Headlines

ಹಾಸನ: ಪ್ರಧಾನಿ ಮೋದಿ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ – Kannada News | Hassan: PM Modi to Inaugurate Mega Dairy; HD Deve Gowda

ಹಾಸನ, ಮೇ 12: ನಗರದ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿ ಕರ್ನಾಟಕ ಹಾಲು ಮಹಾಮಂಡಳ (KMF) ವತಿಯಿಂದ 830 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಮೆಗಾ ಡೇರಿ ಕಾಮಗಾರಿ ಅಂತಿಮ ಹಂತ ತಲುಪಿದೆ. ಮಾಜಿ ಪ್ರಧಾನಿ, JDS ವರಿಷ್ಠ ಹೆಚ್.ಡಿ. ದೇವೇಗೌಡ, ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರೊಂದಿಗೆ ಮಂಗಳವಾರ ಡೇರಿ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ವೀಕ್ಷಿಸಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಹೆಚ್​ಡಿ. ದೇವೇಗೌಡ, ಜುಲೈ ಮೊದಲ ಅಥವಾ 2ನೇ ವಾರದಲ್ಲಿ ಮೆಗಾ ಡೇರಿ ಉದ್ಘಾಟನೆಗೊಳ್ಳಲಿದ್ದು,…

Read More

ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ದೇವಸ್ಥಾನದ ಗೋಡೆ ಕುಸಿದು 6 ಜನ ಸಾವು, 14 ಮಂದಿಗೆ ಗಾಯ – Kannada News | 6 people killed 14 injured after Temple Wall Collapses in Maharashtra’s Sangli

ಸಾಂಗ್ಲಿ, ಮೇ 12: ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ಇಂದು ಸಂಜೆ ಬಿರುಗಾಳಿಯಿಂದಾಗಿ ದೇವಸ್ಥಾನದ ಆವರಣದ ಗೋಡೆ ಕುಸಿದು 6 ಜನರು ಸಾವನ್ನಪ್ಪಿದ್ದಾರೆ ಮತ್ತು 14 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಸಾಂಗ್ಲಿ ಜಿಲ್ಲೆಯ ಜಾಟ್ ತಾಲ್ಲೂಕಿನ ಮೋಟೆವಾಡಿ ಗ್ರಾಮದಲ್ಲಿರುವ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ. ಮಾರ್ಗುಬಾಯಿ ದೇವಿ ಯಾತ್ರೆಯ ಸಂದರ್ಭದಲ್ಲಿ ಪ್ರಾರ್ಥನೆ ಸಲ್ಲಿಸಲು ಹಲವಾರು ಭಕ್ತರು ದೇವಸ್ಥಾನಕ್ಕೆ ಆಗಮಿಸಿದ್ದರು. ಆಗಲೇ ಈ ದುರಂತ ಸಂಭವಿಸಿದೆ. ಇದ್ದಕ್ಕಿದ್ದಂತೆ ಶುರುವಾದ ಬಿರುಗಾಳಿ ಮತ್ತು ಮಳೆಯಿಂದ ಗೋಡೆ ಕುಸಿದಿದೆ….

Read More

ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್ – Kannada News | Mandya Heatwave Impact: Water Level Drops in KRS Dam

ಮಂಡ್ಯ, ಮೇ 12: ರಾಜ್ಯದ ಹಲವೆಡೆ ಮಳೆಯ ಕೊರತೆಯ ನಡುವೆ ತೀವ್ರ ಬಿಸಿಲಿನ ಬೇಗೆಯಿಂದ ಜನ ತತ್ತರಿಸಿದ್ದಾರೆ. ಇದು ಜೀವಜಲದ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ. ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೆಆರ್‌ಎಸ್ ಜಲಾಶಯದ ಹಿನ್ನೀರಿನ ಪ್ರದೇಶದಲ್ಲಿ ನೀರಿನ ಮಟ್ಟ ತೀವ್ರವಾಗಿ ಕುಸಿಯುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. 124.80 ಅಡಿ ಗರಿಷ್ಠ ಸಾಮರ್ಥ್ಯವಿರುವ ಈ ಜಲಾಶಯವು ಒಟ್ಟು 49 TMC ನೀರು ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ. ಆದರೆ, ಪ್ರಸ್ತುತ ಕೇವಲ 16 TMC ನೀರು ಮಾತ್ರ ಸಂಗ್ರಹವಾಗಿದೆ. ಇದರಲ್ಲಿ ಬಳಕೆಗೆ ಸಿಗುವುದು…

