ಪಾಕಿಸ್ತಾನದಲ್ಲಿ ಕುಳಿತು ಪಹಲ್ಗಾಮ್ನಲ್ಲಿ ಲಷ್ಕರ್ ಉಗ್ರರು ಭಯೋತ್ಪಾದಕ ದಾಳಿ ನಡೆಸಿದ್ಹೇಗೆ? ಎನ್ಐಎ ಚಾರ್ಜ್ಶೀಟ್ನಲ್ಲೇನಿದೆ? – Kannada News | National Investigation Agency Chargesheet Details Alleged Cross Border Role in Pahalgam Attack
ನವದೆಹಲಿ, ಮೇ 21: ಜಮ್ಮು ಮತ್ತು ಕಾಶ್ಮೀರದ ಪ್ರಸಿದ್ಧ ಪ್ರವಾಸಿ ತಾಣ ಪಹಲ್ಗಾಮ್(Pahalgam)ನಲ್ಲಿ 2025ರ ಏಪ್ರಿಲ್ನಲ್ಲಿ 26 ಪ್ರವಾಸಿಗರನ್ನು ಬಲಿ ಪಡೆದಿದ್ದ ಭಯೋತ್ಪಾದಕ ದಾಳಿಯನ್ನು ಸಂಪೂರ್ಣವಾಗಿ ಪಾಕಿಸ್ತಾನದಿಂದಲೇ ನಿಯಂತ್ರಿಸಲಾಗಿತ್ತು ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ನ್ಯಾಯಾಲಯಕ್ಕೆ ಸಲ್ಲಿಸಿರುವ ತನ್ನ ಚಾರ್ಜ್‌ಶೀಟ್‌ನಲ್ಲಿ ಬಹಿರಂಗಪಡಿಸಿದೆ. ಲಾಹೋರ್‌ನಿಂದ ರಿಯಲ್-ಟೈಮ್ ಕಮಾಂಡ್ ನೀಡಿದ್ದ ಲಂಗ್ಡಾ ಲಷ್ಕರ್-ಎ-ತೊಯ್ಬಾ (LeT) ಮತ್ತು ಅದರ ಅಂಗಸಂಸ್ಥೆಯಾದ ದಿ ರೆಸಿಸ್ಟೆನ್ಸ್ ಫ್ರಂಟ್ (TRF) ಸಂಘಟನೆಯ ಮೋಸ್ಟ್ ವಾಂಟೆಡ್ ಉಗ್ರ ಸೈಫುಲ್ಲಾ ಅಲಿಯಾಸ್ ಸಾಜಿದ್ ಜಟ್ ಅಲಿಯಾಸ್ ‘ಲಂಗ್ಡಾ’…