Headlines

High Court Recruitment 2026: ಹೈಕೋರ್ಟ್​​ನಲ್ಲಿ 152 ಹುದ್ದೆಗಳಿಗೆ ನೇಮಕಾತಿ; ಕಾನೂನು ಕ್ಷೇತ್ರದಲ್ಲಿ ಸರ್ಕಾರಿ ಉದ್ಯೋಗಕ್ಕೆ ಸುವರ್ಣವಕಾಶ – Kannada News | Delhi High Court JJA Recruitment 2026: 152 Posts! Apply Now for Judicial Assistant Jobs

ದೆಹಲಿ ಹೈಕೋರ್ಟ್ ಜೂನಿಯರ್ ಜ್ಯುಡಿಷಿಯಲ್ ಅಸಿಸ್ಟೆಂಟ್/ರಿಸ್ಟೋರರ್ (JJA) ನೇಮಕಾತಿ ಪರೀಕ್ಷೆ 2026ರ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ನೇಮಕಾತಿ ಪ್ರಕ್ರಿಯೆಯ ಮೂಲಕ ಒಟ್ಟು 152 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಕಾನೂನು ಕ್ಷೇತ್ರದಲ್ಲಿ ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವ ಅಭ್ಯರ್ಥಿಗಳಿಗೆ ಇದು ಅತ್ಯುತ್ತಮ ಅವಕಾಶವಾಗಿದೆ. ಆನ್‌ಲೈನ್ ನೋಂದಣಿ ಪ್ರಕ್ರಿಯೆ ಫೆಬ್ರವರಿ 4 ರಿಂದ ಪ್ರಾರಂಭವಾಗಲಿದ್ದು, ಫೆಬ್ರವರಿ 23ರ ರಾತ್ರಿ 11 ಗಂಟೆಯವರೆಗೆ ಅರ್ಜಿಗಳನ್ನು ಸಲ್ಲಿಸಬಹುದು. ಈ ನೇಮಕಾತಿ ಗ್ರೂಪ್–ಬಿ ವರ್ಗದಡಿ ನಡೆಯಲಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ 7ನೇ ವೇತನ ಆಯೋಗದ ಪ್ರಕಾರ ಲೆವೆಲ್–6 ಸಂಬಳ ನೀಡಲಾಗುತ್ತದೆ.

ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು. ಜೊತೆಗೆ, ಕಂಪ್ಯೂಟರ್‌ನಲ್ಲಿ ನಿಮಿಷಕ್ಕೆ ಕನಿಷ್ಠ 35 ಪದಗಳ ಇಂಗ್ಲಿಷ್ ಟೈಪಿಂಗ್ ವೇಗ ಹೊಂದಿರುವುದು ಕಡ್ಡಾಯವಾಗಿದೆ. ಜನವರಿ 1, 2026ರ ವೇಳೆಗೆ ಅಭ್ಯರ್ಥಿಗಳ ವಯಸ್ಸು 18 ರಿಂದ 32 ವರ್ಷಗಳೊಳಗಿರಬೇಕು. ನಿಯಮಾನುಸಾರ ಎಸ್‌ಸಿ, ಎಸ್‌ಟಿ, ಒಬಿಸಿ, ಪಿಡಬ್ಲ್ಯೂಬಿಡಿ ಹಾಗೂ ಇತರ ಮೀಸಲು ವರ್ಗಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ. ಕೊನೆಯ ದಿನಾಂಕದೊಳಗೆ ಅಗತ್ಯವಿರುವ ಎಲ್ಲಾ ಶೈಕ್ಷಣಿಕ ಅರ್ಹತೆಗಳನ್ನು ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬೇಕು.

