Headlines

ಸಮಂತಾ ಪತಿಯೊಟ್ಟಿಗೆ ಸಿನಿಮಾ ಮಾಡಲಿದ್ದಾರೆ ಸಲ್ಮಾನ್ ಖಾನ್ – Kannada News | Raj and DK to direct a super hero movie to Salman Khan

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ (Salman Khan) ಸದ್ಯ ತೆಲುಗಿನ ನಿರ್ಮಾಪಕ ದಿಲ್ ರಾಜು ನಿರ್ಮಿಸಿ, ವಂಶಿ ಪೈಡಪಲ್ಲಿ ನಿರ್ದೇಶನ ಮಾಡುತ್ತಿರುವ ಹೊಸ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಈ ಹಿಂದೆ ‘ಮಹರ್ಷಿ’, ‘ಮುನ್ನಾ’ ಸೇರಿದಂತೆ ಹಲವು ಸಿನಿಮಾಗಳನ್ನು ನಿರ್ದೇಶಿಸಿದ್ದ ವಂಶಿ ಇದೀಗ ಸಲ್ಮಾನ್ ಖಾನ್​​ಗಾಗಿ ಸಿನಿಮಾ ಮಾಡುತ್ತಿದ್ದಾರೆ. ಇತ್ತೀಚೆಗೆ ಸಲ್ಮಾನ್ ಖಾನ್ ಸಹ ದಕ್ಷಿಣದ ನಿರ್ದೇಶಕರುಗಳೊಟ್ಟಿಗೆ ಹೆಚ್ಚು ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ಮುರುಗದಾಸ್ ಜೊತೆಗೆ ‘ಸಿಖಂಧರ್’ ಮಾಡಿದ್ದರು. ಅದು ಫ್ಲಾಪ್ ಆಯ್ತು. ಈಗ ವಂಶಿ ಪೈಡಪಲ್ಲಿ…

Read More

Masala Dosa: ನಮ್ಮ ಮಸಾಲ ದೋಸೆಗೆ ವಿಶ್ವ ಮಟ್ಟದಲ್ಲಿ ಭಾರೀ ಡಿಮ್ಯಾಂಡ್​; ‘ಟಾಪ್ 10’ ಅತ್ಯುತ್ತಮ ಪ್ಯಾನ್‌ಕೇಕ್‌ಗಳ ಪಟ್ಟಿಯಲ್ಲಿ ಸ್ಥಾನ! – Kannada News | Masala Dosa Ranks 6th Globally: TasteAtlas Crowns It Among World’s Best Pancakes

ಮಸಾಲ ದೋಸೆಗೆ ವಿಶ್ವ ಮಟ್ಟದಲ್ಲಿ ಭಾರೀ ಡಿಮ್ಯಾಂಡ್Image Credit source: gemini ai ಭಾರತೀಯರ, ಅದರಲ್ಲೂ ವಿಶೇಷವಾಗಿ ದಕ್ಷಿಣ ಭಾರತದ ಹೆಮ್ಮೆಯ ಆಹಾರವಾದ ಮಸಾಲ ದೋಸೆ ಈಗ ಜಾಗತಿಕ ಮಟ್ಟದಲ್ಲಿ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದೆ. ಪ್ರಸಿದ್ಧ ಅಂತರಾಷ್ಟ್ರೀಯ ಆಹಾರ ಮಾರ್ಗದರ್ಶಿ ‘ಟೇಸ್ಟ್ ಅಟ್ಲಾಸ್’ (TasteAtlas) ಪ್ರಕಟಿಸಿರುವ ಮೇ 2026ರ ವಿಶ್ವದ ’50 ಅತ್ಯುತ್ತಮ ಪ್ಯಾನ್‌ಕೇಕ್‌ಗಳ’ ಪಟ್ಟಿಯಲ್ಲಿ ಮಸಾಲ ದೋಸೆಗೆ 6ನೇ ಸ್ಥಾನ ಲಭಿಸಿದೆ. ವಿಶ್ವದಾದ್ಯಂತ ಇರುವ ವಿವಿಧ ಬಗೆಯ ತಿಂಡಿಗಳನ್ನು ಹಿಂದಿಕ್ಕಿ, ಮಸಾಲ ದೋಸೆ ಈ…

