Daily Devotional: ಮನೆಯಿಂದ ಹೊರಡುವಾಗ ಹೊಸ್ತಿಲಿಗೆ ನಮಸ್ಕರಿಸಿ ಹೊರಡಬೇಕು, ಯಾಕೆ ಗೊತ್ತಾ?

Daily Devotional: ಮನೆಯಿಂದ ಹೊರಡುವಾಗ ಹೊಸ್ತಿಲಿಗೆ ನಮಸ್ಕರಿಸಿ ಹೊರಡಬೇಕು, ಯಾಕೆ ಗೊತ್ತಾ?

ಬೆಂಗಳೂರು, ಮಾರ್ಚ್​​ 14: ಟಿವಿ9​​ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಯಾಕೆ ಮನೆಯಿಂದ ಹೊರಡುವಾಗ ಹೊಸ್ತಿಲಿಗೆ ನಮಸ್ಕರಿಸಿ ಹೊರಡಬೇಕು ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ಮನೆಯ ಕೆಲವು ನಿರ್ದಿಷ್ಟ ಸ್ಥಳಗಳಿಗೆ ದೈವಿಕ ಅನುಗ್ರಹವಿರುತ್ತದೆ ಎಂದು ನಂಬಲಾಗಿದೆ. ಅಂತಹ ಪ್ರಮುಖ ಸ್ಥಳಗಳಲ್ಲಿ ಹೊಸ್ತಿಲು ಕೂಡ ಒಂದು. ಹೊಸ್ತಿಲಲ್ಲಿ ಮಹಾಲಕ್ಷ್ಮಿಯ ಕೃಪೆ ಸದಾ ಇರುತ್ತದೆ ಎಂದು ಹೇಳಲಾಗುತ್ತದೆ.

ಮನೆಯಿಂದ ಹೊರಹೋಗುವಾಗ ಬಲಗಾಲನ್ನು ಆಚೆ ಇಟ್ಟು, ಹೊಸ್ತಿಲನ್ನು ಸ್ಪರ್ಶಿಸಿ, ಅದಕ್ಕೆ ಕೃತಜ್ಞತೆ ಸಲ್ಲಿಸಿ ನಮಸ್ಕರಿಸುವುದು ಶುಭವೆಂದು ಪರಿಗಣಿಸಲಾಗಿದೆ. ನಮ್ಮ ಎಲ್ಲಾ ಕೆಲಸಗಳು ನಿರ್ವಿಘ್ನವಾಗಿ ನೆರವೇರಲಿ ಎಂದು ಸಂಕಲ್ಪ ಮಾಡಿಕೊಳ್ಳುವ ಪದ್ಧತಿ ಇದೆ. ಅದೇ ರೀತಿ, ಹೊರಗಿನಿಂದ ಮನೆಗೆ ಬರುವಾಗ ಹೊಸ್ತಿಲಿಗೆ ನಮಸ್ಕರಿಸಿ, ಬಲಗಾಲನ್ನು ಒಳಗೆ ಇಡುವುದು ವಾಡಿಕೆ. ಇದು ಹೊರಗಿನಿಂದ ತಂದಿರಬಹುದಾದ ಋಣಾತ್ಮಕ ಶಕ್ತಿ, ದೃಷ್ಟಿ, ಅಥವಾ ಪಾಪದ ಭಾರವನ್ನು ಹೋಗಲಾಡಿಸಿ, ಸಕಾರಾತ್ಮಕತೆಯನ್ನು ಮನೆಗೆ ತರುತ್ತದೆ ಎಂಬುದು ನಂಬಿಕೆ ಎಂದು ಡಾ.ಬಸವರಾಜ ಗುರೂಜಿ ಹೇಳಿದ್ದಾರೆ.

Source link

Leave a Reply

Your email address will not be published. Required fields are marked *