‘ಅವರು ಹೋಮಕ್ಕೆ ಕೋಟಿ ಸುರಿದರೆ, ನಾನು ರಂಗಭೂಮಿಗೆ ವ್ಯಯಿಸುತ್ತೇನೆ’; ಪ್ರಕಾಶ್ ರಾಜ್
ಪ್ರಕಾಶ್ ರಾಜ್ ನಾಸ್ತಿಕರು. ಅವರು ದೇವರನ್ನು ನಂಬೋದಿಲ್ಲ. ಆದಾಗ್ಯೂ ಕೆಲವೊಮ್ಮೆ ಅವರು ದೇವಸ್ಥಾನಕ್ಕೆ ತೆರಳಿದ್ದು ಇದೆ. ಇದಕ್ಕೆ ಕಾರಣ ಪತ್ನಿ ಎಂದು ಅವರು ಹೇಳಿದ್ದಾರೆ. ‘ನನ್ನ ಪತ್ನಿಗೆ ದೇವರ ಮೇಲೆ ನಂಬಿಕೆ ಇದೆ. ಅವಳು ಹೋಮ-ಹವನ ಮಾಡಿಸೋಣ ಎಂದಾಗ ನಾನು ಹೋಗುತ್ತೇನೆ. ಅದು ಅವಳ ನಂಬಿಕೆ. ಅದಕ್ಕೆ ಪ್ರತಿಯಾಗಿ ನಾನು ಜಗಳ ಮಾಡೋದಿಲ್ಲ. ನನ್ನ ಅನೇಕ ಗೆಳೆಯರು ಕೋಟಿ ಕೋಟಿ ಖರ್ಚು ಮಾಡಿ ಹೋಮ ಮಾಡಿಸುತ್ತಾರೆ. ಇದರಿಂದ ಅವರಿಗೆ ನೆಮ್ಮದಿ ಸಿಗುತ್ತದೆ. ಅದೇ ಕೋಟಿ ಹಣವನ್ನು ನಾನು…