Headlines

IPL 2026: ಡಗೌಟ್​ನಿಂದಲೇ ಹಾರ್ದಿಕ್​ಗೆ ನಾಯಕನ ಪಾಠ ಮಾಡಿದ ರೋಹಿತ್ ಶರ್ಮಾ – Kannada News | Rohit Sharma teaches Hardik Pandya a lesson in Captain from the dugout Watch the video

ಬೆಂಗಳೂರು (ಮೇ. 03): ಗಾಯದ ಕಾರಣದಿಂದಾಗಿ ರೋಹಿತ್ ಶರ್ಮಾ (Rohit Sharma) ಪ್ರಸ್ತುತ ಐಪಿಎಲ್ 2026 ರಲ್ಲಿ ಆಟದಿಂದ ಹೊರಗುಳಿದಿದ್ದಾರೆ. ಇಂಜುರಿ ಮಧ್ಯೆಯೂ ಅವರು ತಂಡದೊಂದಿಗೆ ಪ್ರತಿ ಪಂದ್ಯದಲ್ಲೂ ಕಾಣಿಸಿಕೊಳ್ಳುತ್ತಾರೆ, ಪ್ಲೇಯಿಂಗ್ ಇಲೆವೆನ್‌ನಲ್ಲಿ ಇಲ್ಲದಿದ್ದರೂ ಡಗೌಟ್​ನಲ್ಲಿದ್ದು ತಂಡಕ್ಕೆ ಸಪೋರ್ಟ್ ಮಾಡುತ್ತಿದ್ದಾರೆ. ಆರ್‌ಸಿಬಿ ವಿರುದ್ಧದ ಋತುವಿನ 20 ನೇ ಪಂದ್ಯದ ಸಮಯದಲ್ಲಿ, ರೋಹಿತ್ ಮಂಡಿರಜ್ಜು ಗಾಯಕ್ಕೆ ತುತ್ತಾದರು. ಗಂಭೀರ ಗಾಯವಾಗಿಲ್ಲ ಎಂದು ವರದಿಯಾಗಿದ್ದರೂ ಅವರನ್ನು ಇನ್ನೂ ಸಂಪೂರ್ಣ ಫೀಟ್ ಆಗಿಲ್ಲ. ರೋಹಿತ್ ಅವರ ಸಲಹೆಯಿಂದ ಸಿಎಸ್​ಕೆ ವಿಕೆಟ್‌ ಪತನ…

Read More

ಏನು ಮಾಡ್ತಿದ್ದೀರಾ? ರೋಹಿತ್ ಶರ್ಮಾ ಮುಖದಲ್ಲಿ ಹತಾಶೆ, ನೋವು, ನಿರಾಸೆ! – Kannada News | Rohit Sharma in the dugout unhappy MI vs CSK Match

ಐಪಿಎಲ್ 2026ರ ಅತ್ಯಂತ ನಿರೀಕ್ಷಿತ ಪಂದ್ಯಗಳಲ್ಲಿ ಒಂದಾದ ಮುಂಬೈ ಇಂಡಿಯನ್ಸ್ (MI) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ನಡುವಿನ ಹಣಾಹಣಿಯು ಅಭಿಮಾನಿಗಳಿಗೆ ಕೇವಲ ಆಟದ ರೋಮಾಂಚನವನ್ನಷ್ಟೇ ನೀಡಲಿಲ್ಲ, ಬದಲಿಗೆ ಒಂದು ಭಾವನಾತ್ಮಕ ಕ್ಷಣಕ್ಕೂ ಸಾಕ್ಷಿಯಾಯಿತು. ಮೇ 2ರಂದು ನಡೆದ ಈ ಪಂದ್ಯದಲ್ಲಿ ಮುಂಬೈ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಅವರು ಡಗೌಟ್‌ನಲ್ಲಿ ಅತ್ಯಂತ ನಿರಾಶೆ ಮತ್ತು ಅಸಮಾಧಾನದಿಂದ ಕುಳಿತಿದ್ದ ದೃಶ್ಯಗಳು ಈಗ ಕ್ರೀಡಾ ಲೋಕದಲ್ಲಿ ಚರ್ಚೆಗೆ ಕಾರಣವಾಗಿವೆ. ಈ ಪಂದ್ಯದ ವೇಳೆ ನಾಯಕ ಹಾರ್ದಿಕ್…

