VIDEO: ಪಾಕ್ ಆಟಗಾರನ ಕ್ಯಾಚ್ಗೆ ಕ್ರಿಕೆಟ್ ಪ್ರೇಮಿಗಳು ಮೂಕವಿಸ್ಮಿತ
ಅಂಡರ್-19 ವಿಶ್ವಕಪ್ನಲ್ಲಿ ಪಾಕಿಸ್ತಾನ್ ತಂಡದ ಯುವ ಆಟಗಾರ ಅಹ್ಮದ್ ಹುಸೇನ್ ಹಿಡಿದ ಕ್ಯಾಚ್ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಪಂದ್ಯದಲ್ಲಿ ಸ್ಕಾಟ್ಲೆಂಡ್ ಬ್ಯಾಟ್ಸ್ಮನ್ ಮನು ಸಾರಸ್ವತ್, ಪಾಕ್ ಬೌಲರ್ ಮೊಹಮ್ಮದ್ ಸಯ್ಯಮ್ ಅವರ ಎಸೆತದಲ್ಲಿ ಲಾಫ್ಟೆಡ್ ಶಾಟ್ ಬಾರಿಸಿದ್ದರು. ಆದರೆ ಚೆಂಡು ಲಾಂಗ್ ಆಫ್ ಕಡೆಗೆ ಹೋಗುವ ಬದಲು, ಗಾಳಿಯಲ್ಲಿ ಥರ್ಡ್ ಮ್ಯಾನ್ ಕಡೆಗೆ ಹಾರಿತು. ಈ ವೇಳೆ ಶಾರ್ಟ್ ಥರ್ಡ್ ಮ್ಯಾನ್ ಸ್ಥಾನದಲ್ಲಿ ಫೀಲ್ಡಿಂಗ್ನಲ್ಲಿದ್ದ ಅಹ್ಮದ್ ಹುಸೇನ್ ಹಿಂದಕ್ಕೆ ಓಡಿ ಹೋಗಿ ಅದ್ಭುತ…