Read More

‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರಕ್ಕೆ ಸಿದ್ದರಾಮಯ್ಯ ಸಹಕಾರ ನೆನೆದ ಕುಮಾರ್ ಬಂಗಾರಪ್ಪ – Kannada News | Kumar Bangarappa talks about CM Siddaramaiah in Sarkari Nyaya Bele Angadi press meet

ಖ್ಯಾತ ನಟ ಕುಮಾರ್ ಬಂಗಾರಪ್ಪ ಅವರು ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ (Sarkari Nyaya Bele Angadi) ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಈ ಸಿನಿಮಾದ ಸುದ್ದಿಗೋಷ್ಠಿ ಇತ್ತೀಚೆಗೆ ನಡೆಯಿತು. ಈ ವೇಳೆ ಕುಮಾರ್ ಬಂಗಾರಪ್ಪ ಅವರು ಸಿದ್ದರಾಮಯ್ಯ (Siddaramaiah), ನರೇಂದ್ರ ಮೋದಿ ಮುಂತಾದವರಿಗೆ ಧನ್ಯವಾದ ತಿಳಿಸಿದರು. ‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಡವರಿಗಾಗಿ ಆಹಾರ ಭದ್ರತೆ ಕಾಯ್ಕೆ ಪ್ರಕಾರ ದಿನಸಿ ನೀಡುತ್ತವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮ್ಮ ಸಿನಿಮಾದ ಹಾಡನ್ನು ಬಹಳ ಖುಷಿಯಿಂದ ಬಿಡುಗಡೆ ಮಾಡಿದರು. ಈ…

Read More

NEET ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ; ಒಂದು ವಾಟ್ಸಾಪ್ ಮೆಸೇಜಿನಿಂದ ರದ್ದಾಯ್ತು ಯುಜಿ ಪರೀಕ್ಷೆ – Kannada News | NEET UG 2026 paper leak; How a WhatsApp Group message led to exams cancellation in India

ನವದೆಹಲಿ, ಮೇ 12: 22 ಲಕ್ಷಕ್ಕೂ ಹೆಚ್ಚು ವೈದ್ಯಕೀಯ ಆಕಾಂಕ್ಷಿಗಳ ಕನಸು ಇಂದು ಛಿದ್ರವಾಗಿದೆ. NEET-UG 2026 ಪರೀಕ್ಷೆಯು ವ್ಯವಸ್ಥಿತ ವೈಫಲ್ಯದ ದುಃಸ್ವಪ್ನವಾಗಿ ಮಾರ್ಪಟ್ಟಿದೆ. ಮೇ 3ರಂದು ನಡೆದಿದ್ದ ನೀಟ್ ಪರೀಕ್ಷೆಯು (NEET) ಈಗ ಭಾರಿ ಹಗರಣವಾಗಿ ಬೆಳೆದಿದೆ. ತೀವ್ರ ಪ್ರತಿಭಟನೆಗಳ ನಂತರ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಪರೀಕ್ಷೆಯನ್ನು ರದ್ದುಗೊಳಿಸಲಾಯಿತು. ವಿದ್ಯಾರ್ಥಿಯೊಬ್ಬ ಹಾಸ್ಟೆಲ್​ನಲ್ಲಿ ಕೆಲಸ ಮಾಡುತ್ತಿದ್ದ ತನ್ನ ತಂದೆಗೆ ಕಳುಹಿಸಿದ್ದ ವಾಟ್ಸಾಪ್ ಮೆಸೇಜಿನಿಂದಾಗಿಯೇ ಈ ಇಡೀ ಹಗರಣ ಬಯಲಾದಂತಾಗಿದೆ. ಅಷ್ಟಕ್ಕೂ ಆ ಮೆಸೇಜ್ ಏನು? ದೇಶದಲ್ಲಿ…

Read More

ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು: 2.20 ಲಕ್ಷ ಕುಟುಂಬಗಳಿಗೆ ಸಿಕ್ಕಿತು ಅಧಿಕೃತ ಮನೆ ಹಕ್ಕು! – Kannada News | Hakku Patra Distribution: Addressing Land Ownership Gaps in Karnataka