ಆಯ್ಕೆ ಪ್ರಕ್ರಿಯೆ ನಾಲ್ಕು ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತದಲ್ಲಿ CBT ವಿಧಾನದಲ್ಲಿ ಪ್ರಾಥಮಿಕ ಪರೀಕ್ಷೆ ನಡೆಯುತ್ತದೆ, ಇದರಲ್ಲಿ ಇಂಗ್ಲಿಷ್, ಸಾಮಾನ್ಯ ಅರಿವು ಮತ್ತು ಸಾಮಾನ್ಯ ಬುದ್ಧಿಮತ್ತೆಗೆ ಸಂಬಂಧಿಸಿದ ಪ್ರಶ್ನೆಗಳು ಇರುತ್ತವೆ. ನಂತರ ವಿವರಣಾತ್ಮಕ ಮುಖ್ಯ ಪರೀಕ್ಷೆ ನಡೆಯಲಿದ್ದು, ಇದರಲ್ಲಿ ಪ್ರಬಂಧ ಬರವಣಿಗೆ ಮತ್ತು ವ್ಯಾಕರಣದ ಪ್ರಶ್ನೆಗಳು ಸೇರಿರುತ್ತವೆ. ಮೂರನೇ ಹಂತವಾಗಿ ಇಂಗ್ಲಿಷ್ ಟೈಪಿಂಗ್ ಪರೀಕ್ಷೆ ನಡೆಯುತ್ತದೆ. ಕೊನೆಯ ಹಂತದಲ್ಲಿ ಸಂದರ್ಶನದ ಮೂಲಕ ಅಂತಿಮ ಆಯ್ಕೆ ಮಾಡಲಾಗುತ್ತದೆ. ಪ್ರಾಥಮಿಕ ಪರೀಕ್ಷೆಯಲ್ಲಿ ಋಣಾತ್ಮಕ ಅಂಕಗಳ ವ್ಯವಸ್ಥೆಯೂ ಇರಲಿದೆ. ಮುಖ್ಯ ಪರೀಕ್ಷೆ ಮತ್ತು ಸಂದರ್ಶನದ ಅಂಕಗಳ ಆಧಾರದ ಮೇಲೆ ಅಂತಿಮ ಮೆರಿಟ್ ಪಟ್ಟಿ ಸಿದ್ಧಪಡಿಸಲಾಗುತ್ತದೆ.

ಇದನ್ನೂ ಓದಿ: ಎಕ್ಸಿಮ್ ಬ್ಯಾಂಕ್​ನಲ್ಲಿ 40 ಮ್ಯಾನೇಜ್ಮೆಂಟ್ ಟ್ರೈನಿ ಹುದ್ದೆಗೆ ನೇಮಕಾತಿ; ತಿಂಗಳಿಗೆ 65,000ರೂ. ಸ್ಟೈಫಂಡ್

ಅರ್ಜಿ ಶುಲ್ಕದ ಕುರಿತು ಮಾತನಾಡುವುದಾದರೆ, ಸಾಮಾನ್ಯ, ಒಬಿಸಿ ಮತ್ತು ಇಡಬ್ಲ್ಯೂಎಸ್ ವರ್ಗದ ಅಭ್ಯರ್ಥಿಗಳು 1,500 ರೂ. ಪಾವತಿಸಬೇಕಾಗುತ್ತದೆ. ಎಸ್‌ಸಿ, ಎಸ್‌ಟಿ ಮತ್ತು ಪಿಡಬ್ಲ್ಯೂಬಿಡಿ ವರ್ಗದ ಅಭ್ಯರ್ಥಿಗಳಿಗೆ 1,300 ರೂ. ಶುಲ್ಕ ನಿಗದಿಪಡಿಸಲಾಗಿದೆ. ಶುಲ್ಕವನ್ನು ಯುಪಿಐ, ನೆಟ್ ಬ್ಯಾಂಕಿಂಗ್, ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮೂಲಕ ಆನ್‌ಲೈನ್‌ನಲ್ಲಿ ಪಾವತಿಸಬಹುದು. ಅರ್ಜಿಯಲ್ಲಿನ ದೋಷಗಳನ್ನು ಸರಿಪಡಿಸಲು ಫೆಬ್ರವರಿ 27 ರವರೆಗೆ ತಿದ್ದುಪಡಿ ವಿಂಡೋ ಲಭ್ಯವಿರುತ್ತದೆ, ಇದಕ್ಕೆ ಪ್ರತ್ಯೇಕ ಶುಲ್ಕ ವಿಧಿಸಲಾಗುತ್ತದೆ.

ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ದೆಹಲಿ ಹೈಕೋರ್ಟ್‌ನ ಅಧಿಕೃತ ವೆಬ್‌ಸೈಟ್‌(https://www.delhihighcourt.nic.in)ಗೆ ಭೇಟಿ ನೀಡಿ ನೇಮಕಾತಿ ವಿಭಾಗದಲ್ಲಿ JJA / Restorer Exam 2026 ಲಿಂಕ್ ಅನ್ನು ಆಯ್ಕೆ ಮಾಡಬೇಕು. ಮೊದಲು ನೋಂದಣಿ ಪೂರ್ಣಗೊಳಿಸಿ, ನಂತರ ಅರ್ಜಿ ನಮೂನೆಯನ್ನು ಜಾಗ್ರತೆಯಿಂದ ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಶುಲ್ಕ ಪಾವತಿಸಿದ ನಂತರ ಫಾರ್ಮ್ ಅನ್ನು ಸಲ್ಲಿಸಬೇಕು.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *