“ಇಷ್ಟು ಕೆಟ್ಟದಾಗಿ ಸೋಲುವ ಬದಲು ಬಾಯ್ಕಾಟ್ ಮಾಡಿದ್ದೇ ಲೇಸಾಗಿತ್ತು”: ಪಾಕ್ನ್ನು ಹಿಗ್ಗಾಮುಗ್ಗಾ ಜಾಡಿಸಿದ ನೆಟ್ಟಿಗರು – Kannada News | IND vs PAK T20 World Cup: Netizens Troll Pakistan with Hilarious Memes After 61 Run Defeat
ನಿನ್ನೆ (ಫೆಬ್ರವರಿ 15, 2026) ಕೊಲಂಬೋದ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತವು ಪಾಕಿಸ್ತಾನವನ್ನು 61 ರನ್‌ಗಳ ಬೃಹತ್ ಅಂತರದಿಂದ ಸೋಲಿಸಿದ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಮೀಮ್‌ಗಳ ಸುರಿಮಳೆಯಾಗುತ್ತಿದೆ. ಭಾರತ ನೀಡಿದ 176 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನ ಕೇವಲ 114 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಮುಖಭಂಗ ಅನುಭವಿಸಿದೆ. ಈ ಸೋಲನ್ನು ಭಾರತೀಯ ಅಭಿಮಾನಿಗಳು ಅತ್ಯಂತ ಹಾಸ್ಯಮಯವಾಗಿ ಸಂಭ್ರಮಿಸುತ್ತಿದ್ದಾರೆ. ಈ ಪಂದ್ಯದ ಹೈಲೈಟ್ ಎಂದರೆ ಪಾಕಿಸ್ತಾನದ ಸ್ಪಿನ್ನರ್ ಉಸ್ಮಾನ್ ತಾರಿಕ್ ಅವರ ವಿಚಿತ್ರ…