ಪ್ರಧಾನಿ ಮಾರ್ಗದಲ್ಲಿ ಸ್ಫೋಟಕ ಪತ್ತೆ: ಹಳೆಯ ಜಿಲೆಟಿನ್ ಕಡ್ಡಿಗಳ ಹಿಂದೆ ಇರುವ ಜಾಲ ಯಾವುದು? ಎಫ್‌ಎಸ್‌ಎಲ್ ವರದಿ ನೀಡಿದ ಆತಂಕದ ಮಾಹಿತಿ – Kannada News | PM Modi Route Scare: Bengaluru FSL Reveals Gelatin Sticks Not Explosive
ಬೆಂಗಳೂರು, ಮೇ.12: ಪ್ರಧಾನಿ ನರೇಂದ್ರ ಮೋದಿ ಅವರು ಸಂಚರಿಸುವ ಮಾರ್ಗದಲ್ಲಿ ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಿವಿಜ್ಞಾನ ಪ್ರಯೋಗಾಲಯದ (FSL) ತಜ್ಞರು ಪ್ರಾಥಮಿಕ ವರದಿ ನೀಡಿದ್ದಾರೆ. ತನಿಖೆಯ ವೇಳೆ ಕೃತ್ಯಕ್ಕೆ ಬಳಸಲಾದ ವಸ್ತುಗಳ ಬಗ್ಗೆ ಹಲವು ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದಿವೆ. ಪತ್ತೆಯಾದ ಜಿಲೆಟಿನ್ ಕಡ್ಡಿಗಳು ಸುಮಾರು 3 ವರ್ಷಗಳ ಹಿಂದೆ ತಯಾರಾದವುಗಳಾಗಿವೆ. ಇವುಗಳನ್ನು ಸರಿಯಾದ ಕ್ರಮದಲ್ಲಿ ಸಂಗ್ರಹಿಸದ ಕಾರಣ, ಪತ್ತೆಯಾದ ಸಂದರ್ಭದಲ್ಲಿ ಅವು ಸ್ಫೋಟಗೊಳ್ಳುವ ಸ್ಥಿತಿಯಲ್ಲಿರಲಿಲ್ಲ ಎಂದು ತಜ್ಞರು ತಿಳಿಸಿದ್ದಾರೆ. ಜಿಲೆಟಿನ್ ಜೊತೆಗಿದ್ದ ವೈರ್…