Headlines

ಥಿಯೇಟರ್ ಬಳಿಕ ಒಟಿಟಿಯಲ್ಲೂ ಒಂದೇ ದಿನ ‘45’-‘ಮಾರ್ಕ್’ ಸಿನಿಮಾ ರಿಲೀಸ್ – Kannada News | Mark and 45 OTT Release: Sudeep and Shivanna Films Stream Same Day on Jio Hotstar

ಶಿವರಾಜ್​​ಕುಮಾರ್, ರಾಜ್​ ಬಿ ಶೆಟ್ಟಿ ಹಾಗೂ ಉಪೇಂದ್ರ ನಟನೆಯ ‘45’ ಹಾಗೂ ಸುದೀಪ್ ನಟನೆಯ ‘ಮಾರ್ಕ್’ ಸಿನಿಮಾ ಒಂದೇ ದಿನ ಥಿಯೇಟರ್​​​ನಲ್ಲಿ ರಿಲೀಸ್ ಆಗಿದ್ದವು. ಈ ಚಿತ್ರಗಳು ತೆರೆಗೆ ಬಂದಿದ್ದು ಡಿಸೆಂಬರ್ 25ರಂದು. ಎರಡೂ ಸಿನಿಮಾಗಳು ಉತ್ತಮ ಪ್ರದರ್ಶನ ಕಂಡಿದ್ದು, ಈಗ ಒಟಿಟಿಯಲ್ಲಿ ಈ ಸಿನಿಮಾಗಳು ರಿಲೀಸ್ ಆಗುತ್ತಿವೆ. ವಿಶೇಷ ಎಂದರೆ ಒಂದೇ ದಿನ ಚಿತ್ರಗಳು ಒಟಿಟಿಯಲ್ಲಿ ಪ್ರಸಾರ ಆರಂಭಿಸಲಿವೆ. ಮಾರ್ಕ್ ಬಾಕ್ಸ್ ಆಫೀಸ್​​​ನಲ್ಲಿ 50 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದ ಖ್ಯಾತಿ ‘ಮಾರ್ಕ್’ ಚಿತ್ರಕ್ಕೆ…

Read More

ದುನಿಯಾ ವಿಜಯ್ ನಟನೆಯನ್ನು ಮೆಚ್ಚಿ ಕೊಂಡಾಡಿದ ತೆಲುಗಿನ ಸ್ಟಾರ್ ನಿರ್ದೇಶಕ – Kannada News | Puri Jagannath praised Duniya Vijay’s acting in Slum Dog movie

ದುನಿಯಾ ವಿಜಯ್ (Duniya Vijay) ಕನ್ನಡದ ಜನಪ್ರಿಯ ನಾಯಕ ನಟ ಮತ್ತು ನಿರ್ದೇಶಕ. ತೀರ ಸಣ್ಣ ಪಾತ್ರಗಳಲ್ಲಿ ನಟಿಸಲು ಆರಂಭಿಸಿ, ವಿಲನ್ ಆಗಿ ಬಳಿಕ ನಾಯಕನಾಗಿ ಮಿಂಚಿದವರು ದುನಿಯಾ ವಿಜಯ್. ಹಲವು ಸ್ಪುರದ್ರೂತಿ ನಾಯಕ ನಟರ ನಡುವೆ ತಮ್ಮ ನಟನೆ, ಆಕ್ಷನ್ ಮಾಡುವ ಸಾಮರ್ಥ್ಯದಿಂದ ಪ್ರತ್ಯೇಕವಾಗಿ ಗುರುತಿಸಿಕೊಂಡು ಈಗಲೂ ಚಾಲ್ತಿಯಲ್ಲಿರುವ ನಾಯಕರಲ್ಲಿ ಒಬ್ಬರು ಎನಿಸಿಕೊಂಡಿದ್ದಾರೆ. ಇತ್ತೀಚೆಗೆ ಕನ್ನಡ ಮಾತ್ರವಲ್ಲದೆ ಪರ ಭಾಷೆ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ ದುನಿಯಾ ವಿಜಯ್. ಇದೀಗ ನೆರೆಯ ತೆಲುಗು ಚಿತ್ರರಂಗದ ಸ್ಟಾರ್ ನಿರ್ದೇಶಕ ದುನಿಯಾ…

