ಈ ದಾಖಲೆಯ ಜೊತೆಗೆ ಮತ್ತೊಂದು ವಿಶ್ವ ದಾಖಲೆಯನ್ನು ಸೃಷ್ಟಿಸಿದ ಸೂರ್ಯ, ಅಂತರರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಅತಿ ಕಡಿಮೆ ಎಸೆತಗಳಲ್ಲಿ 3,000 ರನ್ ಪೂರೈಸಿದ ವಿಶ್ವದ ಮೊದಲ ಆಟಗಾರ ಎನಿಸಿಕೊಂಡರು. ಸೂರ್ಯ 1,822 ಎಸೆತಗಳಲ್ಲಿ 3,000 ಟಿ20ರನ್‌ಗಳನ್ನು ಪೂರ್ಣಗೊಳಿಸಿದರು. ಈ ಹಿಂದೆ, ಈ ದಾಖಲೆಯನ್ನು ಯುಎಇಯ ಮೊಹಮ್ಮದ್ ವಾಸಿಮ್ ಹೊಂದಿದ್ದರು, ಅವರು 1,947 ಎಸೆತಗಳಲ್ಲಿ 3,000 ಟಿ20 ರನ್ ಪೂರೈಸಿದ್ದರು.