‘ಜನ ನಾಯಗನ್’ ಬಿಡುಗಡೆ ಆಗದಿದ್ದರೂ ಚಿತ್ರಮಂದಿರಕ್ಕೆ ಬರಲಿರುವ ವಿಜಯ್ – Kannada News | Thalapathy Vijay starrer Theri movie re releasing on January 15
ದಳಪತಿ ವಿಜಯ್ (Thalapathy Vijay) ನಟನೆಯ ‘ಜನ ನಾಯಗನ್’ ಸಿನಿಮಾ ಜನವರಿ 09 ರಂದು ಬಿಡುಗಡೆ ಆಗಬೇಕಿತ್ತು. ಆದರೆ ಸೆನ್ಸಾರ್ ಮಂಡಳಿಯು ಸಿನಿಮಾಕ್ಕೆ ಸಿಬಿಎಫ್ಸಿ ಪ್ರಮಾಣ ಪತ್ರ ನೀಡಲು ನಿರಾಕರಿಸಿದ ಕಾರಣ ಸಿನಿಮಾ ಬಿಡುಗಡೆ ಕೋರ್ಟ್ ಮೆಟ್ಟಿಲೇರಿದೆ. ಇದರಿಂದಾಗಿ ಅನಿವಾರ್ಯವಾಗಿ ಸಿನಿಮಾ ಬಿಡುಗಡೆ ಮುಂದೂಡಲ್ಪಟ್ಟಿದೆ. ‘ಜನ ನಾಯನಗನ್’ ಸಿನಿಮಾಕ್ಕೆ ಕಾತರದಿಂದ ಕಾಯುತ್ತಿದ್ದ ವಿಜಯ್ ಅಭಿಮಾನಿಗಳಿಗೆ ಇದರಿಂದ ತೀವ್ರ ಬೇಸರ ಸಹ ಆಗಿದೆ. ಆದರೆ ‘ಜನ ನಾಯಗನ್’ ಬಿಡುಗಡೆ ಆಗದಿದ್ದರೆ ಏನಂತೆ ಈ ಸಂಕ್ರಾಂತಿ ಅಥವಾ ತಮಿಳುನಾಡಿನಲ್ಲಿ ಪೊಂಗಲ್ ಹಬ್ಬಕ್ಕೆ…