ಶಾಂತಿ ಮಾತುಕತೆ ನಡುವೆಯೇ ಇರಾನ್‌ನಲ್ಲಿ ಅಮೆರಿಕ ದಾಳಿ, ಕ್ಷಿಪಣಿ ಉಡಾವಣಾ ತಾಣ, ಮೈನ್ ಬೋಟ್ಗಳೇ ಟಾರ್ಗೆಟ್ – Kannada News | US Attacks Iran Missile Sites and Mine Boats Amidst Peace Talks: Self Defense Claim
ವಾಷಿಂಗ್ಟನ್, ಮೇ 26: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಇರಾನ್ ಜೊತೆಗಿನ ಮಾತುಕತೆಗಳು ಚೆನ್ನಾಗಿ ನಡೆಯುತ್ತಿದೆ ಎಂದು ಹೇಳಿದ ಕೆಲವೇ ಗಂಟೆಗಳಲ್ಲಿ, ಅಮೆರಿಕ ಸೇನೆಯು ದಕ್ಷಿಣ ಇರಾನ್‌ನಲ್ಲಿ ಭೀಕರ ದಾಳಿ ನಡೆಸಿದೆ. ಹಾರ್ಮುಜ್ ಜಲಸಂಧಿಯ ಬಳಿ ಕ್ಷಿಪಣಿ ಉಡಾವಣಾ ತಾಣಗಳು ಮತ್ತು ಗಣಿಗಳನ್ನು ಇರಿಸಲು ಯತ್ನಿಸುತ್ತಿದ್ದ ಇರಾನಿನ ದೋಣಿಗಳನ್ನು ಗುರಿಯಾಗಿಸಿಕೊಂಡು ಈ ಸ್ವ-ರಕ್ಷಣಾ ದಾಳಿಗಳನ್ನು ನಡೆಸಿರುವುದಾಗಿ ಯುಎಸ್ ಸೇನೆ ಪ್ರಕಟಿಸಿದೆ. ಇರಾನ್ ಪಡೆಗಳಿಂದ ಎದುರಾಗಬಹುದಾದ ನೇರ ಬೆದರಿಕೆಗಳಿಂದ ಅಮೆರಿಕದ ಸೈನಿಕರನ್ನು ರಕ್ಷಿಸಲು ಈ ಕ್ರಮ ಕೈಗೊಳ್ಳಲಾಗಿದೆ…