
ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಫೆಬ್ರವರಿ 28, ಶನಿವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಈ ದಿನ ವಿಶ್ವಾವಸುನಾಮ ಸಂವತ್ಸರ,ಉತ್ತರಾಯಣ, ಪಾಲ್ಗುಣಮಾಸ, ಶಿಶಿರ ಋತು, ಶುಕ್ಲಪಕ್ಷ ದ್ವಾದಶಿ, ಪುನರ್ವಸು ನಕ್ಷತ್ರದ ಈ ದಿನದಲ್ಲಿ ರವಿ ಕುಂಭರಾಶಿಯಲ್ಲಿ ಮತ್ತು ಚಂದ್ರ ಕರ್ಕಾಟಕ ರಾಶಿಯಲ್ಲಿ ಸಂಚರಿಸುತ್ತಿದ್ದಾರೆ. ಇಂದು ಬ್ಯಾಂಕ್ ರಜೆ, ನಾಲ್ಕನೇ ಶನಿವಾರ ಹಾಗೂ ಫೆಬ್ರವರಿ ಮಾಸದ ಕೊನೆಯ ದಿನವೂ ಹೌದು. ಶಿವನ ಸಮುದ್ರ, ಶರವು ಮಹಾಗಣಪತಿ, ಸತ್ಯಾಂಗಲ ವಿಶ್ವೇಶ್ವರ ರಥೋತ್ಸವಗಳು ನಡೆಯಲಿವೆ. ಡಾ. ಬಸವರಾಜ ಗುರೂಜಿ ಅವರು ಪ್ರತಿ ರಾಶಿಯವರ ಅದೃಷ್ಟ, ಆರ್ಥಿಕ ಸ್ಥಿತಿ, ಆರೋಗ್ಯ, ವೃತ್ತಿ, ಸಂಬಂಧಗಳು ಮತ್ತು ಪರಿಹಾರ ಮಂತ್ರಗಳ ಬಗ್ಗೆ ಮಾಹಿತಿ ನೀಡಿದ್ದಾರೆ.