ಛತ್ತೀಸ್‌ಗಢದಲ್ಲಿ ಮರಳು ಮಾಫಿಯಾ ಅಟ್ಟಹಾಸ: ಬಿಜೆಪಿ ನಾಯಕನ ಕಾರಿಗೆ ಬೆಂಕಿ ಹಚ್ಚಿ ಕೊಲೆ – Kannada News | Koriya District Sand Mafia Rivalry: BJP Leader Bharat Singh Burnt Alive in Brutal Attack
ಛತ್ತೀಸ್ಗಢ, ಜೂನ್ 18: ಛತ್ತೀಸ್‌ಗಢದಲ್ಲಿ ಮರಳು ಮಾಫಿಯಾ ಅಟ್ಟಹಾಸ ತಾರಕಕ್ಕೇರಿದ್ದು, ಬಿಜೆಪಿ(BJP) ನಾಯಕನ ಕಾರನ್ನು ಎರಡು ಟ್ರಕ್‌ಗಳ ನಡುವೆ ಸಿಲುಕಿಸಿ ಬೆಂಕಿ ಹಚ್ಚಿರುವ ಘಟನೆ ನಡೆದಿದೆ. ಬಿಜೆಪಿ ನಾಯಕ ಭರತ್ ಸಿಂಗ್ (ಲಲ್ಲಾ ಸಿಂಗ್) ಅವರ ಫಾರ್ಚೂನರ್ ಕಾರನ್ನು ಟ್ರಕ್‌ಗಳ ಮಧ್ಯೆ ಸಿಲುಕಿಸಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿದೆ. ಈ ಭೀಕರ ದುರಂತದಲ್ಲಿ ಭರತ್ ಸಿಂಗ್ ಸೇರಿದಂತೆ ಒಟ್ಟು ಮೂವರು ಸಜೀವ ದಹನವಾಗಿದ್ದಾರೆ. ಸೋನ್ಹತ್ ಪೊಲೀಸ್ ಠಾಣೆ ವ್ಯಾಪ್ತಿಯ ನೌಗೈನ್ ಗ್ರಾಮದಲ್ಲಿ ಮರಳು ಗಣಿಗಾರಿಕೆ ವಿವಾದ ಇತ್ಯರ್ಥಪಡಿಸಲು…