ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ: ವಾಹನ ಸವಾರರ ಪರದಾಟ – Kannada News | Rajajinagar Drainage Blocked: Unscientific Asphalt Laying Over Drain Covers Causes Safety Concerns
ಬೆಂಗಳೂರು, ಜ.11: ರಾಜಾಜಿನಗರದ ಸುಜಾತಾ ಅಂಡರ್‌ಪಾಸ್‌ನಲ್ಲಿ ಜಿಬಿಎ ನಡೆಸಿದ ಅವೈಜ್ಞಾನಿಕ ರಸ್ತೆ ಡಾಂಬರೀಕರಣವು ವಾಹನ ಸವಾರರಿಗೆ ತೀವ್ರ ತೊಂದರೆ ಉಂಟುಮಾಡಿದೆ. ರಸ್ತೆ ಗುಂಡಿಗಳನ್ನು ಮುಚ್ಚುವ ಗಡಿಬಿಡಿಯಲ್ಲಿ ಡ್ರೈನ್ ಕವರ್‌ಗಳ ಮೇಲೆಯೇ ಡಾಂಬರ್ ಹಾಕಲಾಗಿದೆ. ಇದರಿಂದ ಡ್ರೈನ್ ಕವರ್‌ಗಳ ಬಳಿ ವಾಹನಗಳು ಕುಸಿಯುತ್ತಿದ್ದು, ಸವಾರರು ಪರದಾಡುತ್ತಿದ್ದಾರೆ. ದ್ವಿಚಕ್ರ ವಾಹನ ಸವಾರರು ಜಿಗಿದು ಬೀಳುವ ಅಪಾಯವನ್ನು ಎದುರಿಸುತ್ತಿದ್ದಾರೆ. ಇದಲ್ಲದೆ, ಅಂಡರ್‌ಪಾಸ್‌ನಲ್ಲಿ ನೀರು ಸರಾಗವಾಗಿ ಹರಿಯಲು ನಿರ್ಮಿಸಲಾಗಿದ್ದ ಗ್ಯಾಲರಿಗಳನ್ನು ಸಂಪೂರ್ಣವಾಗಿ ಟಾರ್ ಹಾಕಿ ಮುಚ್ಚಲಾಗಿದೆ. ಮುಂಬರುವ ಮಳೆಗಾಲದಲ್ಲಿ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ…