ಆಲಿಕಲ್ಲು ಸಹಿತ ಗಾಳಿ ಮಳೆಗೆ ಬೆಚ್ಚಿದ ಬೆಂಗಳೂರು: ವರುಣನ ಅಬ್ಬರಕ್ಕೆ ಸಾಲು ಸಾಲು ಅನಾಹುತ – Kannada News | Heavy Summer Rain in Bengaluru Causes Widespread Waterlogging and Fallen Trees
ಬೆಂಗಳೂರು, ಏಪ್ರಿಲ್ 29: ಭಾರಿ ಆಲಿಕಲ್ಲು ಸಹಿತ ಮಳೆ ಸುರಿದಿದ್ದು, ನಗರದಾದ್ಯಂತ ಜನಜೀವನ ಅಸ್ತವ್ಯಸ್ತಗೊಂಡಿದೆ. ಶಾಂತಿನಗರ ಸುತ್ತಮುತ್ತಲ ಹಲವು ರಸ್ತೆಗಳು ಜಲಾವೃತಗೊಂಡಿದ್ದು, ನಿಂತಿದ್ದ ವಾಹನಗಳು, ಕಾರುಗಳು ಸಂಪೂರ್ಣವಾಗಿ ಮುಳುಗಿವೆ. ಮಳೆಯ ತೀವ್ರತೆಗೆ ಗಾಳಿಯ ಆರ್ಭಟವೂ ಸೇರಿಕೊಂಡಿದ್ದು, ಒಣಗಿದ ಮರದ ರೆಂಬೆಗಳು ಮತ್ತು ಕೊಂಬೆಗಳು ಗಾಳಿಯಲ್ಲೇ ಹಾರಿ ಬಂದಿವೆ. ಆಲಿಕಲ್ಲು ಸಹಿತ ಭಾರಿ ಮಳೆಯಿಂದಾಗಿ ಕಮಿಷನರ್ ಕಚೇರಿ ಬಳಿ ಸೇರಿದಂತೆ ನಗರದ ಹಲವೆಡೆ ಮರದ ಕೊಂಬೆಗಳು ಮುರಿದು ಬಿದ್ದಿವೆ. ವಿದ್ಯುತ್ ಕಂಬಗಳಿಗೂ ಹಾನಿಯಾಗಿರುವ ಸಾಧ್ಯತೆ ಇದೆ. ಕಳೆದ ಎರಡು…