Headlines

ನನ್ನ ಮಕ್ಕಳು ಸಹ ಸ್ಪರ್ಧಿಸಲ್ಲ: ಚುನಾವಣಾ ರಾಜಕೀಯಕ್ಕೆ ವಿಶ್ವನಾಥ್ ಕುಟುಂಬ ವಿದಾಯ – Kannada News | BJP MLC H Vishwanath retires from electoral politics

ಮೈಸೂರು, (ಮೇ,7): ಕರ್ನಾಟಕದ ಹಿರಿಯ ರಾಜಕಾರಣಿ, ರಾಜಕೀಯ ವಲಯದಲ್ಲಿ ಹಳ್ಳಿಹಕ್ಕಿ ಎಂದೇ ಗುರುತಿಸಿಕೊಂಡಿರುವ ಬಿಜೆಪಿ ವಿಧಾನಪರಿಷತ್ ಸದಸ್ಯ ಹೆಚ್​ ವಿಶ್ವನಾಥ್ (H Vishwanath)​ ಅವರು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಈ ಮೂಲಕ ವಿಶ್ವನಾಥ್ ಅವರು ಸಕ್ರೀಯ ರಾಜಕಾರಣದಲ್ಲಿ ಇರುತ್ತಾರೆ. ಆದ್ರೆ,ಇನ್ಮುಂದೆ ಯಾವುದೇ ಚುನಾವಣೆಗಳಲ್ಲಿ ಸ್ಪರ್ಧೆ ಮಾಡುವುದಿಲ್ಲ. ಈ ಕುರಿತು ಮೈಸೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಬರುವ ಯಾವುದೇ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ. ಚುನಾವಣೆಗೆ ಸ್ಪರ್ಧಿಸಿದಾಗ ಜನರೇ ಹಣ ನೀಡಿ ಆಶೀರ್ವದಿಸಿದ್ದರು ಈಗ ಹಣ ನೀಡಿ ಚುನಾವಣೆ…

Read More

ಶಸ್ತ್ರಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದ ರೋಗಿಯ ಬಂಗಾರ ಕದ್ದ ಮಹಿಳಾ ಸಿಬ್ಬಂದಿ: ದೋಚಿದ್ದು 9.7 ಲಕ್ಷ ಮೌಲ್ಯದ ಆಭರಣ – Kannada News | Bengaluru Hospital Staff Steals Patient’s 9.7 Lakh Gold Jewelry

ಬೆಂಗಳೂರು, ಮೇ 07: ಶಸ್ತ್ರಚಿಕಿತ್ಸೆಗೆಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಗೆ ಸೇರಿದ ಬಂಗಾರವನ್ನು ಅಲ್ಲಿನ ಸಿಬ್ಬಂದಿಯೇ ಕದ್ದಿರುವ ಆಘಾತಕಾರಿ ಘಟನೆ ಬೆಂಗಳೂರಿನ (Bengaluru) ಹೆಣ್ಣೂರು-ಬಾಗಲೂರು ಮುಖ್ಯರಸ್ತೆಯ ಖಾಸಗಿ ಆಸ್ಪತ್ರೆಯೊಂದರಲ್ಲಿ ನಡೆದಿದೆ. ಒಟ್ಟು 9.7 ಲಕ್ಷ ರೂಪಾಯಿ ಮೌಲ್ಯದ ಆಭರಣವನ್ನು ವಾರ್ಡ್​​ನ ಕಪಾಟಿನಿಂದ ಎಗರಿಸಿದ್ದ ಮಹಿಳಾ ಸಿಬ್ಬಂದಿಯನ್ನು ಹೆಣ್ಣೂರು ಪೊಲೀಸರು ವಶಕ್ಕೆ ಪಡೆದಿದ್ದು, ಪ್ರಕರಣ ಸಂಬಂಧ ತನಿಖೆಯನ್ನು ಮುಂದುವರಿಸಿದ್ದಾರೆ. ಆಸ್ಪತ್ರೆಗೆ ದಾಖಲಾಗಿದ್ದ ರೋಗಿಯ ಬಂಗಾರ ಕದ್ದ ಮಹಿಳಾ ಸಿಬ್ಬಂದಿ ಹೆಣ್ಣೂರು-ಬಾಗಲೂರು ಮುಖ್ಯರಸ್ತೆಯ ಆಸ್ಪತ್ರೆಯೊಂದರಲ್ಲಿ ಘಟನೆ ಒಟ್ಟು 9.7 ಲಕ್ಷ…