Read More

‘ಜೀ5’ ಮೂಲಕ ಒಟಿಟಿ ಅಂಗಳಕ್ಕೆ ಕಾಲಿಡುತ್ತಿದೆ ‘ಲವ್ ಮಾಕ್ಟೇಲ್ 3’ ಸಿನಿಮಾ; ಪ್ರಸಾರ ಯಾವಾಗ? – Kannada News | Love Mocktail 3 Movie OTT Release Darling Krishna new movie streaming on Zee5 on 8 May

ನಟ, ನಿರ್ದೇಶಕ ಡಾರ್ಲಿಂಗ್ ಕೃಷ್ಣ (Darling Krishna) ಅವರು ‘ಲವ್ ಮಾಕ್ಟೇಲ್’ ಸರಣಿಯ ಮೂರು ಸಿನಿಮಾಗಳ ಮೂಲಕ ಗೆಲುವು ಕಂಡಿದ್ದಾರೆ. ‘ಲವ್ ಮಾಕ್ಟೇಲ್’ ಮತ್ತು ‘ಲವ್ ಮಾಕ್ಟೇಲ್ 2’ ಯಶಸ್ಸಿನ ಬಳಿಕ ಅವರು ‘ಲವ್ ಮಾಕ್ಟೇಲ್ 3’ (Love Mocktail 3) ಸಿನಿಮಾಗೆ ನಿರ್ದೇಶನ ಮಾಡಿದರು. ಅಲ್ಲದೇ, ಅವರೇ ಮುಖ್ಯ ಭೂಮಿಕೆ ನಿಭಾಯಿಸಿದರು. ಮಾರ್ಚ್ 19ಕ್ಕೆ ಬಿಡುಗಡೆ ಆಗಿದ್ದ ಈ ಸಿನಿಮಾ ಹಿಟ್ ಆಗಿದೆ. ಈಗ ಒಟಿಟಿಯಲ್ಲಿ (OTT) ಈ ಸಿನಿಮಾವನ್ನು ನೋಡುವ ಸಮಯ ಹತ್ತಿರ ಆಗಿದೆ….

Read More

Video: ಸೂಪರ್​ ಮಾರ್ಕೆಟ್​​ ಲೂಟಿ ಮಾಡಲು ಬಂದ ಕಳ್ಳರಿಗೆ ಸಿಬ್ಬಂದಿ ಕಲಿಸಿದ ಪಾಠ ನೋಡಿ – Kannada News | Robbery Attempt in Brazil Foiled as Staff Fight Back, Suspects Arrested

ಬ್ರೆಜಿಲ್‌ನಲ್ಲಿ ನಡೆದ ಈ ದರೋಡೆ ಯತ್ನವು ಕಳ್ಳರ ಪಾಲಿಗೆ ಅಕ್ಷರಶಃ ದುಸ್ವಪ್ನವಾಗಿ ಪರಿಣಮಿಸಿತ್ತು. ಶಸ್ತ್ರಸಜ್ಜಿತರಾಗಿ ಬಂದ ದರೋಡೆಕೋರರಿಗೆ ಸೂಪರ್​ ಮಾರ್ಕೆಟ್​ನ ಸಿಬ್ಬಂದಿ ನೀಡಿರುವ ತಿರುಗೇಟು ಎಲ್ಲೆಡೆ ಚರ್ಚೆಯಾಗುತ್ತಿದೆ. ಬ್ರೆಜಿಲ್‌ನ ಮಳಿಗೆಯೊಂದಕ್ಕೆ ನುಗ್ಗಿದ ಶಸ್ತ್ರಸಜ್ಜಿತ ದರೋಡೆಕೋರರು, ಸಿಬ್ಬಂದಿಯನ್ನು ಬೆದರಿಸಿ ನಗದು ರಿಜಿಸ್ಟರ್‌ನಲ್ಲಿದ್ದ ಹಣವನ್ನು ಲೂಟಿ ಮಾಡಲು ಯತ್ನಿಸಿದ್ದಾರೆ. ದರೋಡೆಕೋರರಲ್ಲೊಬ್ಬ ಹಣವನ್ನು ಚೀಲಕ್ಕೆ ತುಂಬಿಸಿಕೊಳ್ಳುತ್ತಿದ್ದಾಗ, ಅಲ್ಲಿನ ಸಿಬ್ಬಂದಿ ಧೈರ್ಯ ಪ್ರದರ್ಶಿಸಿ ಮಚ್ಚಿನಿಂದ ಹಲ್ಲೆ ನಡೆಸಿ ಗಂಭೀರವಾಗಿ ಗಾಯಗೊಳಿಸಿದ್ದಾರೆ.ದರೋಡೆಕೋರರಲ್ಲಿ ಒಬ್ಬನನ್ನು ಬಂಧಿಸಿ ಈಗಾಗಲೇ ಜೈಲಿಗೆ ಕಳುಹಿಸಲಾಗಿದೆ. ಉದ್ಯೋಗಿಗಳ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ…

