ಭಾರತಕ್ಕಿಂತ ವಿದೇಶದಲ್ಲಿ ಹೆಚ್ಚು ಕಲೆಕ್ಷನ್ ಮಾಡಿದ ‘ದೃಶ್ಯಂ 3’; ಒಟ್ಟೂ ಗಳಿಕೆ ಎಷ್ಟು? – Kannada News | Drishyam 3 Box Office: Mohanlal’s Thriller Nears 200 Crore Worldwide in 6 Days
ಮಲಯಾಳಂ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ಸರಣಿ ಎನಿಸಿಕೊಂಡಿರುವ ‘ದೃಶ್ಯಂ’ ಚಿತ್ರದ ಮೂರನೇ ಭಾಗ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುತ್ತಿದೆ. ಮಾಲಿವುಡ್ ಸೂಪರ್ಸ್ಟಾರ್ ಮೋಹನ್ಲಾಲ್ ನಟನೆಯ ‘ದೃಶ್ಯಂ 3’ (Drishyam 3) ಬಿಡುಗಡೆಯಾದ ಆರನೇ ದಿನವೂ ತನ್ನ ಪಾರುಪತ್ಯವನ್ನು ಮುಂದುವರಿಸಿದೆ. ವಾರದ ದಿನಗಳಲ್ಲಿ ಸಹಜವಾಗಿ ಕಲೆಕ್ಷನ್ನಲ್ಲಿ ಸ್ವಲ್ಪ ಕುಸಿತ ಕಂಡುಬಂದಿದ್ದರೂ, ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಭದ್ರವಾದ ಹಿಡಿತ ಸಾಧಿಸಿದೆ. ಆರನೇ ದಿನವಾದ ಮಂಗಳವಾರ (ಮೇ 26) ಈ ಚಿತ್ರ ಭಾರತದಾದ್ಯಂತ ಒಟ್ಟು 4,668 ಪ್ರದರ್ಶನಗಳನ್ನು ಕಂಡಿದ್ದು, ಬರೋಬ್ಬರಿ 6.45 ಕೋಟಿ…