ಧಮ್ ಇದ್ರೆ ಚುನಾವಣೆಗೆ ನಿಲ್ಲಲು ಹೇಳಿ: ಚೇತನ್ಗೆ ನಿಖಿಲ್ ಕುಮಾರಸ್ವಾಮಿ ಓಪನ್ ಚಾಲೆಂಜ್
ಮೈಸೂರು, ಏಪ್ರಿಲ್ 28: ತಮ್ಮ ಬಗ್ಗೆ ಮಾತನಾಡಿದ್ದ ನಟ ಚೇತನ್ ಅಹಿಂಸ ಬಗ್ಗೆ ಯುವ ಜೆಡಿಎಸ್ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕಿಡಿ ಕಾರಿದ್ದಾರೆ. ಧಮ್ ಇದ್ದರೆ ಬಂದು ಅವರಿಗೆ ಚುನಾವಣೆಗೆ ನಿಲ್ಲಲು ಹೇಳಿ. ಅವರಂತೆ ಮನೆಯಲ್ಲಿ ಕುಳಿತು ಟ್ವಿಟ್ಟರ್ನಲ್ಲಿ ನಾನೂ ಸಾವಿರ ಬರೆಯುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವರನಟ ಡಾ. ರಾಜ್ಕುಮಾರ್ ಅವರ ಬಗ್ಗೆ ಚೇತನ್ ಮಾತನಾಡಿದ್ದನ್ನು ನಿಖಿಲ್ ಇತ್ತೀಚೆಗೆ ಖಂಡಿಸಿದ್ದರು. ಅಣ್ಣಾವ್ರ ಹೆಸರು ಹೇಳಲು, ಅವರ ಬಗ್ಗೆ ಮಾತನಾಡಲು ನಟ ಚೇತನ್ ಅವರಿಗೆ ಯೋಗ್ಯತೆ ಇಲ್ಲ….