Read More

ಗಂಡನ ಎರಡನೇ ಮದುವೆ ತಡೆಯಲು ಮಂಟಪಕ್ಕೆ ಗರ್ಭಿಣಿ ಪತ್ನಿ ಎಂಟ್ರಿ! ಮುಂದೇನಾಯ್ತು ಗೊತ್ತಾ? – Kannada News | Pregnant Wife Stops Husband’s Second Marriage in Doddaballapura: Groom Detained

ಕುಮಾರ್ ಮತ್ತು ಆತನ ಗರ್ಭಿಣಿ ಪತ್ನಿ ದೊಡ್ಡಬಳ್ಳಾಪುರ, ಮೇ 03: ಮನೆಯವರ ಒತ್ತಡಕ್ಕೆ ಮಣಿದು ಮೊದಲ ಪತ್ನಿಗೆ ವಂಚಿಸಿ ಎರಡನೇ ಮದುವೆಯಾಗಲು ಮುಂದಾಗಿದ್ದ ವರನೊಬ್ಬನ ಮದುವೆಯನ್ನು ಗರ್ಭಿಣಿ ಪತ್ನಿ (Pregnant Wife) ಮಂಟಪಕ್ಕೇ ಬಂದು ನಿಲ್ಲಿಸಿರುವ ಘಟನೆ ದೊಡ್ಡಬಳ್ಳಾಪುರ ನಗರದ ಬಸವ ಭವನದಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ. ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದೆ. ಮನೆಯವರ ಒತ್ತಾಯಕ್ಕೆ ಎರಡನೇ ಮದುವೆ ಕೇರಳ ಮೂಲದ ಮಹಿಳೆಯನ್ನು ಪ್ರೀತಿಸಿ ಕಳೆದ ಒಂದು ವರ್ಷದ ಹಿಂದೆಯಷ್ಟೇ ಕುಮಾರ್…

Read More

IPL 2026: ಐಪಿಎಲ್​ ಅಂಗಳದಲ್ಲಿ CSK ಯುವ ದಾಂಡಿಗನ ಗನ್ ಸೆಲೆಬ್ರೇಷನ್! – Kannada News | IPL 2026: Kartik Sharma recreates MS Dhoni’s gun celebration

ಕ್ರಿಕೆಟ್ ಲೋಕದಲ್ಲಿ ಎಂ.ಎಸ್. ಧೋನಿ ಎಂದರೆ ಅದೊಂದು ಭಾವನೆ. ಅವರ ಆಟ, ನಾಯಕತ್ವದಷ್ಟೇ ಅವರ ಹಳೆಯ ಸ್ಟೈಲ್‌ಗಳು ಕೂಡ ಇಂದಿಗೂ ಅಭಿಮಾನಿಗಳ ಮನಸ್ಸಿನಲ್ಲಿ ಹಸಿರಾಗಿವೆ. ಇದಕ್ಕೆ ಸಾಕ್ಷಿ ಎಂಬಂತೆ, ಶನಿವಾರ (ಮೇ 2, 2026) ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ನ ಯುವ ಆಟಗಾರ ಕಾರ್ತಿಕ್ ಶರ್ಮಾ ಧೋನಿಯವರ ಐಕಾನಿಕ್ ‘ಗನ್ ಸೆಲೆಬ್ರೇಷನ್’ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧದ ಗೆಲುವಿನ ಹಂತದಲ್ಲಿ, ಟ್ರೆಂಟ್ ಬೌಲ್ಟ್ ಎಸೆತವನ್ನು ಬೌಂಡರಿಗಟ್ಟುವ ಮೂಲಕ…

