ಭಾರತ vs ಪಾಕಿಸ್ತಾನ್ ಪಂದ್ಯ ರದ್ದಾದ್ರೆ ಯಾರಿಗೆ ನಷ್ಟ? ಹೀಗಿದೆ ಲೆಕ್ಕಾಚಾರ – Kannada News | PCB will suffer heavy loss if Pakistan boycotts ind vs pak match in T20 World Cup 2026
ಟಿ20 ವಿಶ್ವಕಪ್ ಟೂರ್ನಿಗೆ ವೇದಿಕೆ ಸಿದ್ಧವಾಗಿದೆ. ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿರುವ ಈ ಟೂರ್ನಿಯಲ್ಲಿ ಒಟ್ಟು 20 ತಂಡಗಳು ಕಣಕ್ಕಿಳಿಯಲಿವೆ. ಈ 20 ತಂಡಗಳಲ್ಲಿ ಪಾಕಿಸ್ತಾನ್ ಕೂಡ ಒಂದು. ಆದರೆ ಇದೀಗ ಪಾಕಿಸ್ತಾನ್ ತಂಡವು ಭಾರತದ ವಿರುದ್ಧ ಪಂದ್ಯದಿಂದ ಹಿಂದೆ ಸರಿಯುವ ಸೂಚನೆ ನೀಡಿದೆ. ಫೆಬ್ರವರಿ 15 ರಂದು ಕೊಲಂಬೊದಲ್ಲಿ ನಡೆಯಲಿರುವ ಟೀಮ್ ಇಂಡಿಯಾ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಲು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಪ್ಲ್ಯಾನ್ ರೂಪಿಸಿದೆ. ಈ ಮೂಲಕ ಟಿ20 ವಿಶ್ವಕಪ್ನಿಂದ ಬಾಂಗ್ಲಾದೇಶ್ ತಂಡವನ್ನು ಹೊರಗಿಟ್ಟಿರುವುದನ್ನು…