Read More

ಪೋಕ್ಸೋ ಪ್ರಕರಣವಿದೆ: ಯಡಿಯೂರಪ್ಪ ಅಭಿಮಾನೋತ್ಸವ ಸರಿಯಲ್ಲ ಎಂದ ಬಿಜೆಪಿ ನಾಯಕ – Kannada News | BJP MLC H Vishwanath Oppressed to celebrate BS yediyurappa Abhimanotsava

ಮೈಸೂರು, (ಮೇ 07): ಜನಸೇವೆಯಲ್ಲಿ 50 ವರ್ಷ ಪೂರೈಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅಭಿಮಾನೋತ್ಸವವು (yediyurappa Abhimanotsava) ಮೇ 9ರಂದು ಚಿತ್ರದುರ್ಗದಲ್ಲಿ ನಡೆಯಲಿದೆ. . ಈ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಸನ್ಮಾನಿಸಲಿದ್ದಾರೆ. ಆದ್ರೆ, ಈ ಕಾರ್ಯಕ್ರಮಕ್ಕೆ ಸ್ವಪಕ್ಷದವರೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹೌದು…ಮೇ 9ರಂದು ಚಿತ್ರದುರ್ಗದಲ್ಲಿ ಆಯೋಜಿಸಿರುವ ಯಡಿಯೂರಪ್ಪ ಅಭಿಮಾನೋತ್ಸವಕ್ಕೆ ಬಿಜೆಪಿ ಪರಿಷತ್ ಸದಸ್ಯ ಹೆಚ್​.ವಿಶ್ವನಾಥ್​  (BJP MLC H Vishwanath) ವಿರೋಧ ವ್ಯಕ್ತಪಡಿಸಿದ್ದಾರೆ. ಮೈಸೂರಿನಲ್ಲಿಂದು…

Read More

ಕಲಬುರಗಿ ಪೊಲೀಸರ ಭರ್ಜರಿ ಕಾರ್ಯಾಚರಣೆ: 1.44 ಕೋಟಿ ರೂ. ಮೌಲ್ಯದ 785 ಮೊಬೈಲ್‌ಗಳ ಹಸ್ತಾಂತರ! – Kannada News | Kalaburagi Police Record Achievement: 785 Lost Mobiles Worth Rs 1.44 Crore Recovered and Returned

ಕಲಬುರಗಿ, ಮೇ 07: ಕಳೆದುಹೋದ ಮೊಬೈಲ್‌ಗಳನ್ನು ಪತ್ತೆ ಹಚ್ಚುವಲ್ಲಿ ಕಲಬುರಗಿ ನಗರ ಪೊಲೀಸರು ದಾಖಲೆ ಬರೆದಿದ್ದಾರೆ. ಕೇವಲ ಎರಡು ತಿಂಗಳ ವಿಶೇಷ ಕಾರ್ಯಾಚರಣೆಯಲ್ಲಿ ಬರೋಬ್ಬರಿ 1,44,90,000 ರೂ. ಮೌಲ್ಯದ 785 ಮೊಬೈಲ್ ಪೋನ್‌ಗಳನ್ನು ಪತ್ತೆ ಹಚ್ಚುವಲ್ಲಿ ಖಾಕಿ ಪಡೆ ಯಶಸ್ವಿಯಾಗಿದೆ. ಸಿಇಐಆರ್ (CEIR) ಪೋರ್ಟಲ್ ಬಳಸಿಕೊಂಡು ವಿವಿಧ ಠಾಣಾ ವ್ಯಾಪ್ತಿಯಲ್ಲಿ ಕಳೆದುಹೋಗಿದ್ದ ವಿವಿಧ ಕಂಪನಿಗಳ ಬೆಲೆಬಾಳುವ ಮೊಬೈಲ್‌ಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ನಗರ ಪೊಲೀಸ್ ಆಯುಕ್ತರಾದ ಡಾ. ಶರಣಪ್ಪ ಅವರು ಪತ್ತೆಯಾದ ಮೊಬೈಲ್‌ಗಳನ್ನು ಅವುಗಳ ಅಸಲಿ ಮಾಲೀಕರಿಗೆ…

