ಬೆಂಗಳೂರಿನಲ್ಲಿ ಶಾಲಾ ಬಸ್ ಚಾಲಕರ ತಪಾಸಣೆ: ಮದ್ಯಪಾನ ಮಾಡಿ ಸಿಕ್ಕಿಬಿದ್ದ 26 ಚಾಲಕರು – Kannada News | Bengaluru Traffic Police found 26 Drunk School Bus Drivers while special operation
ಬೆಂಗಳೂರು, ಜನವರಿ 23: ನಗರದ ಎಲ್ಲಾ ಠಾಣಾ ವ್ಯಾಪ್ತಿಯಲ್ಲಿ ಸಂಚಾರಿ ಪೊಲೀಸರು ವಿಶೇಷ ಕಾರ್ಯಾಚರಣೆ ಮಾಡಿದ್ದು, ಒಟ್ಟು 5110 ಶಾಲಾ ಬಸ್ ಚಾಲಕರ ತಪಾಸಣೆ ಮಾಡಿದ್ದಾರೆ. ಈ ವೇಳೆ 26 ಶಾಲಾ ಬಸ್ ಚಾಲಕರು ಮದ್ಯಸೇವಿಸಿರೋದು ಪತ್ತೆ ಆಗಿದೆ. ಮದ್ಯಸೇವಿಸಿ ವಾಹನ ಚಲಾಯಿಸುತ್ತಿದ್ದ 26 ಚಾಲಕರ ಡಿಎಲ್ ರದ್ದುಗೊಳಿಸಲು ಆರ್ಟಿಒಗೆ ಪೊಲೀಸರು ವರದಿ ಸಲ್ಲಿಸಿದ್ದಾರೆ. ಭಾರತೀಯ ಮೋಟಾರ್ ವಾಹನ ಕಾಯ್ದೆಯಡಿ ಕೇಸ್ ದಾಖಲಿಸಲಾಗಿದೆ. ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ. Source link