Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಈ ಜನ್ಮಸಂಖ್ಯೆಯವರ ಆಸ್ತಿ ವಿವಾದ ಕೊನೆಗೂ ಸೌಹಾರ್ದಯುತವಾಗಿ ಬಗೆಹರಿಯುವ ಸೂಚನೆಗಳಿವೆ – Kannada News | Numerology Prediction: Birth Numbers 7,8,9 Horoscope for January 14
ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7): ದೀರ್ಘಕಾಲದಿಂದ ನಡೆಯುತ್ತಿರುವ ಕೆಲಸಗಳಲ್ಲಿ ಪ್ರಗತಿ ಕಂಡುಬರಲಿದೆ. ಹಿರಿಯರೊಂದಿಗೆ ತೀರ್ಥಯಾತ್ರೆಗೆ ಹೋಗುವ ಬಗ್ಗೆ ಚರ್ಚೆ ನಡೆಸುವಿರಿ. ಹಣಕಾಸಿನ ವ್ಯವಹಾರಗಳಲ್ಲಿ ಅಲ್ಪ ಲಾಭ ಇದ್ದರೂ ಭವಿಷ್ಯದ ಹೂಡಿಕೆಗೆ ಉತ್ತಮ ತಳಹದಿ ಸಿಗಲಿದೆ. ಸಾಲದ ಹೊರೆ ತಗ್ಗಿಸಲು ನೀವು ವಿಶೇಷ ಹಣಕಾಸಿನ ಯೋಜನೆ ರೂಪಿಸುವಿರಿ. ಕಚೇರಿಯಲ್ಲಿ ಗುಪ್ತ ಶತ್ರುಗಳ ಬಗ್ಗೆ ಎಚ್ಚರಿಕೆ ಇರಲಿ. ನಿಮ್ಮ ಕೆಲಸದ ವಿವರಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳಬೇಡಿ. ಧ್ಯಾನ, ಯೋಗದ ಅಭ್ಯಾಸದಿಂದ ಮಾನಸಿಕ…