‘ರಗಡೋ ರಕ್ಕಿ’ ಹಾಡಿನಲ್ಲಿ ಹೀರೋ ಮಾಸ್ ಎಂಟ್ರಿ; ‘ಪಿಆರ್ಕೆ ಆಡಿಯೋ’ ಮೂಲಕ ರಿಲೀಸ್ – Kannada News | Ragado Rakky new song ft Rakky Suresh released on PRK Audio
ರಕ್ಕಿ ಸುರೇಶ್ ಅಭಿನಯದ ‘ರಕ್ಕಿ’ (Rakky) ಸಿನಿಮಾದ ಪ್ರಚಾರ ಕಾರ್ಯ ಶುರುವಾಗಿದೆ. ಈ ಸಿನಿಮಾದಿಂದ ‘ರಗಡೋ ರಕ್ಕಿ’ ಹಾಡನ್ನು ರಿಲೀಸ್ ಮಾಡಲಾಗಿದೆ. ‘ಪಿಆರ್ಕೆ ಆಡಿಯೋ’ ಮೂಲಕ ಈ ಹಾಡು ಬಿಡುಗಡೆಯಾಗಿದೆ. ಯುವಜನತೆಗೆ ಇಷ್ಟವಾಗುವ ರೀತಿಯಲ್ಲಿ ಹಾಡು ಮೂಡಿಬಂದಿದೆ. ಇದು ಹೀರೋ ಆಗಿ ರಕ್ಕಿ ಸುರೇಶ್ (Rakky Suresh) ನಟಿಸಿರುವ ಮೊದಲ ಸಿನಿಮಾ. ಚೊಚ್ಚಲ ಪ್ರಯತ್ನದಲ್ಲೇ ಅವರು ಯುವ ಪ್ರೇಕ್ಷಕರ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ. ‘ರಗಡೋ ರಕ್ಕಿ’ ಹಾಡಿನಲ್ಲಿ ರಕ್ಕಿ ಸುರೇಶ್ ಅವರ ಎನರ್ಜಿಟಿಕ್ ಡ್ಯಾನ್ಸ್ ಮತ್ತು…