Read More

ರೇವಣ್ಣನ ಮಾತಿಗೆ ಇದ್ದಕ್ಕಿದ್ದಂತೆ ಕೋಪಗೊಂಡ ಕುಮಾರಸ್ವಾಮಿ, ವಿಡಿಯೋ ನೋಡಿ – Kannada News | HD Kumaraswamy Angry On His brother HD Revanna for disturbing During press conference In Hassan

ಹಾಸನ, (ಜನವರಿ 21): ಇದೇ ಜನವರಿ 24ರಂದು ಜೆಡಿಎಸ್​ ಹಾಸನದಲ್ಲಿ (Hassan) ಬೃಹತ್ ಸಮಾವೇಶ ಆಯೋಜಿಸಿದೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ, ಕೇಂದ್ರ ಸಚಿವ ಎಚ್​​​ಡಿ ಕುಮಾರಸ್ವಾಮಿ (HD Kumaraswamy )ಅವರು ಇಂದು (ಜನವರಿ 21) ಹಾಸನಕ್ಕೆ ಭೇಟಿ ನೀಡಿ ಸಮಾವೇಶದ ಪೂರ್ವ ಸಿದ್ಧತೆಗಳನ್ನು ಪರಿಶೀಲನೆ ಮಾಡಿದರು. ಬಳಿಕ ಎಚ್​​​ಡಿಕೆ ಸುದ್ದಿಗೋಷ್ಠಿ ನಡೆಸಿ ಮಾತನಾಡುವ ವೇಳೆ ಸಹೋದರ ಎಚ್​​​ಡಿ ರೇವಣ್ಣ  (HD Revanna) ಮೇಲೆ ಕೋಪಗೊಂಡಿರುವ ಪ್ರಸಂಗ ಜರುಗಿದೆ. ಹೌದು…ಕುಮಾರಸ್ವಾಮಿ ಮಾತನಾಡುವಾಗ ಪಕ್ಕದಲ್ಲೇ ಕುಳಿತ್ತಿದ್ದ ರೇವಣ್ಣ ಸಹ…

Read More

ಅಬ್ಬರ ಸಿಡಿಲಬ್ಬರ… ವಿಶ್ವ ದಾಖಲೆಯ ಸೆಂಚುರಿ ಸಿಡಿಸಿದ ಆಸ್ಟ್ರೇಲಿಯಾ ದಾಂಡಿಗ – Kannada News | Will Malajczuk smashed fastest century in Under 19 World Cup history

ಅಂಡರ್-19 ವಿಶ್ವಕಪ್​​ನಲ್ಲಿ ಹೊಸ ವಿಶ್ವ ದಾಖಲೆ ನಿರ್ಮಾಣವಾಗಿದೆ. ಈ ದಾಖಲೆ ನಿರ್ಮಿಸಿರುವುದು ಆಸ್ಟ್ರೇಲಿಯಾದ ಯುವ ದಾಂಡಿಗ ವಿಲ್ ಮಲಾಚೆಕ್ (Will Malajczuk). ಅದು ಕೂಡ ಸಿಡಿಲಬ್ಬರದ ಸೆಂಚುರಿ ಸಿಡಿಸುವ ಮೂಲಕ ಎಂಬುದು ವಿಶೇಷ.  ನಮೀಬಿಯಾದ ವಿಂಡ್​ಹೋಕ್​ನಲ್ಲಿರುವ ಎಸಿಜಿ ಮೈದಾನದಲ್ಲಿ ನಡೆದ ಅಂಡರ್​-19 ವಿಶ್ವಕಪ್​​ನ 16ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಹಾಗೂ ಜಪಾನ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಜಪಾನ್ ತಂಡವು 50 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 201 ರನ್ ಕಲೆಹಾಕಿತು….

Read More

ಮನೆಗಳ ಮುಂದೆ ನಿಲ್ಲಿಸಿದ ಕಾರುಗಳ ಮೇಲೆ ಕಲ್ಲು ತೂರಾಟ; ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ – Kannada News | Man Pelts Stone On Parked Cars At Bharath Colony In Davangere, Incident Caught On CCTV

ದಾವಣಗೆರೆ, ಜನವರಿ 21: ಭರತ್ ಕಾಲೋನಿಯಲ್ಲಿ ಡೇವಿಡ್ ಎಂಬ ವ್ಯಕ್ತಿ ನಿಲ್ಲಿಸಿದ್ದ ಕಾರುಗಳ ಮೇಲೆ ಪದೇ ಪದೇ ಕಲ್ಲು ತೂರಾಟ ನಡೆಸುತ್ತಿದ್ದು, ಐದಾರು ವಾಹನಗಳಿಗೆ ಹಾನಿಯಾಗಿದೆ. ಈ ಘಟನೆ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಡೇವಿಡ್ ಕಲ್ಲು ತೂರಿ ಓಡಿಹೋಗುವ ದೃಶ್ಯ ಸ್ಪಷ್ಟವಾಗಿ ಗೋಚರಿಸಿದೆ. ಆರ್‌ಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಕೃತ್ಯ ನಡೆದಿದೆ. ಈ ಹಿಂದೆಯೂ ಡೇವಿಡ್ ಇಂತಹ ಕೃತ್ಯಗಳನ್ನು ಎಸಗಿದ್ದಾನೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕಳೆದ ಕೆಲವು ತಿಂಗಳುಗಳಲ್ಲಿ ಬೈಕ್‌ಗಳಿಗೆ ಹಾನಿ ಮಾಡಿದ ಪ್ರಕರಣಗಳೂ ದಾಖಲಾಗಿದ್ದವು…

Read More

ವೃದ್ಧ ದಂಪತಿ ನಿಗೂಢ ಸಾವಿನ ರಹಸ್ಯ ರಿವೀಲ್​​: ಸಂಬಂಧಿಕನಿಂದಲೇ ನಡೀತು ಪೈಶಾಚಿಕ ಕೃತ್ಯ – Kannada News | Bhadravati Double Murder: Relative Doctor Arrested for Elderly Couple’s Death and Robbery

ವೃದ್ಧ ದಂಪತಿ ಕೊಂದ ಆರೋಪಿ ಅರೆಸ್ಟ್​​ ಶಿವಮೊಗ್ಗ, ಜನವರಿ 21: ಭದ್ರಾವತಿಯ ಭೂತನಗುಡಿ ಬಡಾವಣೆಯಲ್ಲಿ ಮನೆಯಲ್ಲಿಯೇ ವೃದ್ಧ ದಂಪತಿ ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆಯನ್ನು ಪೊಲೀಸರು ಭೇದಿಸಿದ್ದಾರೆ. ಸಂಬಂಧಿಕ ಮತ್ತು ವೈದ್ಯನಾಗಿರುವ ಡಾ. ಮಲ್ಲೇಶ್​​ ಎಂಬಾತನೇ ಚಂದ್ರಪ್ಪ(80) ಮತ್ತು ಅವರ ಪತ್ನಿ ಜಯಮ್ಮ(75) ಅವರನ್ನು ಕೊಲೆ ಮಾಡಿರೋದು ತನಿಖೆ ವೇಳೆ ಬಯಲಾಗಿದೆ. ಪಕ್ಕಾ ಪ್ಲ್ಯಾನ್​​ ಮಾಡಿ ಕೃತ್ಯ ಎಸಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆ ಮಾಡಿ ಲಕ್ಷಾಂತರ ರೂ. ದರೋಡೆ ತಮ್ಮನ ಮಗನಾಗಿರುವ ಡಾ . ಮಲ್ಲೇಶ್​​ನಿಂದಲೇ ಮೃತ…

Read More

Video: ಶಾಲೆಗೆ ಹೋಗಲ್ಲ ಎಂದು ಹಠ ಹಿಡಿದ ಪುಟ್ಟ ಬಾಲಕನನ್ನು ಎತ್ಕೊಂಡು ಹೋದ ತಾಯಿ – Kannada News | Mother takes little boy to school who refuses to go