Read More

ಯಾರನ್ನು ಕೇಳಿದ್ರೂ ಅಸ್ಸಾಂನಲ್ಲಿ ಬಿಜೆಪಿ ಬರುತ್ತೆ ಅಂತಿದ್ದಾರೆ, ನಾವೂ ಅದ್ನೇ ಹೇಳ್ತೀವಿ: ಜಿ ಪರಮೇಶ್ವರ! – Kannada News | Everyone says BJP will win in Assam, we say the same: Karnataka Home Minister G Parameshwara

ಬೆಂಗಳೂರು, ಮೇ 1: ಅಸ್ಸಾಂ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಷ್ಟೇನೂ ಆಶಾವಾದಿಯಾಗಿಲ್ಲ. ಸಮೀಕ್ಷೆಗಳು ಮಾತ್ರವಲ್ಲ, ಜನರೂ ಎಲ್ಲರೂ ಅಲ್ಲಿ ಬಿಜೆಪಿ ಗೆಲ್ಲುತ್ತದೆ ಎಂದು ಹೇಳುತ್ತಿದ್ದಾರೆ. ನಾವೂ ಹಾಗೆಯೇ ಭಾವಿಸಿದ್ದೇವೆ ಎಂದು ಗೃಹ ಸಚಿವ ಜಿ ಪರಮೇಶ್ವರ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಅಸ್ಸಾಂನಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ಸಮೀಕ್ಷೆಗಳು ಹೇಳುತ್ತಿವೆ ಮತ್ತು ನಮ್ಮೊಂದಿಗೆ ಮಾತನಾಡಿದವರೂ ಇದನ್ನೇ ಹೇಳುತ್ತಿದ್ದಾರೆ ಎಂದು ಹೇಳಿದ್ದಾರೆ. ಕೇರಳದಲ್ಲಿ ಯುಡಿಎಫ್ ಸರ್ಕಾರ ಅಧಿಕಾರಕ್ಕೆ ಬರುವ ಬಗ್ಗೆ…

Read More

ನೆಲಮಂಗಲದಲ್ಲಿ ಜ್ಯುವೆಲರಿಗೆ ಕನ್ನ: ಗೋಡೆ ಕೊರೆದು 70 ಕೆಜಿ ಬೆಳ್ಳಿ ಕಳ್ಳತನ – Kannada News | Nelamangala Jeweller Robbed: Burglars Drill Wall, Loot 70 KG Silver Worth 1.2 Crore

ನೆಲಮಂಗಲ, ಮೇ 1: ಹಾವನೂರು ಲೇಔಟ್‌ನಲ್ಲಿರುವ ಎಂಬಿ ಜ್ಯುವೆಲರ್ಸ್​​ನಲ್ಲಿ ಭಾರಿ ಕಳ್ಳತನ ನಡೆದಿದೆ. ಖದೀಮರು ಗೋಡೆ ಕೊರೆದು ಅಂಗಡಿಯೊಳಗೆ ಪ್ರವೇಶಿಸಿ, ಸುಮಾರು 70 ಕೆಜಿ ಬೆಳ್ಳಿಯ ಆಭರಣಗಳನ್ನು ದೋಚಿದ್ದಾರೆ. ದೋಚಿದ ಬೆಳ್ಳಿಯ ಮೌಲ್ಯ ಸುಮಾರು 1.2 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.  ಗೋಡೆಯನ್ನು ಕೊರೆದು, ಹಿಂಬದಿಯ ರೂಮ್‌ನ ಬಾಗಿಲು ಒಡೆದು ಒಳನುಗ್ಗಿರುವ ಕಳ್ಳರು, ರಾತ್ರೋರಾತ್ರಿ ಈ ಕೃತ್ಯ ಎಸಗಿದ್ದಾರೆ. ಸದ್ಯ…

