ಕಾರ್ಮಿಕರಿಗೆ ಸಿಹಿ ಸುದ್ದಿ: ದೊಡ್ಡಬಳ್ಳಾಪುರದ 100 ಹಾಸಿಗೆಗಳ ಇಎಸ್ಐ ಆಸ್ಪತ್ರೆ ಲೋಕಾರ್ಪಣೆ! – Kannada News | Doddaballapura ESI Hospital Inaugurated: 100 Bed Facility Opens After 3 Year Wait
ದೊಡ್ಡಬಳ್ಳಾಪುರದ 100 ಹಾಸಿಗೆಗಳ ಇಎಸ್ಐ ಆಸ್ಪತ್ರೆ ಲೋಕಾರ್ಪಣೆ! ದೊಡ್ಡಬಳ್ಳಾಪುರ, ಮೇ 03: ಕಳೆದ ಮೂರು ವರ್ಷಗಳಿಂದ ಉದ್ಘಾಟನೆಗಾಗಿ ಕಾಯುತ್ತಿದ್ದ ದೊಡ್ಡಬಳ್ಳಾಪುರದ ನೂತನ ಇಎಸ್ಐ (ESI) ಆಸ್ಪತ್ರೆಯು ಕೊನೆಗೂ ಲೋಕಾರ್ಪಣೆಗೊಂಡಿದೆ. ತಾಲೂಕಿನ ಹೊರವಲಯದ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಿಸಲಾದ ಈ ನೂರು ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆಯನ್ನು (Hospital) ಕೇಂದ್ರ ಕಾರ್ಮಿಕ ಸಚಿವ ಮನ್ಸುಕ್ ಮಾಂಡವೀಯ ಅವರು ಇಂದು ಅಧಿಕೃತವಾಗಿ ಉದ್ಘಾಟಿಸಿದ್ದಾರೆ. 101.14 ಕೋಟಿ ರೂ. ವೆಚ್ಚದ ಯೋಜನೆ ಕೇಂದ್ರ ಸರ್ಕಾರದ ವತಿಯಿಂದ ಸುಮಾರು 101.14 ಕೋಟಿ ರೂಪಾಯಿಗಳ ಬೃಹತ್…