Read More

ಕ್ಷುಲ್ಲಕ ಕಾರಣಕ್ಕೆ ಹರಿದ ನೆತ್ತರು: ಮದ್ಯಕ್ಕೆ ನೀರು ತರಲು ನಿರಾಕರಿಸಿದ್ದಕ್ಕೆ 9 ವರ್ಷದ ಬಾಲಕನಿಗೆ ಗುಂಡು ಹಾರಿಸಿ ಕೊಲೆ – Kannada News | Kasganj Boy Shot Dead for Refusing Water for Alcohol: Naming Ceremony Tragic

ಗುಂಡಿನ ದಾಳಿ ಸಾಂದರ್ಭಿಕ ಚಿತ್ರ Image Credit source: Shutterstock ಲಕ್ನೋ, ಮೇ 03:   ಉತ್ತರ ಪ್ರದೇಶದ ಕಾಸ್ಗಂಜ್ ಜಿಲ್ಲೆಯಲ್ಲಿ ಸಂಭ್ರಮದ ಮನೆಯೊಂದು ಮದ್ಯದ ಅಮಲಿನಿಂದಾಗಿ ಕ್ಷಣಮಾತ್ರದಲ್ಲಿ ಸ್ಮಶಾನ ಮೌನಕ್ಕೆ ಸಾಕ್ಷಿಯಾದ ದಾರುಣ ಘಟನೆ ನಡೆದಿದೆ. ಕೇವಲ ನೀರು ತರಲು ನಿರಾಕರಿಸಿದ ಎಂಬ ಕ್ಷುಲ್ಲಕ ಕಾರಣಕ್ಕೆ ಒಂಬತ್ತು ವರ್ಷದ ಬಾಲಕನನ್ನು ಗುಂಡಿಕ್ಕಿ ಕೊಲೆ(Murder) ಮಾಡಲಾಗಿದೆ. ಕಾಸ್ಗಂಜ್ ಜಿಲ್ಲೆಯ ಸಹವರ್ ಪೊಲೀಸ್ ಠಾಣೆ ವ್ಯಾಪ್ತಿಯ ಯಾಕುತ್‌ಗಂಜ್ ಗ್ರಾಮದಲ್ಲಿ ಕಳೆದ ಶುಕ್ರವಾರದಂದು ನಾಮಕರಣ ಸಮಾರಂಭವೊಂದನ್ನು ಆಯೋಜಿಸಲಾಗಿತ್ತು. ಸಂಬಂಧಿಕರು ಮತ್ತು ಗ್ರಾಮಸ್ಥರು…

Read More

ಹನಿಯೂರು ಚಂದ್ರೇಗೌಡ ಒಬ್ಬರಿಗೆ ನಟ, ಇನ್ನೊಬ್ಬರಿಗೆ ಪ್ರೊಫೆಸರ್: ತನಿಖೆ ವೇಳೆ ಸ್ಫೋಟಕ ಸತ್ಯ ಬಯಲು – Kannada News | RR Nagar Police Uncover Chandregowda’s physical Exploitation Ring, 20+ Women Victims

ಬೆಂಗಳೂರು, ಮೇ.3: ಮದುವೆಯಾಗುವುದಾಗಿ ನಂಬಿಸಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಆರೋಪಿ ಹನಿಯೂರು ಚಂದ್ರೇಗೌಡನ ಅಸಲಿ ಮುಖ ಈಗ ಬಯಲಾಗಿದೆ. ಆರ್.ಆರ್.ನಗರ ಪೊಲೀಸರ ತನಿಖೆಯ ವೇಳೆ ಈತನ ಕಾಮದಾಟದ ಸ್ಫೋಟಕ ಸತ್ಯಗಳು ಹೊರಬಂದಿವೆ. ಈ ಹಿಂದೆ ನಾನು ಬೆಂಗಳೂರಿನಲ್ಲಿ ರಾಮನಗರ ಮಕ್ಕಳ ಆಯೋಗದ ಸದಸ್ಯ ಎಂದು ಹೇಳಿಕೊಂಡು ಮಹಿಳೆಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಬಂಧಿತನಾಗಿದ್ದ, ಇದೀಗ ತನಿಖೆಯ ವೇಳೆ ಹಲವು ಸ್ಫೋಟಕ ಸತ್ಯ ಬೆಳಕಿಗೆ ಬಂದಿದೆ. ಆರೋಪಿ ಚಂದ್ರೇಗೌಡ ಒಂದೊಂದು ಮಹಿಳೆಗೆ ಒಂದೊಂದು ರೀತಿ…

