CSK vs PBKS: ಸತತ 2ನೇ ಸೋಲು; ಸಿಎಸ್​ಕೆಗೆ ತವರಿನಲ್ಲೂ ಧಕ್ಕಲಿಲ್ಲ ಗೆಲುವು

CSK vs PBKS: ಸತತ 2ನೇ ಸೋಲು; ಸಿಎಸ್​ಕೆಗೆ ತವರಿನಲ್ಲೂ ಧಕ್ಕಲಿಲ್ಲ ಗೆಲುವು

ಚೆನ್ನೈನ ಚೆಪಾಕ್​ ಮೈದಾನದಲ್ಲಿ ನಡೆದ ಐಪಿಎಲ್ 2026 ರ7ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ತಂಡವು 20 ಓವರ್‌ಗಳಲ್ಲಿ ಐದು ವಿಕೆಟ್‌ಗಳಿಗೆ 209 ರನ್ ಗಳಿಸಿತು. ತಂಡದ ಪರ ಆಯುಷ್ ಮ್ಹಾತ್ರೆ 73 ರನ್‌ಗಳೊಂದಿಗೆ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಈ ಗುರಿ ಬೆನ್ನಟ್ಟಿದ ಪಂಜಾಬ್ ನಾಯಕ ಶ್ರೇಯಸ್ ಅವರ ಅರ್ಧಶತಕದ ನೆರವಿನಿಂದ 18.4 ಓವರ್​ಗಳಲ್ಲಿ 5 ವಿಕೆಟ್‌ಗಳನ್ನು ಕಳೆದುಕೊಂಡು ಗೆಲುವಿನ ದಡ ಮುಟ್ಟಿತು. ಇದರೊಂದಿಗೆ ಪಂಜಾಬ್​ ಲೀಗ್​ನಲ್ಲಿ ಸತತ ಎರಡನೇ ಗೆಲುವು ದಾಖಲಿಸಿದರೆ, ಇತ್ತ ಸಿಎಸ್​ಕೆ ಸತತ ಎರಡನೇ ಸೋಲು ಕಂಡಿತು.

Source link

Leave a Reply

Your email address will not be published. Required fields are marked *