Read More

ತಾಯಿಗೆ 80 ಕೋಟಿ ಮನೆ ಕೊಟ್ಟು ನಿಧನ ಹೊಂದಿದ ‘ಕಿರಾತಕ’ ನಟ; ಬೇಸರದಲ್ಲಿ ಗುಡಿಸಲು ಸೇರಿದ ಅಮ್ಮ – Kannada News | Daniel Balaji’s Mother’s Grief: Abandons Rs 80 Cr Mansion for Simple Hut

ಪೋಷಕರು ಬದುಕಿರುವಾಗಲೇ ಮಕ್ಕಳ ಸಾವು ಸಂಭವಿಸುವುದು ಬದುಕಿನ ಅತಿದೊಡ್ಡ ಆಘಾತ. ಇಂತಹದ್ದೇ ಒಂದು ಹೃದಯವಿದ್ರಾವಕ ಘಟನೆ ತಮಿಳು ಚಿತ್ರರಂಗದ ಹೀರೋ ಮನೆಯಲ್ಲಿ ನಡೆದಿತ್ತು. ಖ್ಯಾತ ನಟ ಡೇನಿಯಲ್ ಬಾಲಾಜಿ ಅವರ ನಿಧನದ ನಂತರ ಅವರ ತಾಯಿ ರಾಜಲಕ್ಷ್ಮಿ ಅವರ ಪರಿಸ್ಥಿತಿ ಕಂಡು ಅಭಿಮಾನಿಗಳು ಕಣ್ಣೀರು ಹಾಕುತ್ತಿದ್ದಾರೆ. ಅವರು ಬಂಗಲೆ ತೊರೆದು ಸಣ್ಣ ಮನೆಯಲ್ಲಿ ವಾಸವಾಗುತ್ತಿದ್ದಾರೆ. ಕೇವಲ ತಮಿಳು ಮಾತ್ರವಲ್ಲದೆ ಕನ್ನಡ ಚಿತ್ರರಂಗದಲ್ಲೂ ಡೇನಿಯಲ್ ಬಾಲಾಜಿ ತಮ್ಮ ಛಾಪು ಮೂಡಿಸಿದ್ದರು. ಯಶ್ ಅಭಿನಯದ ಸೂಪರ್ ಹಿಟ್ ಸಿನಿಮಾ ‘ಕಿರಾತಕ’…

Read More

‘ಧುರಂಧರ್’ ನಿರ್ದೇಶಕನ ಮೇಲೆ ಕತೆ ಕದ್ದ ಆರೋಪ: ಕರ್ನಾಟಕ ಹೈಕೋರ್ಟ್ ಹೇಳಿದ್ದೇನು? – Kannada News | Karnataka High Court refuse to cancel Dhurandhar 2 movie CBFC certificate

ರಣ್ವೀರ್ ಸಿಂಗ್ (Ranveer Singh) ನಟನೆಯ ‘ಧುರಂಧರ್’ ಮತ್ತು ‘ಧುರಂಧರ್ 2’ ಸಿನಿಮಾಗಳು ಭಾರಿ ದೊಡ್ಡ ಹಿಟ್ ಆಗಿವೆ. ಎರಡೂ ಸಿನಿಮಾಗಳ ಒಟ್ಟು ಕಲೆಕ್ಷನ್ 3000 ಕೋಟಿಗಳನ್ನು ದಾಟಿದೆ. ಸಿನಿಮಾ ಅನ್ನು ಜನ ಮುಗಿಬಿದ್ದು ನೋಡುತ್ತಿದ್ದಾರೆ. ಸಿನಿಮಾ ನಿರ್ದೇಶಿಸಿರುವ ಆದಿತ್ಯ ಧರ್ ಈಗ ಭಾರತದ ಸ್ಟಾರ್ ನಿರ್ದೇಶಕರುಗಳಲ್ಲಿ ಒಬ್ಬರೆನಿಸಿಕೊಂಡಿದ್ದಾರೆ. ಆದರೆ ಆದಿತ್ಯ ಧರ್ ಮೇಲೆ ನಿರ್ದೇಶಕರೊಬ್ಬರು ಕತೆ ಕದ್ದ ಆರೋಪವನ್ನು ಮಾಡಿದ್ದರು, ಅಲ್ಲದೆ, ಕರ್ನಾಟಕ ಹೈಕೋರ್ಟ್​​ಗೆ ಅರ್ಜಿ ಸಲ್ಲಿಸಿ, ಸಿನಿಮಾಗಳ ಸಿಬಿಎಫ್​​ಸಿ ಪ್ರಮಾಣ ಪತ್ರವನ್ನು ರದ್ದು ಮಾಡುವಂತೆ…