ಬೆಂಗಳೂರು, ಮೇ.12: ಕರ್ನಾಟಕ ಸರ್ಕಾರವು ರಾಜ್ಯದಲ್ಲಿ ದಶಕಗಳಿಂದಲೂ ದಾಖಲೆರಹಿತ ವಸತಿ ಪ್ರದೇಶಗಳಾಗಿರುವ ಹಾಡಿ, ಹಟ್ಟಿ, ತಾಂಡಾ ಮತ್ತು ಕ್ಯಾಂಪ್‌ಗಳಿಗೆ ಅಧಿಕೃತ ಮಾನ್ಯತೆ ನೀಡುವ ಕಾರ್ಯಕ್ರಮವನ್ನು ಆದ್ಯತೆಯಾಗಿ ಕೈಗೊಂಡಿದೆ. ಈ ಪ್ರದೇಶಗಳಲ್ಲಿ ವಾಸಿಸುವ ಜನರು ಭೂ ದಾಖಲೆಗಳಿಲ್ಲದೆ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಆಶ್ರಯ ಯೋಜನೆ, ಬ್ಯಾಂಕ್ ಸಾಲ, ಇ-ಸ್ವತ್ತು, ಮತ್ತು ಆಸ್ತಿ ಪರಬಾರೆ ಮಾಡುವಂತಹ ಹಕ್ಕುಗಳನ್ನು ಹೊಂದಿಲ್ಲ. ಹಿಂದಿನ ಕಾಂಗ್ರೆಸ್ ಸರ್ಕಾರವು ಕಾನೂನು ತಿದ್ದುಪಡಿ ಮಾಡಿ ಆರು ವರ್ಷಗಳಲ್ಲಿ (2017-2023) 1.06 ಲಕ್ಷ ಜನರಿಗೆ ಹಕ್ಕುಪತ್ರ ವಿತರಿಸಿತ್ತು. ಆದರೆ,…

Read More

ಮತ್ತೆ ಸನಾತನ ಧರ್ಮದ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್ – Kannada News | Udhayanidhi Stalin repeats controversial Sanatan dharm must be abolished comment in Tamil Nadu Assembly

ಚೆನ್ನೈ, ಮೇ 12: ತಮಿಳುನಾಡಿನಲ್ಲಿ ಮತ್ತೊಮ್ಮೆ ಸನಾತನ ಧರ್ಮದ ಸುತ್ತಲಿನ ವಿವಾದ ಸೃಷ್ಟಿಯಾಗಿದೆ. ತಮಿಳುನಾಡಿನ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ (Udhayanidhi Stalin) ಮತ್ತೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ತಮಿಳುನಾಡು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಇಂದು ಸದನದಲ್ಲಿ ಮತ್ತೆ ‘ಸನಾತನ ಧರ್ಮದ ನಿರ್ಮೂಲನೆ’ಯನ್ನು ಪ್ರತಿಪಾದಿಸಿದ್ದಾರೆ. ಈ ವೇಳೆ ಸದನದಲ್ಲಿ ಹಾಜರಿದ್ದ ಮುಖ್ಯಮಂತ್ರಿ ಜೋಸೆಫ್ ವಿಜಯ್ (CM Joseph Vijay) ಮೌನವಾಗಿದ್ದರು. “ಜನರನ್ನು ಬೇರ್ಪಡಿಸುವ ಸನಾತನವನ್ನು ನಿರ್ಮೂಲನೆ ಮಾಡಬೇಕು” ಎಂದು ಸ್ಟಾಲಿನ್ ತಮಿಳುನಾಡು ಚುನಾವಣೆಯ ನಂತರ ವಿಧಾನಸಭಾ ಅಧಿವೇಶನದ…

Read More

ಸಲ್ಮಾನ್ ಖಾನ್ ತಂಗಿಯ ರೆಸ್ಟೋರೆಂಟ್; 1 ಪ್ಲೇಟ್ ಪಾಸ್ತಾ ಬೆಲೆ 5 ಸಾವಿರ ರೂಪಾಯಿ – Kannada News | Salman Khan sister Arpita Khan luxury restaurant Mercii menu prices Mumbai

ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ (Salman Khan) ಅವರ ತಂಗಿ ಅರ್ಪಿತಾ ಖಾನ್ ಶರ್ಮಾ ಅವರು ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿಯಲ್ಲಿದ್ದಾರೆ. ಆದರೆ ಇದು ಯಾವುದೇ ಸಿನಿಮಾಗೆ ಸಂಬಂಧಿಸಿದ ಕಾರಣಕ್ಕಾಗಿ ಅಲ್ಲ. ಬದಲಿಗೆ, ಅವರು ಮುಂಬೈನಲ್ಲಿ ಆರಂಭಿಸಿರುವ ಐಷಾರಾಮಿ ರೆಸ್ಟೋರೆಂಟ್‌ನ ದರ ಪಟ್ಟಿಗಾಗಿ ಎಂಬುದು ವಿಶೇಷ. ಮುಂಬೈನ ಪ್ರತಿಷ್ಠಿತ ಸಾಂತಾಕ್ರೂಜ್ ಪ್ರದೇಶದಲ್ಲಿ ಅರ್ಪಿತಾ ಖಾನ್ (Arpita Khan) Mercii ಎಂಬ ಯುರೋಪಿಯನ್ ಶೈಲಿಯ ಫೈನ್-ಡೈನಿಂಗ್ ರೆಸ್ಟೋರೆಂಟ್ ನಡೆಸುತ್ತಿದ್ದಾರೆ. ಇದರಲ್ಲಿನ ಆಹಾರದ ಬೆಲೆಗಳನ್ನು ನೋಡಿ ಸಾಮಾನ್ಯ ಜನರು…

