ಪ್ರಸ್ತುತ ನಡೆಯುತ್ತಿರುವ ಮಹಿಳಾ ಪ್ರೀಮಿಯರ್ ಲೀಗ್ ನಡುವೆ ಭಾರತ ಮಹಿಳಾ ತಂಡದ ಆಸ್ಟ್ರೇಲಿಯಾ ಪ್ರವಾಸಕ್ಕೆ ಬಿಸಿಸಿಐ ತಂಡವನ್ನು ಪ್ರಕಟಿಸಿದೆ. ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತ ವನಿತಾ ಪಡೆ ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಎರಡೂ ತಂಡಗಳನ್ನು ಹರ್ಮನ್‌ಪ್ರೀತ್ ಕೌರ್ ಮುನ್ನಡೆಸಲಿದ್ದು, ಎಂದಿನಂತೆ ಸ್ಮೃತಿ ಮಂಧಾನ ತಂಡದ ಉಪನಾಯಕತ್ವವಹಿಸಿಕೊಂಡಿದ್ದಾರೆ. ಭಾರತದ ಈ ಪ್ರವಾಸ ಫೆಬ್ರವರಿ 15 ರಿಂದ ಆರಂಭವಾಗಲಿರುವ ಟಿ20 ಸರಣಿಯೊಂದಿಗೆ ಆರಂಭವಾಗಲಿದ್ದು, ಮಾರ್ಚ್ 1 ರಂದು ನಡೆಯಲಿರುವ ಏಕದಿನ ಸರಣಿಯ ಕೊನೆಯ ಪಂದ್ಯದೊಂದಿಗೆ ಅಂತ್ಯವಾಗಲಿದೆ. ಎರಡೂ ಸರಣಿಗಳಿಗೆ ಭಾಗಶಃ ಒಂದೇ ತಂಡವನ್ನು ಆಯ್ಕೆ ಮಾಡಲಾಗಿದೆ. ಖುಷಿಯ ಸಂಗತಿಯೆಂದರೆ ಟಿ20 ಸರಣಿಗೆ ಕನ್ನಡತಿ ಶ್ರೇಯಾಂಕ ಪಾಟೀಲ್ ಅವರನ್ನು ಆಯ್ಕೆ ಮಾಡಲಾಗಿದೆ.
Presenting #TeamIndia’s squad for ODI & T20I series against Australia Women 🙌
Details ▶️ https://t.co/UCScQnfJdi#AUSvIND pic.twitter.com/afB4dqfNco
— BCCI Women (@BCCIWomen) January 17, 2026
Published On – 10:00 pm, Sat, 17 January 26