Read More

ಮಾವು ಬೇಕೇ ಮಾವು! ಒಂದೇ ಸೂರಿನಡಿ ಬಗೆಬಗೆಯ ಮಾವಿನ ಹಣ್ಣುಗಳ ಮಾರಾಟ ಹೇಗಿದೆ ನೋಡಿ – Kannada News | Dharwad Mango Mela: Farmers Direct Sale to End Broker Menace and Offer Chemical Free Mangoes

ಸಾಮಾನ್ಯವಾಗಿ ದಲ್ಲಾಳಿಗಳು ರೈತರಿಂದ ಕಡಿಮೆ ಬೆಲೆಗೆ ಹಣ್ಣುಗಳನ್ನು ಖರೀದಿಸಿ, ಗ್ರಾಹಕರಿಗೆ ದುಬಾರಿ ದರಕ್ಕೆ ಮಾರಾಟ ಮಾಡುತ್ತಾರೆ. ಇದರಿಂದ ರೈತರಿಗೆ ಲಾಭ ಸಿಗುತ್ತಿರಲಿಲ್ಲ. ಈಗ ಧಾರವಾಡದ ಮಾವು ಬೆಳೆಗಾರರ ಬಳಗವು ನೇರವಾಗಿ ಗ್ರಾಹಕರಿಗೆ ಹಣ್ಣು ತಲುಪಿಸುವ ಮೂಲಕ ಈ ಮಧ್ಯವರ್ತಿಗಳ ವ್ಯವಸ್ಥೆಯನ್ನು ತಪ್ಪಿಸಿದೆ. ಇದರಿಂದ ಲಾಭಾಂಶವು ನೇರವಾಗಿ ರೈತರ ಕೈ ಸೇರುತ್ತಿದೆ. Source link

Read More

ಯಾರಿಗಾದರೂ ಹೇಳಿದ್ರೆ ಗಂಡ-ಮಗ ರಕ್ತ ಕಾರಿ ಸಾಯ್ತಾರೆ: ಮಾಟ-ಮಂತ್ರದ ಹೆಸರಲ್ಲಿ ಬ್ಯೂಟಿಷಿಯನ್ ಮೇಲೆ ಜ್ಯೋತಿಷಿಯಿಂದ ನಿರಂತರ ಅತ್ಯಾಚಾರ! – Kannada News | Bengaluru: ‘Pooja’ Pretext for Astrologer’s physical harassment, Beautician Victim Files Police Complaint

ಬೆಂಗಳೂರು, ಮೇ.3: ಪೂಜೆ ಮತ್ತು ದೀಕ್ಷೆಯ ನೆಪದಲ್ಲಿ ಬ್ಯೂಟಿಷಿಯನ್ ಒಬ್ಬರ ಮೇಲೆ ಜ್ಯೋತಿಷಿಯೊಬ್ಬ ನಿರಂತರವಾಗಿ ಅತ್ಯಾಚಾರ ಎಸಗಿರುವ ಘನಘೋರ ಘಟನೆ ಸಿ.ಕೆ. ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಗಂಡ ಮತ್ತು ಮಗನ ಮೇಲೆ ವಾಮಾಚಾರ ಮಾಡಿಸಿ ಅವರು ರಕ್ತ ಕಾರಿ ಸಾಯುವಂತೆ ಮಾಡುವುದಾಗಿ ಬೆದರಿಸಿ ಆರೋಪಿ ದೌರ್ಜನ್ಯ ಎಸಗಿದ್ದಾನೆ ಎಂದು ಹೇಳಲಾಗಿದೆ. ಈ ಬಗ್ಗೆ ಪೊಲೀಸರಿಗೆ ಮಹಿಳೆ ದೂರು ಕೂಡ ನೀಡಿದ್ದಾರೆ. ರಾಜಾಜಿನಗರದಲ್ಲಿ ಬ್ಯೂಟಿಷಿಯನ್ ಟ್ರೈನಿಂಗ್ ಸೆಂಟರ್ ನಡೆಸುತ್ತಿದ್ದ ಮಹಿಳೆಗೆ, ತನ್ನ ಸಹೋದರಿಯ ಅಡ್ಮಿಷನ್ ನೆಪದಲ್ಲಿ…

Read More