
ಈಗಿನ ಕಾಲಘಟ್ಟದಲ್ಲಿ ಯುವ ಜನ ಜಿಮ್ಗೆ ಹೋಗಿ ವ್ಯಾಯಾಮ ಮಾಡಿಕೊಂಡು ದೈಹಿಕವಾಗಿ ಸದೃಢವಾಗಿರುತ್ತಾರೆ. ಆದರೆ ಹೆಚ್ಚಿನವರು ಮಾನಸಿಕವಾಗಿ ದುರ್ಬಲರಾಗಿರುತ್ತಾರೆ. ಹೌದು ಜೀವನದಲ್ಲಿ ಎದುರಾಗುವ ಕಷ್ಟ ಸೋಲುಗಳಿಗೆ ಭಯಪಟ್ಟು ಪ್ರಾಣ ಕಳೆದುಕೊಳ್ಳುತ್ತಾರೆ, ಸಣ್ಣಪುಟ್ಟ ವಿಚಾರಗಳಿಗೆ ಖಿನ್ನತೆಗೆ ಒಳಗಾಗುತ್ತಾರೆ. ಈ ರೀತಿ ದುರ್ಬಲ ಮನಸ್ಥಿತಿಯಿದ್ದರೆ ಎಂದಿಗೂ ಜೀವನದಲ್ಲಿ ಯಶಸ್ಸನ್ನು (Success) ಸಾಧಿಸಲು ಸಾಧ್ಯವಿಲ್ಲ, ಧೈರ್ಯದಿಂದ ಬದುಕಲು ಸಾಧ್ಯವಿಲ್ಲ. ಒಬ್ಬ ವ್ಯಕ್ತಿ ಒಳಗಿನಿಂದ ಬಲಶಾಲಿಯಾಗಿದ್ದಾಗ ಮಾತ್ರ ಎಂತಹದ್ದೇ ಸವಾಲುಗಳನ್ನು ಭಯವಿಲ್ಲದೆ ಎದುರಿಸಲು ಎನ್ನುತ್ತಾರೆ ಆಚಾರ್ಯ ಚಾಣಕ್ಯ. ಅದೇ ರೀತಿ ಮಾನಸಿಕವಾಗಿ ಬಲಶಾಲಿಯಾಗಲು ಒಂದಷ್ಟು ಸಲಹೆಗಳನ್ನು ಸಹ ನೀಡಿದ್ದಾರೆ. ಈ ಸಲಹೆಗಳನ್ನು ಪಾಲಿಸಿದರೆ ನಿಮ್ಮ ಜೀವನವು ಸಕಾರಾತ್ಮಕ ರೀತಿಯಲ್ಲಿ ಬದಲಾಗುವುದಂತೂ ನಿಜ.
ಮಾನಸಿಕವಾಗಿ ಬಲಶಾಲಿಯಾಗಲು ಏನು ಮಾಡಬೇಕು?
ನಿಮ್ಮ ಆಲೋಚನೆಯನ್ನು ಸಕಾರಾತ್ಮಕವಾಗಿ ಮತ್ತು ಸ್ಪಷ್ಟವಾಗಿ ಇರಿಸಿ: ನೀವು ನಿಮ್ಮನ್ನು ಒಳಗಿನಿಂದ ಬಲಪಡಿಸಿಕೊಳ್ಳಲು ಬಯಸಿದರೆ, ಸಕಾರಾತ್ಮಕವಾಗಿ ಆಲೋಚಿಸುವುದನ್ನು ಕಲಿಯಿರಿ, ನಿಮ್ಮ ಆಲೋಚನೆಗಳು ಸ್ಪಷ್ಟವಾಗಿರಿಸಿ. ನಿಮ್ಮ ಮನಸ್ಸು ನಕಾರಾತ್ಮಕ ಆಲೋಚನೆಗಳಿಂದ ತುಂಬಿದ್ದರೆ, ನೀವು ಜೀವನದಲ್ಲಿ ಎಂದಿಗೂ ಮುಂದುವರಿಯಲು ಸಾಧ್ಯವಾಗುವುದಿಲ್ಲ. ಚಾಣಕ್ಯರ ಪ್ರಕಾರ, ಸಕಾರಾತ್ಮಕ ಮನಸ್ಥಿತಿಯು ಸ್ಪಷ್ಟ ಗುರಿಗಳನ್ನು ಮತ್ತು ಆತ್ಮವಿಶ್ವಾಸವನ್ನು ಕಾಪಾಡಿಕೊಳ್ಳಲು ಸಾಧ್ಯ.