Read More

ಪದೇಪದೇ ಹೊಟ್ಟೆ ನೋವು, ಗ್ಯಾಸ್ಟ್ರಿಕ್ ಸಮಸ್ಯೆ ಕಂಡುಬರುವುದು ಸಾಮಾನ್ಯವಲ್ಲ; ಗಂಭೀರ ಕಾಯಿಲೆಯ ಮುನ್ಸೂಚನೆಯಾಗಿರಬಹುದು ಎಚ್ಚರ! – Kannada News | When Bloating and Gas Mean More Than Indigestion

ಇತ್ತೀಚಿನ ದಿನಗಳಲ್ಲಿ ಅನೇಕರು ಪದೇಪದೇ ಹೊಟ್ಟೆ ನೋವು (Stomach Pain) ಅಜೀರ್ಣ (Indigestion), ಗ್ಯಾಸ್ಟ್ರಿಕ್ (Gastric) ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕೆಲವರು ಇದನ್ನು ಸಾಮಾನ್ಯ ಸಮಸ್ಯೆ ಎಂದು ನಿರ್ಲಕ್ಷ್ಯ ಮಾಡುತ್ತಾರೆ. ಆದರೆ ಆರೋಗ್ಯ ತಜ್ಞರ ಪ್ರಕಾರ, ಈ ಲಕ್ಷಣಗಳು ದೀರ್ಘಕಾಲ ಮುಂದುವರಿದರೆ ಅದು ಗಂಭೀರ ಕಾಯಿಲೆಯ ಸೂಚನೆಯಾಗಿರಬಹುದು. ಹೌದು, ಲೇಡಿ ಹಾರ್ಡಿಂಗ್ ಮೆಡಿಕಲ್ ಕಾಲೇಜು ಮತ್ತು ಅಸೋಸಿಯೇಟೆಡ್ ಆಸ್ಪತ್ರೆಯ ಮೆಡಿಸಿನ್ ವಿಭಾಗದ ತಜ್ಞ ಡಾ. ಎಲ್.ಎಚ್. ಘೋಟೇಕರ್ ಅವರು ಹೇಳುವ ಪ್ರಕಾರ, ಪದೇಪದೇ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಕಾಣಿಸಿಕೊಳ್ಳಲು ಪ್ರಮುಖ…

Read More

ಮುಂದಿನ 3 ದಿನ ರಾಜ್ಯದ ಈ 8 ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಆಲಿಕಲ್ಲು ಮಳೆ: ಕರಾವಳಿ ಜನರೇ ಎಚ್ಚರ – Kannada News | IMD Forecast: Karnataka Brace for Hailstorms and Strong Winds; Districts Under Alert

ಬೆಂಗಳೂರು, ಮೇ.12: ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಹವಾಮಾನದಲ್ಲಿ ಭಾರಿ ಬದಲಾವಣೆಯಾಗಲಿದ್ದು, ಆಲಿಕಲ್ಲು ಮಳೆ (Hailstorm) ಬೀಳುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ (IMD) ನೀಡಿದೆ. ಉತ್ತರ ಒಳನಾಡಿನಲ್ಲಿ ಮೇ 14 ಮತ್ತು 15 ರಂದು ಆಲಿಕಲ್ಲು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಇನ್ನು ದಕ್ಷಿಣ ಒಳನಾಡಿನಲ್ಲೂ ಕೂಡ ಮೇ 15 ರಂದು ಒಂದು ಅಥವಾ ಎರಡು ಸ್ಥಳಗಳಲ್ಲಿ ಮಳೆಯಾಗುವ ನಿರೀಕ್ಷೆಯಿದೆ. ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಮಳೆಯಾಗಲಿದ್ದು, ಗಾಳಿಯ…

Read More