Read More

ಬೆಂಗಳೂರು: ಕುಡಿದ ನಶೆಯಲ್ಲಿ ಜನರ ಮೇಲೆ ಮಚ್ಚು, ಲಾಂಗು ಬೀಸಿದ ಪುಂಡರು, ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ – Kannada News | Rowdyism in Bengaluru: Armed Gang Creates Ruckus in Nandini Layout, CCTV Captures Threat with Machete

ಬೆಂಗಳೂರು, ಮೇ 1: ಕುಡಿದ ನಶೆಯಲ್ಲಿ ಪುಂಡರ ಗ್ಯಾಂಗ್‌ವೊಂದು ಮಚ್ಚು ಲಾಂಗು ಹಿಡಿದು ದಾಂಧಲೆ ನಡೆಸಿದ ಘಟನೆ ಬೆಂಗಳೂರಿನ ನಂದಿನಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಏಪ್ರಿಲ್ 25ರಂದು ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಪುಂಡರ ಅಟ್ಟಹಾಸಕ್ಕೆ ಸ್ಥಳೀಯರು ಬೆಚ್ಚಿಬೀಳುವಂತಾಗಿದೆ. ಏಪ್ರಿಲ್ 25ರಂದು ಸಂಜೆ ಸುಮಾರು 4:50ರ ಸಮಯದಲ್ಲಿ ಯುವಕನೊಬ್ಬ ಏರಿಯಾದಲ್ಲಿ ಮಚ್ಚು ಹಿಡಿದು ಓಡಾಡಿ ಸಾರ್ವಜನಿಕರಿಗೆ ಬೆದರಿಕೆ ಹಾಕಿದ್ದಾನೆ. ಪ್ರಶ್ನಿಸಿದ ಅಕ್ಕಪಕ್ಕದ ಮನೆಯವರಿಗೂ ಮಚ್ಚು ತೋರಿಸಿ ಹೆದರಿಸಿದ್ದಾನೆ. ಇದಾದ ಬಳಿಕ ಸಂಜೆ…

Read More

‘ಕೆಡಿ’ ಚಿತ್ರದಲ್ಲಿಲ್ಲ ‘ಸರ್ಸೆ ಸರ್ಸೆ’ ಹಾಡು; ಅಪ್​​ಡೇಟ್​ ಕೊಟ್ಟ ಪ್ರೇಮ್

‘ಕೆಡಿ’ ಸಿನಿಮಾದ ‘ಸರ್ಸೆ ಸರ್ಸೆ’ ಹಾಡು ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ವಿವಾದದ ಬಳಿಕ ಯೂಟ್ಯೂಬ್​​ನಿಂದಲೇ ಹಾಡನ್ನು ತೆಗೆಯಲಾಗಿದೆ. ಈಗ ಸಿನಿಮಾದಲ್ಲೂ ಈ ಹಾಡು ಇಲ್ಲ. ಈ ಬಗ್ಗೆ ಪ್ರೇಮ್ ಮಾತನಾಡಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಹಾಡನ್ನು ಸಿನಿಮಾದಲ್ಲಿ ಸೇರ್ಪಡೆ ಮಾಡೋದಾಗಿ ಅವರು ಹೇಳಿದ್ದಾರೆ. ಇದನ್ನು ಕೇಳಿ ಪಡ್ಡೆ ಹುಡುಗರು ಖುಷಿಪಟ್ಟಿದ್ದಾರೆ. ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ. Source link

