ವಿದ್ಯುತ್ ಪೋಲು ತಡೆಯುವುದಕ್ಕೂ ಬಂತು ಎಐ ಸಿಸ್ಟಂ: ವಾರ್ಷಿಕ 40 ಕೋಟಿ ರೂ. ಉಳಿತಾಯ! – Kannada News | AI based pump monitoring to Prevent Power Wastage: Bengaluru Water Board Targets Rs 40 Crore Annual Savings
ಬೆಂಗಳೂರು, ಜನವರಿ 15: ಈ ಹಿಂದೆ ಪೈಪ್‌ಲೈನ್ ಸೇರಿದಂತೆ ವಿವಿಧ ಕಡೆ ನೀರು ಸೋರಿಕೆಯಾಗಿ ವ್ಯರ್ಥವಾಗುವುದನ್ನು ತಡೆಯಲು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಸುದ್ದಿಯಾಗಿದ್ದ ಬೆಂಗಳೂರು ಜಲಮಂಡಳಿ (BWSSB) ಇದೀಗ ಇಂಧನ ಕ್ಷಮತೆ ಹೆಚ್ಚಿಸಲು ಮತ್ತು ವಿದ್ಯುತ್ ಪೋಲಾಗುವುದನ್ನು ತಡೆಯಲು ಕೃತಕ ಬುದ್ಧಿಮತ್ತೆ ಆಧಾರಿತ ಪಂಪ್ ಮಾನಿಟರಿಂಗ್ ಆರಂಭಿಸಿದೆ. ಬೆಂಗಳೂರಿನ (Bangalore) 78 ಸ್ಟೇಷನ್ಗಳಲ್ಲಿ ಎಐ ಆಧಾರಿತ ಪಂಪು ಮಾನಿಟರಿಂಗ್ ಸಾಧನೆಗಳನ್ನು ಅಳವಡಿಸಲಾಗಿದೆ. ಇದರಿಂದ ವಾರ್ಷಿಕ 40 ಕೋಟಿ ರೂಪಾಯಿ ಉಳಿತಾಯ ನಿರೀಕ್ಷಿಸಲಾಗಿದೆ ಎಂದು ಜಲಮಂಡಳಿ ಅಧ್ಯಕ್ಷ ರಾಮ್…