ಬಾಯಲ್ಲಿ ಹೇಳಿದ್ದು 7,000 ಕೋಟಿ ರೂ, ಅಕೌಂಟ್ಗೆ ಬಿದ್ದದ್ದು ಸೊನ್ನೆ; ಇದು ಟ್ರಂಪ್ ಪೀಸ್ ಫಂಡ್ನ 4 ತಿಂಗಳ ಕಥೆ
ವಾಷಿಂಗ್ಟನ್, ಮೇ 28: ಯುದ್ಧಪೀಡಿತ ಗಾಜಾ ಪಟ್ಟಿಯ ಪುನರ್ನಿರ್ಮಾಣಕ್ಕಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರಿ ಸದ್ದುಗದ್ದಲದೊಂದಿಗೆ ಆರಂಭಿಸಿದ್ದ ‘ಬೋರ್ಡ್ ಆಫ್ ಪೀಸ್’ (Board of Peace) ಯೋಜನೆ ಸದ್ಯಕ್ಕೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಜಾಗತಿಕ ನಾಯಕರು ಈ ನಿಧಿಗೆ ಬಿಲಿಯನ್ ಗಟ್ಟಲೆ ಡಾಲರ್ ನೆರವು ನೀಡುವುದಾಗಿ ಭರವಸೆ ನೀಡಿಯೂ ಇದ್ದರು. ಯೋಜನೆ ಆರಂಭವಾಗಿ ನಾಲ್ಕು ತಿಂಗಳು ಕಳೆದರೂ ಇದರ ಅಧಿಕೃತ ಖಾತೆಗೆ ಕೇವಲ ‘ಶೂನ್ಯ’ (Zero) ಹಣ ಜಮೆಯಾಗಿದೆ ಎಂದು ‘ಫೈನಾನ್ಷಿಯಲ್ ಟೈಮ್ಸ್’ (FT) ವರದಿ…