Read More

West Bengal Assembly Election 2026: ಯಾವುದೇ ಅಕ್ರಮ ನಡೆದಿಲ್ಲ, ಸ್ಟ್ರಾಂಗ್ ರೂಮ್‌ಗಳು ಸುರಕ್ಷಿತವಾಗಿವೆ ಎಂದ ಚುನಾವಣಾ ಆಯೋಗ – Kannada News | Election Commission Dismisses TMC’s EVM Allegations in West Bengal, Assures Strong Room Security

ಕೋಲ್ಕತ್ತಾ, ಮೇ 1: ಮತ ಎಣಿಕೆಗೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ ಪಶ್ಚಿಮ ಬಂಗಾಳ(West Bengal) ದಲ್ಲಿ ಆಡಳಿತಾರೂಢ ಟಿಎಂಸಿ ಮತ್ತು ಚುನಾವಣಾ ಆಯೋಗದ ನಡುವೆ ಶೀತಲ ಸಮರ ಏರ್ಪಟ್ಟಿದೆ. ಮತಪೆಟ್ಟಿಗೆಗಳನ್ನು ತಿರುಚಲಾಗುತ್ತಿದೆ ಎಂದು ಆರೋಪಿಸಿ ಟಿಎಂಸಿ ಸಿಸಿಟಿವಿ ದೃಶ್ಯಾವಳಿಗಳನ್ನು ಬಿಡುಗಡೆ ಮಾಡಿದ ಬೆನ್ನಲ್ಲೇ, ಆಯೋಗವು ಈ ಆರೋಪಗಳನ್ನು ನಿರಾಕರಿಸಿದೆ. ಪಕ್ಷದ ಪ್ರತಿನಿಧಿಗಳಿಲ್ಲದೆ ಮತಪೆಟ್ಟಿಗೆಗಳನ್ನು ತೆರೆಯಲಾಗುತ್ತಿದೆ ಎಂದು ಟಿಎಂಸಿ ಆರೋಪಿಸಿದೆ. ಇವಿಎಂ ಯಂತ್ರಗಳನ್ನು ಬದಲಾಯಿಸಲು ಸಂಚು ರೂಪಿಸಲಾಗುತ್ತಿದೆ, 24 ಗಂಟೆಗಳ ಕಾಲ ಜಾಗರೂಕರಾಗಿರಿ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ…

Read More

ಶಾರುಖ್​-ದೀಪಿಕಾ ‘ಕಿಂಗ್’ ಚಿತ್ರಕ್ಕೆ ಲೀಕ್ ಕಾಟ; ಪ್ರಮುಖ ದೃಶ್ಯವೇ ಸೋರಿಕೆ – Kannada News | Shah Rukh Khan, Deepika Padukone ‘King’ Movie Set Photos Leaked! Pregnant Deepika Shines

ಚಿತ್ರರಂಗಕ್ಕೆ ಅದರಲ್ಲೂ ಬಿಗ್ ಬಜೆಟ್ ಸಿನಿಮಾಗಳಿಗೆ ಸೆಟ್​ ಫೋಟೋ ಅಋವ ವಿಡಿಯೋ ಲೀಕ್ ಅನ್ನೋದು ಸರ್ವೇ ಸಾಮಾನ್ಯ ಎಂಬಂತಾಗಿದೆ. ಇದು ಚಿತ್ರತಂಡದ ಮೇಲಿನ ನಿರೀಕ್ಷೆಯನ್ನು ಹಾಳು ಮಾಡುತ್ತದೆ. ಈಗ ಬಾಲಿವುಡ್ ನಟ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಕಿಂಗ್’ ಚಿತ್ರೀಕರಣದ ಫೋಟೋಗಳು ಲೀಕ್ ಆಗಿವೆ. ಈ ಚಿತ್ರಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ. ದಕ್ಷಿಣ ಆಫ್ರಿಕಾದ ಕೇಪ್ ಟೌನ್‌ನಲ್ಲಿ ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಸೆಟ್‌ನಿಂದ ಹೊರಬಂದಿರುವ ಫೋಟೋ ಹಾಗೂ ವೀಡಿಯೋಗಳಲ್ಲಿ…

Read More