ಸಾಯುವ ಮುನ್ನ ತಮಗಿದ್ದ ಬೇಸರ ಹೇಳಿಕೊಂಡಿದ್ದ ಜೋ ಸೈಮನ್ – Kannada News | Joe Simon was upset that he did not get recognition from government
ಕನ್ನಡ ಚಿತ್ರರಂಗದ (Sandalwood) ಹಿರಿಯ ನಿರ್ದೇಶಕ, ನಟ ಜೋ ಸೈಮನ್ ಇಂದು (ಫೆಬ್ರವರಿ 13) ನಿಧನ ಹೊಂದಿದ್ದಾರೆ. ಫಿಲಂ ಚೇಂಬರ್ನಲ್ಲಿ ಆಯೋಜಿಸಿದ್ದ ಕಾರ್ಯಕಾರಿ ಸಭೆಯಲ್ಲಿ ಭಾಗವಹಿಸಿದ್ದಾಗ ಹೃದಯಾಘಾತ ಉಂಟಾಗಿ ಜೋ ಸೈಮನ್ ಅವರು ನಿಧನ ಹೊಂದಿದ್ದಾರೆ. ಹಲವಾರು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಹಿರಿಯ ನಿರ್ದೇಶಕ ಆಗಿದ್ದರೂ ಸಹ ಯಾವುದೇ ಸದ್ದಿಲ್ಲದೆ, ಸುದ್ದಿಗೆ ಹಪ-ಹಪಿಸದೆ ಸರಳವಾಗಿ ಬದುಕಿದ್ದರು, ಬಂದಿದ್ದನ್ನು ಬಂದಂತೆ ಸ್ವೀಕರಿಸುತ್ತಿದ್ದ ಅವರಿಗೆ ಯಾವುದೇ ಕೊರಗು ಇರಲಿಲ್ಲ, ಆದರೆ ಒಂದು ಸಣ್ಣ ಬೇಸರವಂತೂ ಇತ್ತು. ಆ ಬಗ್ಗೆ…