ದೆಹಲಿಯಲ್ಲಿ ನಕಲಿ ಕೆವೈಸಿ ಮೂಲಕ ಚಹಾ ವ್ಯಾಪಾರಿಗೆ 90,000 ರೂ. ವಂಚನೆ; ಮೂವರ ಬಂಧನ
ನವದೆಹಲಿ, ಮೇ 27: ಮೊಬೈಲ್ ಆಪ್‌ಗಳಲ್ಲಿ ಕೆವೈಸಿ (KYC) ಅಪ್‌ಡೇಟ್ ಮಾಡುವ ನೆಪದಲ್ಲಿ ಚಹಾ ವ್ಯಾಪಾರಿಯೊಬ್ಬರಿಂದ 90,000 ರೂ. ಹಣ ದೋಚಿದ್ದ ಅಂತಾರಾಜ್ಯ ಸೈಬರ್ ವಂಚಕರ ಜಾಲವನ್ನು ದೆಹಲಿ ಪೊಲೀಸರು ಪತ್ತೆಹಚ್ಚಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹರಿಯಾಣ ಮತ್ತು ಹಿಮಾಚಲ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಂಚಕನೊಬ್ಬ ತಾನು ಪ್ರಮುಖ ಡಿಜಿಟಲ್ ಪೇಮೆಂಟ್ ಕಂಪನಿಯೊಂದರ ಉದ್ಯೋಗಿ ಎಂದು ಪರಿಚಯಿಸಿಕೊಂಡು ಚಹಾ ಅಂಗಡಿಗೆ ಬಂದಿದ್ದ. ಆತ ವ್ಯಾಪಾರಿಯ ಮೊಬೈಲ್‌ನಲ್ಲಿ ಪೇಮೆಂಟ್ ಆಪ್‌ನ…