ಮಕ್ಕಳು (children) ಶಾಲೆಗೆ ಹೋಗುವುದಿಲ್ಲವೆಂದು ಹಠ ಹಿಡಿದಾಗ ಹೆತ್ತವರು ಪುಲಾಯಿಸಿ ಶಾಲೆಗೆ ಕಳಿಸ್ತಾರೆ. ಇನ್ನು ಕೆಲವೊಮ್ಮೆ ಮಕ್ಕಳಿಗೆ ಹೆತ್ತವರ ಕೈಯಲ್ಲಿ ಹೊದೆ ಬೀಳೋದಿದೆ. ಈ ವಿಡಿಯೋ ನೋಡಿದ್ರೆ ನಿಮಗೆ ನಿಮ್ಮ ಬಾಲ್ಯವಂತು ಖಂಡಿತ ನೆನಪಾಗದೇ ಇರದು. ಶಾಲೆಗೆ ಹೋಗಲ್ಲ ಎಂದು ಹಠ ಹಿಡಿದಾಗ ನಿಮ್ಮ ಅಮ್ಮನೂ ಕೂಡ ಹೀಗೆಯೇ ಮಾಡಿರುತ್ತಾಳೆ. ಹೌದು ಪುಟ್ಟ ಬಾಲಕನು ಶಾಲೆಗೆ ಹೋಗಲ್ಲ ಎಂದು ಹಠ ಹಿಡಿದಿದ್ದು, ಪುಟಾಣಿಯ ತಾಯಿ ಪಟ್ಟು ಹಿಡಿದು ಶಾಲೆಗೆ ಕರೆದುಕೊಂಡು ಹೋಗುವ ವಿಡಿಯೋ  ವೈರಲ್‌ ಆಗಿದೆ. ಈ…

Read More

Video: ಪ್ರಯಾಗ್​ರಾಜ್​ನಲ್ಲಿ ವಾಯುಪಡೆಯ ಸಣ್ಣ ವಿಮಾನ ಪತನ – Kannada News | Close Call in the Skies: IAF Microlight Goes Down in Prayagraj, Crew Walks Away Safe

ಪ್ರಯಾಗ್​ರಾಜ್, ಜನವರಿ 21: ಭಾರತೀಯ ವಾಯುಪಡೆಯ (ಐಎಎಫ್) ಮೈಕ್ರೋಲೈಟ್ ವಿಮಾನವು ಬುಧವಾರ  ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಪತನಗೊಂಡಿದೆ. ಇಬ್ಬರೂ ಪೈಲಟ್‌ಗಳು ಸುರಕ್ಷಿತವಾಗಿದ್ದಾರೆ ಎಂದು ವರದಿಯಾಗಿದೆ. ಈ ಘಟನೆ ಮಧ್ಯಾಹ್ನ 12 ಗಂಟೆ ಸುಮಾರಿಗೆ ನಡೆದಿದೆ. ಪ್ರಯಾಗ್‌ರಾಜ್‌ನಿಂದ ಸುಮಾರು 12 ಕಿ.ಮೀ ದೂರದಲ್ಲಿರುವ ಕೆ.ಪಿ. ಕಾಲೇಜು ಬಳಿ ವಿಮಾನವು ಕೆರೆಗೆ ಅಪ್ಪಳಿಸಿದೆ. ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ.. ವಿಮಾನ ಪತನಗೊಳ್ಳುತ್ತಿದ್ದಂತೆ ಸ್ಥಳೀಯರಿಗೆ ದೊಡ್ಡ ಶಬ್ದ ಕೇಳಿಬಂದಿದೆ. ಈ ಘಟನೆಯಿಂದ ಆ ಪ್ರದೇಶದಲ್ಲಿ ಭಯd ವಾತಾವರಣ ನಿರ್ಮಾಣವಾಗಿತ್ತು….

Read More

ಮೈಸೂರು ರಸ್ತೆಯಲ್ಲಿ ಲ್ಯಾಂಬೋರ್ಗಿನಿ ಚಾಲಕನ ಹುಚ್ಚಾಟ: ವೈರಲ್ ವಿಡಿಯೋ ಆಧರಿಸಿ ಚಾಲಕನ ವಿರುದ್ಧ ಎಫ್‌ಐಆರ್ – Kannada News | Bengaluru Lamborghini Reckless Driving on Mysore Road FIR Filed by Kengeri Police

