ಹುಬ್ಬಳ್ಳಿಯಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ: ಆರೋಪಿಗಳಿಗೆ ಥಳಿಸಿದವರ ಮೇಲೂ ಕೇಸ್ – Kannada News | Hubballi Physical Assault on Woman: Two Arrested
ಹುಬ್ಬಳ್ಳಿ, ಜನವರಿ 11: ಮಹಿಳೆಗೆ ಮದ್ಯ ಕುಡಿಸಿ ಆಕೆಯ ಮೇಲೆ ಗ್ಯಾಂಗ್ ರೇಪ್ ಮಾಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಸಂತ್ರಸ್ತೆ ನೀಡಿದ್ದ ದೂರಿನ ಆಧಾರದಲ್ಲಿ ಇಬ್ಬರು ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ. ಕಾಮುಕರು ಕೃತ್ಯದ ವಿಡಿಯೋ ಕೂಡ ಮಾಡಿಕೊಂಡು ಅದನ್ನು ಹರಿಬಿಟ್ಟಿದ್ದರು ಎನ್ನಲಾಗಿದೆ. ಇನ್ನು ಸಂತ್ರಸ್ತೆಗೆ ಅಗತ್ಯ ಚಿಕಿತ್ಸೆಯನ್ನು ನೀಡಲಾಗ್ತಿದೆ. ಜ.9ರಂದು ನಡೆದಿರುವ ಘಟನೆ ಘಟನೆ ಬಗ್ಗೆ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಪ್ರತಿಕ್ರಿಯಿಸಿದ್ದು, ಜ.9ರಂದು ಅಂಬೇಡ್ಕರ್ ಮೈದಾನದಿಂದ ಇಬ್ಬರು ಯುವಕರು ಆಟೋದಲ್ಲಿ ಮಹಿಳೆಯನ್ನು…