Read More

ಡಿಕೆ ಶಿವಕುಮಾರ್​ಗೆ ಶುಭಸುದ್ದಿ ಸಿಗುತ್ತೆ ಎಂಬ ಬೆಂಬಲಿಗರ ಮಾತಿಗೆ ಮಾಜಿ ಸಚಿವ ರಾಜಣ್ಣ ಏನಂದ್ರು ನೋಡಿ! – Kannada News | Karnataka Politics: A Dozen Leaders Fit for CM Post, Says KN Rajanna Amid Siddaramaiah DK Shivakumar Tussle

ಮೈಸೂರು, ಮೇ 7: ರಾಜ್ಯ ರಾಜಕಾರಣದಲ್ಲಿ ಸಿಎಂ ಬದಲಾವಣೆ ಗೊಂದಲ ಮುಂದುವರಿಯುತ್ತಿರುವ ಬೆನ್ನಲ್ಲೇ, ಮಾಜಿ ಸಚಿವ ಕೆಎನ್ ರಾಜಣ್ಣ ನೀಡಿರುವ ಹೇಳಿಕೆ ಕುತೂಹಲ ಮೂಡಿಸಿದೆ. ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಬಳಿಕ ಮಾತನಾಡಿದ ಅವರು, ‘ನಮ್ಮ ಪಕ್ಷದಲ್ಲಿ ಸಿಎಂ ಆಗುವ ಅರ್ಹತೆಯುಳ್ಳ ಒಂದು ಡಜನ್ ನಾಯಕರಿದ್ದಾರೆ’ ಎಂದು ಹೇಳಿದ್ದಾರೆ. ‘ಸಿಎಂ ಬದಲಾಗುತ್ತಾರೆ ಎಂದು ನಾನು ಹೇಳಲ್ಲ, ಇರುತ್ತಾರೆ ಅಂತಾನೂ ಹೇಳಲ್ಲ. ಆದರೆ ಹೈಕಮಾಂಡ್ ಅತಿ ಬೇಗ ಈ ಬಗ್ಗೆ ಜಾಗರೂಕ ನಿರ್ಧಾರ ಕೈಗೊಳ್ಳಲಿ. ಈ ಗೊಂದಲ…

Read More

ನನಗೆ ಯಾಕೆ ಈ ಪ್ರಶಸ್ತಿ ನೀಡ್ತಿದ್ದೀರಾ? ಪ್ಯಾಟ್ ಕಮ್ಮಿನ್ಸ್ ಅಚ್ಚರಿ! – Kannada News | Pat Cummins Surprised by Player of the Match Award vs PBKS

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ ಸನ್ ರೈಸರ್ಸ್ ಹೈದರಾಬಾದ್ (SRH) ತಂಡದ ಗೆಲುವಿನ ನಾಗಾಲೋಟ ಮುಂದುವರಿದಿದೆ. ಈ ಗೆಲುವುಗಳೊಂದಿಗೆ ಎಸ್​ಆರ್​ಹೆಚ್ ಪಡೆ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಅದು ಕೂಡ ಅಗ್ರಸ್ಥಾನದಲ್ಲಿದ್ದ ಪಂಜಾಬ್ ಕಿಂಗ್ಸ್ ತಂಡಕ್ಕೆ ಸೋಲುಣಿಸಿ. ಹೈದರಾಬಾದ್​ನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಎಸ್​ಆರ್​ಹೆಚ್ ತಂಡ 20 ಓವರ್​ಗಳಲ್ಲಿ 235 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಪಂಜಾಬ್ ಕಿಂಗ್ಸ್ 20 ಓವರ್​ಗಳಲ್ಲಿ 202 ರನ್​ಗಳಿಸಿ 33 ರನ್​ಗಳಿಂದ ಸೋಲೊಪ್ಪಿಕೊಂಡಿದೆ. ಈ ಗೆಲುವಿನೊಂದಿಗೆ…

