ಭಾರತದ ವಿದೇಶ ವಿನಿಮಯ ಮೀಸಲು ನಿಧಿಯಲ್ಲಿ ಚಿನ್ನದ ಪಾಲು ಗಣನೀಯ ಏರಿಕೆ – Kannada News | India forex reserves down by 4 billion USD, while gold share in forex reserves rises to 16pc
ನವದೆಹಲಿ, ಮೇ 3: ಭಾರತದ ವಿದೇಶ ವಿನಿಮಯ ಮೀಸಲು ನಿಧಿ (Forex Reserves) ಮತ್ತೆ 700 ಬಿಲಿಯನ್ ಡಾಲರ್ ಮಟ್ಟಕ್ಕಿಂತ ತುಸು ಕೆಳಗೆ ಇಳಿದಿದೆ. ಆರ್ಬಿಐ ಮೊನ್ನೆ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ಏಪ್ರಿಲ್ 24ರಂದು ಅಂತ್ಯಗೊಂಡ ವಾರದಲ್ಲಿ (ಏಪ್ರಿಲ್ 18-24) 4.82 ಬಿಲಿಯನ್ ಡಾಲರ್ನಷ್ಟು ಕುಸಿದಿದೆ. ಇದರೊಂದಿಗೆ ಒಟ್ಟು ಫಾರೆಕ್ಸ್ ರಿಸರ್ವ್ಸ್ 698.49 ಬಿಲಿಯನ್ ಡಾಲರ್ ಆಗಿದೆ. ಫಾರೆಕ್ಸ್ ರಿಸರ್ವ್ಸ್ನ ಎಲ್ಲಾ ಭಾಗಗಳೂ ಇಳಿದಿವೆ. ಫಾರೀನ್ ಕರೆನ್ಸಿ ಅಸೆಟ್ಗಳು 2.84 ಬಿಲಿಯನ್ ಡಾಲರ್ನಷ್ಟು ಕಡಿಮೆ ಆದರೆ,…