ಮೈಸೂರು ರಸ್ತೆಯಲ್ಲಿ ಲ್ಯಾಂಬೋರ್ಗಿನಿ ಚಾಲಕನ ಹುಚ್ಚಾಟ ಬೆಂಗಳೂರು, ಜನವರಿ 21: ನಗರದ ಮೈಸೂರು ಮುಖ್ಯರಸ್ತೆಯಲ್ಲಿ ದುಬಾರಿ ಲ್ಯಾಂಬೋರ್ಗಿನಿ ಕಾರನ್ನು ಅತಿವೇಗ ಹಾಗೂ ಅಜಾಗರೂಕವಾಗಿ ಚಲಾಯಿಸಿದ ಘಟನೆ ನಡೆದಿದ್ದು, ಸಾರ್ವಜನಿಕರ ಪ್ರಾಣಕ್ಕೆ ಅಪಾಯ ತಂದ ಆರೋಪದ ಮೇಲೆ ಕೆಂಗೇರಿ ಸಂಚಾರ ಪೊಲೀಸ್ ಠಾಣೆಯಲ್ಲಿ  (Bengaluru) ಪ್ರಕರಣ ದಾಖಲಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವಿಡಿಯೋವನ್ನು ಆಧರಿಸಿ ಪೊಲೀಸರು ಸ್ವಯಂಪ್ರೇರಿತವಾಗಿ ಕ್ರಮ ಕೈಗೊಂಡಿದ್ದಾರೆ. ಎಕ್ಸ್​ನಲ್ಲಿ ಚಾಲಕನ ಹುಚ್ಚಾಟದ ದೃಶ್ಯ ವೈರಲ್ ಎಫ್‌ಐಆರ್‌ನಲ್ಲಿ ಉಲ್ಲೇಖಿಸಿರುವಂತೆ, ಕೆಂಗೇರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ…

Read More

ನಾನ್ಯಾವತ್ತೂ ಹೂಡಿಕೆ ಬಗ್ಗೆ ಮಾತನಾಡಲ್ಲ, ನಕಲಿ ವಿಡಿಯೋಗಳ ಬಗ್ಗೆ ಎಚ್ಚರದಿಂದಿರಿ: ಸುಧಾ ಮೂರ್ತಿ – Kannada News | Sudha Murthy, says she won’t talk about investment, flags deepfake videos circulating online

ಬೆಂಗಳೂರು, ಜನವರಿ 21: ಡೀಪ್ ಫೇಕ್ ತಂತ್ರಜ್ಞಾನ ಬಂದ ಬಳಿಕ ಸೋಷಿಯಲ್ ಮೀಡಿಯಾಗಳಲ್ಲಿ ನಾನಾ ಸೆಲಬ್ರಿಟಿಗಳ ವಿಡಿಯೋಗಳು ಹರಿದಾಡುತ್ತಿವೆ. ಇಷ್ಟು ಹಣ ಹೂಡಿಕೆ ಮಾಡಿ, ಇಷ್ಟು ಲಾಭ ಮಾಡಿ ಎಂಬಿತ್ಯಾದಿ ಪ್ರಲೋಭನೆಗಳನ್ನು ಈ ವಿಡಿಯೋಗಳಲ್ಲಿ ಕಾಣಬಹುದು. ಇಂಥ ಬಹುತೇಕ ವಿಡಿಯೋಗಳು ಡೀಪ್​ಫೇಕ್ (Deepfake) ಬಳಸಿ ತಯಾರಾದ ನಕಲಿ ವಿಡಿಯೋಗಳೇ ಆಗಿವೆ. ನಿರ್ಮಲಾ ಸೀತಾರಾಮನ್, ಸುಧಾ ಮೂರ್ತಿ (Sudha Murthy) ಇತ್ಯಾದಿ ಗಣ್ಯ ವ್ಯಕ್ತಿಗಳೇ ಮಾತನಾಡಿರುವಂತೆ ಈ ವಿಡಿಯೋಗಳಿವೆ. ಸ್ವತಃ ನರೇಂದ್ರ ಮೋದಿ ಅವರನ್ನೇ ಬಿಟ್ಟಿಲ್ಲ. ಇನ್ಫೋಸಿಸ್ ಪ್ರತಿಷ್ಠಾನದ…

Read More