ರಣಾಂಗಣವಾದ ಕುವೆಂಪು ವಿಶ್ವವಿದ್ಯಾಲಯದ ಆವರಣ: ಕುಲಪತಿ ಕಚೇರಿಯ ಕುರ್ಚಿ, ಪಾಟ್ಗಳು ಧ್ವಂಸ – Kannada News | NSUI Leads Student Uprising at Kuvempu University Against VC, Office Vandalised
ರಣಾಂಗಣವಾದ ಕುವೆಂಪು ವಿಶ್ವವಿದ್ಯಾಲಯದ ಆವರಣ ಶಿವಮೊಗ್ಗ, ಏಪ್ರಿಲ್ 29: ಕುವೆಂಪು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಕುಲಪತಿಗಳ ವಿರುದ್ಧ ತೀವ್ರ ಪ್ರತಿಭಟನೆ ನಡೆಸಿದ್ದಾರೆ. ವಿಶ್ವವಿದ್ಯಾಲಯದ ಆವರಣವು ರಣರಂಗವಾಗಿ ಮಾರ್ಪಟ್ಟಿದ್ದು, NSUI ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆ ವೇಳೆ ಕುಲಪತಿಗಳ ಕಚೇರಿಯಲ್ಲಿದ್ದ ಕುರ್ಚಿ ಮತ್ತು ಪಾಟ್‌ಗಳನ್ನು ದ್ವಂಸ ಮಾಡಲಾಗಿದೆ. ಅಲ್ಲದೆ, ಕುಲಪತಿ ಕಚೇರಿಯ ನಾಮಫಲಕಕ್ಕೆ ಮಸಿ ಬಳಿದು ತಮ್ಮ ಅಸಮಾಧಾನ ಹೊರಹಾಕಿದ್ದು, ಸ್ಥಳದಲ್ಲಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಆಕ್ರೋಶಕ್ಕೆ ಕಾರಣ ಏನು? ಕಳೆದ ಕೆಲವು ತಿಂಗಳಿಂದ ವಿದ್ಯಾರ್ಥಿ ವೇತನ…