
ಬೆಂಗಳೂರು, ಏಪ್ರಿಲ್ 10: ಚಿನ್ನ, ಬೆಳ್ಳಿ ಬೆಲೆಗಳ ಏರಿಳಿತದ ಟ್ರೆಂಡ್ ಮುಂದುವರಿಯುತ್ತಿದೆ. ಚಿನ್ನದ ಬೆಲೆ (Gold Rates) ಮೊನ್ನೆ ಏರಿತ್ತು, ನಿನ್ನೆ ಕುಸಿದಿತ್ತು, ಇವತ್ತು ಮತ್ತೆ ಏರಿದೆ. ಶುಕ್ರವಾರ ಇದರ ಬೆಲೆ ಗ್ರಾಮ್ಗೆ 140 ರೂಗಳಷ್ಟು ಹೆಚ್ಚಿದೆ. ವಿದೇಶಗಳಲ್ಲೂ ಇದರ ಬೆಲೆಯಲ್ಲಿ ಅಲ್ಪ ಏರಿಳಿತಗಳಾಗಿವೆ. ಬೆಳ್ಳಿ ಬೆಲೆಯಲ್ಲೂ ಇದೇ ಟ್ರೆಂಡ್ ಇದೆ. ನಿನ್ನೆ ಇಳಿದಿದ್ದ ಬೆಳ್ಳಿ ಬೆಲೆ ಇವತ್ತು 5 ರೂ ಏರಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,40,250 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,53,000 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 26,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 1,40,250 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 26,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 26,500 ರೂ ಇದೆ.
ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಏಪ್ರಿಲ್ 10ಕ್ಕೆ)
- 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 15,300 ರೂ
- 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,025 ರೂ
- 18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,475 ರೂ
- ಬೆಳ್ಳಿ ಬೆಲೆ 1 ಗ್ರಾಂಗೆ: 260 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 15,300 ರೂ
- 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,025 ರೂ
- ಬೆಳ್ಳಿ ಬೆಲೆ 1 ಗ್ರಾಂಗೆ: 260 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
- ಬೆಂಗಳೂರು: 14,025 ರೂ
- ಚೆನ್ನೈ: 14,125 ರೂ
- ಮುಂಬೈ: 14,025 ರೂ
- ದೆಹಲಿ: 14,040 ರೂ
- ಕೋಲ್ಕತಾ: 14,025 ರೂ
- ಕೇರಳ: 14,025 ರೂ
- ಅಹ್ಮದಾಬಾದ್: 14,030 ರೂ
- ಜೈಪುರ್: 14,040 ರೂ
- ಲಕ್ನೋ: 14,040 ರೂ
- ಭುವನೇಶ್ವರ್: 14,025 ರೂ
ಇದನ್ನೂ ಓದಿ: ಸ್ಮಾರ್ಟ್ ಆಗಿ ಪ್ಲಾನ್ ಮಾಡಿ; ಈ 4 ಹಣಕಾಸು ತಪ್ಪುಗಳನ್ನು ಮಾಡದಿರಿ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
- ಮಲೇಷ್ಯಾ: 583 ರಿಂಗಿಟ್ (13,586 ರುಪಾಯಿ)
- ದುಬೈ: 534.50 ಡಿರಾಮ್ (13,485 ರುಪಾಯಿ)
- ಅಮೆರಿಕ: 149 ಡಾಲರ್ (13,807 ರುಪಾಯಿ)
- ಸಿಂಗಾಪುರ: 188.50 ಸಿಂಗಾಪುರ್ ಡಾಲರ್ (13,711 ರುಪಾಯಿ)
- ಕತಾರ್: 531.50 ಕತಾರಿ ರಿಯಾಲ್ (13,512 ರೂ)
- ಸೌದಿ ಅರೇಬಿಯಾ: 545 ಸೌದಿ ರಿಯಾಲ್ (13,460 ರುಪಾಯಿ)
- ಓಮನ್: 56.65 ಒಮಾನಿ ರಿಯಾಲ್ (13,638 ರುಪಾಯಿ)
- ಕುವೇತ್: 43.90 ಕುವೇತಿ ದಿನಾರ್ (13,275 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್ಗೆ)
- ಬೆಂಗಳೂರು: 260 ರೂ
- ಚೆನ್ನೈ: 265 ರೂ
- ಮುಂಬೈ: 260 ರೂ
- ದೆಹಲಿ: 260 ರೂ
- ಕೋಲ್ಕತಾ: 260 ರೂ
- ಕೇರಳ: 265 ರೂ
- ಅಹ್ಮದಾಬಾದ್: 260 ರೂ
- ಜೈಪುರ್: 260 ರೂ
- ಲಕ್ನೋ: 260 ರೂ
- ಭುವನೇಶ್ವರ್: 265 ರೂ
- ಪುಣೆ: 260
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