Read More

ವಿಜಯ್‌ಗೆ ಬಹುಮತ ಸಾಬೀತಿನ ಸವಾಲು ಹಾಕಿದ ರಾಜ್ಯಪಾಲರು, ಕೋರ್ಟ್ ಮೆಟ್ಟಿಲೇರಲು ಟಿವಿಕೆ ಸಿದ್ಧತೆ – Kannada News | Vijay’s TVK Tamil Nadu Majority Test: Governor Demands Proof Amidst Coalition Hurdles

ಚೆನ್ನೈ, ಮೇ 07: ತಮಿಳುನಾಡು(Tamil Nadu) ವಿಧಾನಸಭಾ ಚುನಾವಣೆಯಲ್ಲಿ ಚೊಚ್ಚಲ ಪ್ರಯತ್ನದಲ್ಲೇ ಭರ್ಜರಿ ಜಯ ದಾಖಲಿಸಿರುವ ನಟ ವಿಜಯ್ ಅವರ ‘ತಮಿಳುಗ ವೆಟ್ರಿ ಕಳಗಂ’ (TVK) ಅಧಿಕಾರದ ಗದ್ದುಗೆ ಏರಲು ಕೊನೆಯ ಹಂತದ ಕಾನೂನು ಮತ್ತು ಸಂಖ್ಯಾಬಲದ ಹೋರಾಟ ನಡೆಸುತ್ತಿದೆ. ಗುರುವಾರ ಬೆಳಿಗ್ಗೆ ವಿಜಯ್ ಅವರನ್ನು ರಾಜಭವನಕ್ಕೆ ಕರೆಸಿಕೊಂಡ ರಾಜ್ಯಪಾಲ ಆರ್‌ವಿ ಅರ್ಲೇಕರ್, ಮೊದಲು 118 ಶಾಸಕರ ಬೆಂಬಲವಿರುವ ಅಧಿಕೃತ ಪತ್ರ ತನ್ನಿ ಎಂದು ಕಠಿಣ ಷರತ್ತು ವಿಧಿಸಿದ್ದಾರೆ. ಸುಮಾರು ಎರಡು ದಿನಗಳಲ್ಲಿ ಎರಡನೇ ಬಾರಿಗೆ ರಾಜ್ಯಪಾಲರನ್ನು…

Read More

ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ: BJP ಶಾಸಕಿ ರತ್ನ ದೇವನಾಥ್ ಮನೆ ಬಳಿಯೇ ಬಾಂಬ್​​ ಸ್ಫೋಟ – Kannada News | West Bengal Post Poll Violence: Bomb Blast Near BJP MLA Ratna Debnath’s House, 5 Workers Injured

ಕೋಲ್ಕತ್ತಾ, ಮೇ 07: ಚುನಾವಣಾ ಫಲಿತಾಂಶದ ಬೆನ್ನಲ್ಲೇ ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ತೀವ್ರಗೊಂಡಿದ್ದು, ಪಾನಿಹಾಟಿ ಕ್ಷೇತ್ರದ ಬಿಜೆಪಿ ಶಾಸಕಿ ರತ್ನ ದೇವನಾಥ್ ನಿವಾಸದ ಬಳಿ ಬಾಂಬ್ ಸ್ಫೋಟಗೊಂಡಿದೆ. ಆರ್​.ಜಿ ಕರ್ ಆಸ್ಪತ್ರೆಯಲ್ಲಿನ ಅತ್ಯಾಚಾರ ಸಂತ್ರಸ್ತೆ ತಾಯಿ ರತ್ನ ದೇವನಾಥ್​ ಮನೆ ಸಮೀಪ ನಡೆದ ಈ ಘಟನೆಯಲ್ಲಿ ಬಿಜೆಪಿಯ ಐವರು ಕಾರ್ಯಕರ್ತರಿಗೆ ಗಾಯಗಳಾಗಿವೆ. ಬಿಜೆಪಿ ನಾಯಕ ಹಾಗೂ ಸಿಎಂ ರೇಸ್​ನಲ್ಲಿರುವ ಸುವೇಂದು ಅಧಿಕಾರಿ ಅವರ ಆಪ್ತ ಸಹಾಯಕ ಚಂದ್ರನಾಥ್ ರಥ್ ಅವರನ್ನು ಗುಂಡಿಕ್ಕಿ ಕೊಲೆ ಮಾಡಲಾಗಿರುವ ವಿಚಾರ ದೇಶಾದ್ಯಂತ…

Read More

ಅಂತಾರಾಷ್ಟ್ರೀಯ ಮ್ಯಾಗಜಿನ್ ಅಲ್ಲಿ ಯಶ್ ಫೋಟೋ; ಕನ್ನಡ ಚಿತ್ರರಂಗಕ್ಕೆ ಹೆಮ್ಮೆಯ ಕ್ಷಣ – Kannada News | Yash on Variety Cover: ‘The Yash Effect’ and Toxic Film’s Global Impact

‘ಕೆಜಿಎಫ್’ ಮೂಲಕ ಇಡೀ ಭಾರತೀಯ ಚಿತ್ರರಂಗವನ್ನೇ ತಮ್ಮತ್ತ ತಿರುಗಿ ನೋಡುವಂತೆ ಮಾಡಿದ ರಾಕಿಂಗ್ ಸ್ಟಾರ್ ಯಶ್, ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡುತ್ತಿದ್ದಾರೆ. ಅವರ ನಟನೆಯ ‘ಟಾಕ್ಸಿಕ್’ ಸಿನಿಮಾ ವಿಶ್ವ ಮಟ್ಟದಲ್ಲಿ ತೆರೆಗೆ ಬರಲು ರೆಡಿ ಆಗಿದೆ. ಹೀಗಿರುವಾಗಲೇ ಅಂತಾರಾಷ್ಟ್ರೀಯ ನಿಯತಕಾಲಿಕೆ ‘ವೆರೈಟಿ’ ತನ್ನ ಕವರ್ ಪೇಜ್ ಮೇಲೆ ಯಶ್ ಅವರ ಫೋಟೋವನ್ನು ಫೀಚರ್ ಮಾಡಿದೆ. ‘ಇದು ಯಶ್ ಎಫೆಕ್ಟ್’ ಎಂದು ಬರೆದಿದೆ. 1.ಪ್ರತಿಷ್ಠಿತ ‘ವೆರೈಟಿ’ ಮ್ಯಾಗಜೀನ್ ಕವರ್ ಪುಟದಲ್ಲಿ ಯಶ್ 2. The Yash Effect’…

Read More

ಬಿಹಾರ ರಾಜಕೀಯದಲ್ಲಿ ಹೊಸ ಪರ್ವ: ಸಂಪುಟ ಸೇರಿದ ನಿತೀಶ್ ಪುತ್ರ ನಿಶಾಂತ್, 31 ನಾಯಕರಿಂದ ಮಂತ್ರಿಗಳಾಗಿ ಪ್ರಮಾಣ ವಚನ – Kannada News | Bihar Cabinet Expansion: Nitish Kumar’s Son Nishant Takes Oath, 31 New Ministers Sworn In

ಪಾಟ್ನಾ, ಮೇ 07: ಬಿಹಾರ(Bihar)ದ ಮಾಜಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಪುತ್ರ ನಿಶಾಂತ್ ಕುಮಾರ್ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.  ಬಿಹಾರ ರಾಜಕೀಯದ ಚದುರಂಗದಾಟದಲ್ಲಿ ಗುರುವಾರ ಮತ್ತೊಂದು ದೊಡ್ಡ ನಡೆ ಕಂಡುಬಂದಿದೆ. ಪಾಟ್ನಾದ ಐತಿಹಾಸಿಕ ಗಾಂಧಿ ಮೈದಾನದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಸಾಮ್ರಾಟ್ ಚೌಧರಿ ನೇತೃತ್ವದ ಬಿಜೆಪಿ-ಎನ್‌ಡಿಎ ಸರ್ಕಾರವು ತನ್ನ ಸಚಿವ ಸಂಪುಟವನ್ನು ವಿಸ್ತರಿಸಿದೆ. ಈ ವಿಸ್ತರಣೆಯ ಅತ್ಯಂತ ಗಮನಾರ್ಹ ಅಂಶವೆಂದರೆ, ಜೆಡಿಯು ನಾಯಕ ನಿತೀಶ್ ಕುಮಾರ್ ಅವರ ಪುತ್ರ ನಿಶಾಂತ್ ಕುಮಾರ್ ಅವರು ಮಂತ್ರಿಯಾಗಿ ಪ್ರಮಾಣ ವಚನ…

Read More