಾರಿ ವಿಷಯ ಇಲಾಖೆ ಕಾರ್ಯಾಚರಣೆ ವೇಳೆ ಬೆಳಕಿಗೆ ಬಂದಿದೆ. ಮರಗಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಹಿಡಿಯಲು ಹೋದ ಅರಣ್ಯ ಇಲಾಖೆಯ ಸಿಬ್ಬಂದಿಯೇ ಘಟನೆಯಿಂದಾಗಿ ಶಾಕ್ ಆಗಿದ್ದಾರೆ. ಘಟನೆ ಏನು? ಮರಗಳ್ಳತನದ ಉದ್ದೇಶದಿಂದ ಗ್ಯಾಂಗೊಂದು ಸೋಮವಾರಪೇಟೆ…