ಶಿಸ್ತಿನಿಂದ ಬದುಕಲು ಪ್ರಾರಂಭಿಸಿ: ಶಿಸ್ತು ನಿಮ್ಮ ಜೀವನವನ್ನು ಸಮತೋಲನ ಮತ್ತು ಸಂಘಟಿತವಾಗಿಸುತ್ತದೆ. ದೈನಂದಿನ ದಿನಚರಿಯನ್ನು ಸರಿಯಾಗಿ ಪಾಲಿಸುವುದು, ಸಮಯಕ್ಕೆ ಸರಿಯಾಗಿ ಕೆಲಸಗಳನ್ನು ಪೂರ್ಣಗೊಳಿಸುವುದು ಮತ್ತು ಸೋಮಾರಿತನವನ್ನು ತಪ್ಪಿಸುದರಿಂದ ಒಬ್ಬ ವ್ಯಕ್ತಿಯು ಬಲಶಾಲಿಯಾಗಲು ಸಾಧ್ಯವಾಗುತ್ತದೆ. ಅದೇ ಶಿಸ್ತು ಇಲ್ಲದೆ, ಜೀವನದಲ್ಲಿ ಯಶಸ್ಸನ್ನು ಸಾಧಿಸುವುದು ತುಂಬಾ ಕಷ್ಟಕರವಾಗುತ್ತದೆ ಎಂದು ಚಾಣಕ್ಯ ಹೇಳುತ್ತಾರೆ. ನೀವು ನಿಮ್ಮ ಜೀವನವನ್ನು ಶಿಸ್ತಿನಿಂದ ನಡೆಸಿದಾಗ, ನಿಮ್ಮ ಆತ್ಮವಿಶ್ವಾಸವೂ ಗಮನಾರ್ಹವಾಗಿ ಹೆಚ್ಚಾಗುತ್ತದೆ, ಯಶಸ್ಸನ್ನು ಕೂಡ ಸಾಧಿಸಲು ಸಾಧ್ಯವಾಗುತ್ತದೆ.
ಉತ್ತಮ ಸಂಘದೊಂದಿಗಿರುವುದು: ಚಾಣಕ್ಯರ ಪ್ರಕಾರ, ನೀವು ಯಾವ ರೀತಿಯ ಜನರೊಂದಿಗೆ ಇರುತ್ತೀರಿ ಎಂಬುದು ನಿಮ್ಮ ಆಲೋಚನೆ ಮತ್ತು ಅಭ್ಯಾಸಗಳ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ನೀವು ಒಳ್ಳೆಯ ಜನರ ಸಹವಾಸ ಮಾಡಿದಾಗ, ನೀವು ಜೀವನದಲ್ಲಿ ಪ್ರಗತಿ ಹೊಂದುತ್ತೀರಿ. ಆದರೆ, ಕೆಟ್ಟ ಸಹವಾಸವು ನಿಮ್ಮನ್ನು ಒಳಗಿನಿಂದ ದುರ್ಬಲಗೊಳಿಸುತ್ತದೆ. ಹಾಗಾಗಿ ಒಳಗಿನಿಂದ ಬಲಶಾಲಿಯಾಗಲು, ನೀವು ಸಕಾರಾತ್ಮಕ ಮನೋಭಾವವನ್ನು ಹೊಂದಿರುವ ಮತ್ತು ನನಿಮ್ಮನ್ನು ಪ್ರೇರೇಪಿಸುವ ಜನರೊಂದಿಗಿನ ಸಹವಾಸದಲ್ಲಿರಿ.
ಇದನ್ನೂ ಓದಿ: ಜೀವನದಲ್ಲಿ ಮುಂದುವರೆಯಲು ಬಯಸಿದರೆ ಈ ವಿಚಾರಗಳ ಬಗ್ಗೆ ಹಿಂಜರಿಕೆ ಪಡಬಾರದು
ಜ್ಞಾನ ಪಡೆಯುವ ಮತ್ತು ಕಲಿಯುವ ಅಭ್ಯಾಸವನ್ನು ಬೆಳೆಸಿಕೊಳ್ಳಿ: ನೀವು ನಿಮ್ಮನ್ನು ಬಲಪಡಿಸಿಕೊಳ್ಳಲು ಬಯಸಿದರೆ, ನೀವು ನಿರಂತರ ಕಲಿಕೆಯ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು. ಹೊಸ ವಿಷಯಗಳನ್ನು ಕಲಿಯಲು ಪುಸ್ತಕಗಳನ್ನು ಓದಿ, ಹೊಸ ಕೌಶಲ್ಯಗಳನ್ನು ಪಡೆದುಕೊಳ್ಳಿ ಮತ್ತು ನಿಮ್ಮ ಹಿಂದಿನ ಅನುಭವಗಳಿಂದ ಕಲಿಯಲು ಪ್ರಯತ್ನಿಸಿ. ಈ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದರಿಂದ ನೀವು ಆತ್ಮವಿಶ್ವಾಸದಿಂದ ಬದುಕಲು ಸಾಧ್ಯವಾಗುತ್ತದೆ. ಚಾಣಕ್ಯನ ಪ್ರಕಾರ, ನಿಮ್ಮೊಳಗಿನ ಜ್ಞಾನವು ನಿಮ್ಮ ದೊಡ್ಡ ಶಕ್ತಿ. ಅದನ್ನು ಯಾರೂ ನಿಮ್ಮಿಂದ ಕಸಿದುಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ನೀವು ಹೆಚ್ಚು ಜ್ಞಾನವನ್ನು ಹೊಂದಿದಾಗ ನಿಮ್ಮ ಆತ್ಮವಿಶ್ವಾಸವೂ ಹೆಚ್ಚಾಗುತ್ತದೆ.
ತಾಳ್ಮೆ ಮತ್ತು ನಿಯಂತ್ರಣ: ಜೀವನದಲ್ಲಿ ಕೆಲವು ಸಮಯಗಳಲ್ಲಿ ತಕ್ಷಣದ ಫಲಿತಾಂಶಗಳು ಸಿಗುವುದಿಲ್ಲ. ಅಂತಹ ಸಮಯದಲ್ಲಿ ತಾಳ್ಮೆಯಿಂದಿರುವುದು ಬಹಳ ಮುಖ್ಯ. ಚಾಣಕ್ಯನ ಪ್ರಕಾರ, ತಾಳ್ಮೆಯುಳ್ಳ ವ್ಯಕ್ತಿಯು ಕಠಿಣ ಸಂದರ್ಭಗಳಲ್ಲಿಯೂ ಸಹ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಆದ್ದರಿಂದ, ಆತುರ ಮತ್ತು ಕೋಪ ಮಾಡಿಕೊಳ್ಳದೆ ಶಾಂತವಾಗಿ ಯೋಚಿಸುವುದನ್ನು ಕಲಿಯಿರಿ.
ಸ್ವಯಂ ನಿಯಂತ್ರಣವನ್ನು ಬೆಳೆಸಿಕೊಳ್ಳಿ: ಸ್ವಯಂ ನಿಯಂತ್ರಣ ಹೊಂದಿರುವ ವ್ಯಕ್ತಿಯು ಒಳಗಿನಿಂದ ಬಲಶಾಲಿಯಾಗಿರುತ್ತಾನೆ. ಆದ್ದರಿಂದ, ನಿಮ್ಮ ಆಸೆಗಳನ್ನು ಮತ್ತು ಅಭ್ಯಾಸಗಳನ್ನು ನಿಯಂತ್ರಿಸಲು ಕಲಿಯಿರಿ. ಒಬ್ಬ ವ್ಯಕ್ತಿಯು ತನ್ನ ಮನಸ್ಸಿನ ಮೇಲೆ ನಿಯಂತ್ರಣ ಹೊಂದಿದರೆ, ಸಮಸ್ಯೆಯು ಆತನ ಸುತ್ತ ಸುಳಿಯುವುದಿಲ್ಲ ಎನ್ನುತ್ತಾರೆ ಆಚಾರ್ಯ ಚಾಣಕ್ಯ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