ಪಾಕಿಸ್ತಾನದ ಸೈನಿಕರನ್ನು ಕರೆದೊಯ್ಯುತ್ತಿದ್ದ ರೈಲಿನ ಮೇಲೆ ಆತ್ಮಾಹುತಿ ಬಾಂಬ್ ದಾಳಿ; 24 ಜನ ಸಾವು, 70 ಮಂದಿಗೆ ಗಾಯ – Kannada News | 24 killed 70 injured as car with explosives rams train carrying pakistan soldiers in quetta
ಇಸ್ಲಮಾಬಾದ್, ಮೇ 24: ಪಾಕಿಸ್ತಾನದ (Pakistan) ಬಲೂಚಿಸ್ತಾನ ಪ್ರಾಂತ್ಯದ ರಾಜಧಾನಿಯಾದ ಕ್ವೆಟ್ಟಾ ನಗರದ ರೈಲ್ವೆ ಹಳಿ ಬಳಿ ಇಂದು ಭೀಕರ ಆತ್ಮಾಹುತಿ ಬಾಂಬ್ ಸ್ಫೋಟ ಸಂಭವಿಸಿದೆ. ಈ ಭೀಕರ ದುರಂತದಲ್ಲಿ 24 ಜನರು ಸಾವನ್ನಪ್ಪಿದ್ದು, 70ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಮತ್ತು ರಕ್ಷಣಾ ಪಡೆಗಳ ಮೂಲಗಳು ಖಚಿತಪಡಿಸಿವೆ. ಕ್ವೆಟ್ಟಾದ ಚಮನ್ ಫಾಟಕ್ (Chaman Phatak) ರೈಲ್ವೆ ನಿಲ್ದಾಣದ ಬಳಿ ಈ ಸ್ಫೋಟ ಸಂಭವಿಸಿದೆ. ಭದ್ರತಾ ಸಿಬ್ಬಂದಿ ಮತ್ತು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ರೈಲನ್ನು ಗುರಿಯಾಗಿಸಿಕೊಂಡು…