Headlines

Chanakya Niti: ಈ ಗುಣಗಳಿರುವ ಸ್ನೇಹಿತರು ಎಂದಿಗೂ ಮೋಸ ಮಾಡಲಾರರು ಎನ್ನುತ್ತಾರೆ ಚಾಣಕ್ಯ – Kannada News | Chanakya Niti: According to Acharya Chanakya, friends with these qualities are very good

ಸ್ನೇಹ (Friendship) ಎನ್ನುವುದು ಭಾಷೆ, ಜಾತಿ, ಧರ್ಮ ಎಲ್ಲವನ್ನು ಮೀರಿದ ಸುಂದರ ಬಂಧ. ಪ್ರತಿಯೊಬ್ಬರ ಜೀವನದಲ್ಲೂ ಫ್ರೆಂಡ್ಸ್‌ ಇದ್ದೇ ಇರುತ್ತಾರೆ. ಸ್ನೇಹಿತರು ನಮ್ಮ ಇಡೀ ಜೀವನವನ್ನು ಸುಂದರವಾಗಿಸಬಲ್ಲರು. ಅಲ್ಲದೆ ನಮ್ಮ ಜೀವನವನ್ನು ಉತ್ತಮವಾಗಿಸಬಲ್ಲರು. ಅದೇ ರೀತಿ ಕೆಲವು ಸ್ನೇಹಿತರು ಸ್ವಾರ್ಥ ಮತ್ತು ದುರಾಸೆಯಿಂದ ಇನ್ನೊಬ್ಬರ ಜೀವನವನ್ನೇ ಹಾಳು ಮಾಡಬಲ್ಲರು. ಇನ್ನೂ ಕೆಲ ಸ್ನೇಹಿತರು ಪ್ರತಿಯೊಂದು ಹಂತದಲ್ಲೂ ನಿಮಗೆ ಬೆಂಬಲವಾಗಿ ನಿಲ್ಲುತ್ತಾರೆ. ಅವರು ಎಂದಿಗೂ ಮೋಸ ಮಾಡಲಾರರು ಎಂದು ಆಚಾರ್ಯ ಚಾಣಕ್ಯರು. ಹಾಗಿದ್ರೆ ಯಾವ ಗುಣಗಳನ್ನು ಹೊಂದಿರುವ ಸ್ನೇಹಿತರು ಉತ್ತಮರು ಎಂಬುದನ್ನು ನೋಡೋಣ.

ಇಂತಹ ಸ್ನೇಹಿತರು ಎಂದಿಗೂ ಮೋಸ ಮಾಡಲಾರರು:

 ಮುಕ್ತ ಮತ್ತು ಸ್ಪಷ್ಟವಾಗಿ ಮಾತನಾಡುವ ಜನರು: ಚಾಣಕ್ಯರ ಪ್ರಕಾರ, ಮುಕ್ತ ಮತ್ತು ಪ್ರಾಮಾಣಿಕವಾಗಿ ಮಾತನಾಡುವ ಜನರು ಯಾರಿಗೂ ನೋವುಂಟು ಮಾಡಲು ಬಯಸುವುದಿಲ್ಲ. ಅವರು ಪರಿಶುದ್ಧ ಹೃದಯವನ್ನು ಹೊಂದಿದ್ದು, ನೀವು ಇಂತಹ ಜನರೊಂದಿಗೆ ಸ್ನೇಹಿತರಾಗಿದ್ದರೆ, ಅವರು ಎಂದಿಗೂ ನಿಮಗೆ ದ್ರೋಹ ಮಾಡುವುದಿಲ್ಲ.

ದುರಾಸೆಯಿಲ್ಲದ ವ್ಯಕ್ತಿ: ದುರಾಸೆಯಿಲ್ಲದ ನಿಸ್ವಾರ್ಥ ಜನರನ್ನು ಕಣ್ಣು ಮುಚ್ಚಿ ನಂಬಬಹುದು ಎನ್ನುತ್ತಾರೆ ಆಚಾರ್ಯ ಚಾಣಕ್ಯರು. ಇತರರ ವಸ್ತುಗಳ ಮೇಲೆ ಆಸೆ ಪಡದ ಜನರು ಯಾರಿಗೂ ಮೋಸ ಮಾಡುವುದಿಲ್ಲ. ಅಂತಹ ಜನರೊಂದಿಗೆ ಸ್ನೇಹ ಬೆಳೆಸುವುದು ಉತ್ತಮ.

ಸಹಾಯ ಮಾಡುವ ಜನರು: ಜೀವನದಲ್ಲಿ ನಿಸ್ವಾರ್ಥವಾಗಿ ಕೆಲಸ ಮಾಡುವ ಜನರೊಂದಿಗೆ ಯಾವಾಗಲೂ ಸ್ನೇಹಿತರಾಗಿರಬೇಕು. ಅಂತಹ ಜನರು ಎಂದಿಗೂ ಯಾರಿಗೂ ಯಾವುದೇ ಹಾನಿ ಮಾಡುವುದಿಲ್ಲ. ಅವರು ಸದಾ ನಿಮಗೆ ಒಳ್ಳೆಯದನ್ನೇ ಬಯಸುತ್ತಾರೆ ಎನ್ನುತ್ತಾರೆ ಚಾಣಕ್ಯ.

ಇದನ್ನೂ ಓದಿ: 2026 ರಲ್ಲಿ ಯಶಸ್ಸು ನಿಮ್ಮದಾಗಲು ಆಚಾರ್ಯ ಚಾಣಕ್ಯರ ಸಲಹೆಗಳನ್ನು ಅನುಸರಿಸಿ

ಸತ್ಯವಂತರು: ನಿಮಗೆ ಯಾವಾಗಲೂ ಸತ್ಯವನ್ನೇ ಹೇಳುವ ಸ್ನೇಹಿತರಿದ್ದರೆ, ನೀವು ಅದೃಷ್ಟವಂತರು. ಅವರು ಎಂದಿಗೂ ಮೋಸ ಮಾಡುವುದಿಲ್ಲ, ಅವರು ಸದಾ ನಿಮ್ಮೊಂದಿಗೆ ಇರುತ್ತಾರೆ ಎನ್ನುತ್ತಾರೆ ಆಚಾರ್ಯ ಚಾಣಕ್ಯರು. ಇದಲ್ಲದೆ ಇತರರ ವ್ಯವಹಾರಗಳಲ್ಲಿ ಮೂಗು ತುರಿಸದೆ ತಮ್ಮ ಪಾಡಿಗೆ ಇರುವ ಜನರು ಸಹ ಯಾರಿಗೂ ಹಾನಿ ಮಾಡುವುದಿಲ್ಲ. ಅವರು ಶುದ್ಧ ಹೃದಯವರಾಗಿರುತ್ತಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *