Headlines

IND vs PAK: ಹೀಗಾದರೆ ಭಾರತ- ಪಾಕ್ ನಡುವೆ ಟಿ20 ವಿಶ್ವಕಪ್​ನಲ್ಲಿ ಮತ್ತೊಂದು ಪಂದ್ಯ – Kannada News | India vs Pakistan T20 World Cup Re Match: Super 8, Semifinal and Final Pathway Explained

ಭಾರತ ಮತ್ತು ಪಾಕಿಸ್ತಾನ (India vs Pakistan) ನಡುವಿನ ಕ್ರಿಕೆಟ್ ಪಂದ್ಯವೆಂದರೆ ಅಭಿಮಾನಿಗಳಿಗೆ ಅದೊಂದು ಹಬ್ಬವೇ ಸರಿ. ಆದಾಗ್ಯೂ ಈ ತಂಡಗಳು ಐಸಿಸಿ ಹಾಗೂ ಎಸಿಸಿ ಈವೆಂಟ್​ಗಳಲ್ಲಿ ಮಾತ್ರ ಮುಖಾಮುಖಿಯಾಗುವುದರಿಂದ ವರ್ಷಕ್ಕೆ ಮೂರು ಅಥವಾ ನಾಲ್ಕು ಪಂದ್ಯಗಳು ನಡೆದರೆ ಹೆಚ್ಚು. ಹೀಗಿರುವಾಗ ಒಂದೇ ಈವೆಂಟ್​ನಲ್ಲಿ ಉಭಯ ತಂಡಗಳು ಎರಡು ಬಾರಿ ಮುಖಾಮುಖಿಯಾಗುವುದು ಅಭಿಮಾನಿಗಳ ಪಾಲಿಗೆ ಅದು ಅದೃಷ್ಟವೇ ಸರಿ. ಇದೀಗ ನಡೆಯುತ್ತಿರುವ ಟಿ20 ವಿಶ್ವಕಪ್​ನಲ್ಲೂ (T20 World Cup) ಭಾರತ ಹಾಗೂ ಪಾಕಿಸ್ತಾನ ತಂಡಗಳು ಎರಡು ಬಾರಿ ಮುಖಾಮುಖಿಯಾಗುವ ಸಾಧ್ಯತೆಗಳಿವೆ. ಈಗಾಗಲೇ ಎರಡು ತಂಡಗಳು ಒಮ್ಮೆ ಮುಖಾಮುಖಿಯಾಗಿದ್ದು, ಈ ಪಂದ್ಯದಲ್ಲಿ ಭಾರತ ತಂಡ ಏಕಪಕ್ಷೀಯ ಗೆಲುವು ದಾಖಲಿಸಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಎರಡು ತಂಡಗಳು ಸೆಮಿಫೈನಲ್ ಅಥವಾ ಫೈನಲ್​ನಲ್ಲಿ ಮತ್ತೊಂದು ಪಂದ್ಯವನ್ನಾಡಲಿವೆ.

ಸೂಪರ್-8 ಸುತ್ತು ಹೇಗಿರಲಿದೆ?

ಗುಂಪು ಹಂತದಲ್ಲಿ ಪಾಕಿಸ್ತಾನ ತನ್ನ ಕೊನೆಯ ಪಂದ್ಯವನ್ನು ನಮೀಬಿಯಾ ವಿರುದ್ಧ ಆಡಲಿದೆ. ಈ ಪಂದ್ಯದಲ್ಲಿ ಪಾಕ್ ಗೆದ್ದರೆ, 2026 ರ ಟಿ20 ವಿಶ್ವಕಪ್‌ನ ಗ್ರೂಪ್ ಎ ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆಯುವ ಮೂಲಕ ಸೂಪರ್ 8 ಸುತ್ತಿನಲ್ಲಿ ಸ್ಥಾನ ಪಡೆಯುತ್ತದೆ. ಅದೇ ರೀತಿ, ಉಳಿದ ಮೂರು ಗುಂಪುಗಳ ಅಗ್ರ ಎರಡು ತಂಡಗಳು ಸೂಪರ್ 8 ಸುತ್ತಿಗೆ ತಮ್ಮ ಸ್ಥಾನಗಳನ್ನು ಭದ್ರಪಡಿಸಿಕೊಳ್ಳುತ್ತವೆ. ಯಾವುದೇ ಪ್ರಮುಖ ಬದಲಾವಣೆಗಳಿಲ್ಲದಿದ್ದರೆ, ಗ್ರೂಪ್ ಎ ಯಿಂದ ಭಾರತ ಮತ್ತು ಪಾಕಿಸ್ತಾನ, ಗ್ರೂಪ್ ಬಿ ಯಿಂದ ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ, ಗ್ರೂಪ್ ಸಿ ಯಿಂದ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ಮತ್ತು ಗ್ರೂಪ್ ಡಿ ಯಿಂದ ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಸೂಪರ್ 8 ಸುತ್ತಿಗೆ ಪ್ರವೇಶಿಸಬಹುದು. ಸೂಪರ್ 8 ಸುತ್ತಿನಲ್ಲಿ ಎರಡು ಗುಂಪುಗಳು ಈ ಕೆಳಗಿನಂತಿರಬಹುದು.

ಗುಂಪು 1 ರಲ್ಲಿ ಭಾರತ, ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ

ಗುಂಪು 2 ರಲ್ಲಿ ಇಂಗ್ಲೆಂಡ್, ನ್ಯೂಜಿಲೆಂಡ್, ಪಾಕಿಸ್ತಾನ ಮತ್ತು ಶ್ರೀಲಂಕಾ

ಸೂಪರ್ 8 ಸುತ್ತಿನಲ್ಲಿ ಮುಖಾಮುಖಿ ಇಲ್ಲ

ಸೂಪರ್ 8 ಹಂತದಲ್ಲಿ, ಪ್ರತಿ ತಂಡವು ತನ್ನ ಗುಂಪಿನಲ್ಲಿರುವ ಪ್ರತಿಯೊಂದು ತಂಡದ ವಿರುದ್ಧ ಒಂದು ಪಂದ್ಯವನ್ನು ಆಡಲಿದೆ. ಸೂಪರ್ 8 ಗುಂಪು ಬದಲಾಗದೆ ಉಳಿದರೆ, ಭಾರತ ಫೆಬ್ರವರಿ 22 ರಂದು ದಕ್ಷಿಣ ಆಫ್ರಿಕಾ ವಿರುದ್ಧ, ಫೆಬ್ರವರಿ 26 ರಂದು ಆಸ್ಟ್ರೇಲಿಯಾ ವಿರುದ್ಧ ಮತ್ತು ಕೊನೆಯ ಪಂದ್ಯವನ್ನು ವೆಸ್ಟ್ ಇಂಡೀಸ್ ವಿರುದ್ಧ ಆಡಲಿದೆ. ಹೀಗಾಗಿ ಸೂಪರ್ 8 ಹಂತದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಪಂದ್ಯ ನಡೆಯುವುದಿಲ್ಲ

ಸೆಮಿಫೈನಲ್‌ನಲ್ಲಿ ಪಂದ್ಯ ನಡೆಯುವ ಸಾಧ್ಯತೆ

ಆದರೆ ಭಾರತ ಮತ್ತು ಪಾಕಿಸ್ತಾನ ತಮ್ಮ ತಮ್ಮ ಗುಂಪುಗಳಿಂದ ಸೆಮಿಫೈನಲ್ ತಲುಪುವಲ್ಲಿ ಯಶಸ್ವಿಯಾದರೆ, ಇಲ್ಲಿ ಮುಖಾಮುಖಿಯಾಗಬಹುದು. ಗುಂಪು 1 ರಿಂದ ಟೀಂ ಇಂಡಿಯಾ ಅಗ್ರಸ್ಥಾನ ಪಡೆದು ಸೆಮಿಫೈನಲ್‌ಗೆ ಮುನ್ನಡೆದರೆ, ಇತ್ತು ಗುಂಪು 2 ರಿಂದ ಪಾಕಿಸ್ತಾನ ತಂಡ ಎರಡನೇ ತಂಡವಾಗಿ ಸೆಮಿಫೈನಲ್ ತಲುಪಿದರೆ ಎರಡೂ ತಂಡಗಳು ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗಬಹುದು.

T20 World Cup: 43 ವರ್ಷಗಳಲ್ಲಿ 3ನೇ ಬಾರಿಗೆ; ಭಾರತವೇ ಚಾಂಪಿಯನ್ ಎನ್ನುತ್ತಿದೆ ಇತಿಹಾಸ

ಆದಾಗ್ಯೂ, ಭಾರತ ಮತ್ತು ಪಾಕಿಸ್ತಾನ ಎರಡೂ ಸೂಪರ್-8 ಸುತ್ತಿನಲ್ಲಿ ತಮ್ಮ ತಮ್ಮ ಗುಂಪುಗಳಲ್ಲಿ ಅಗ್ರಸ್ಥಾನ ಪಡೆದರೆ ಸೆಮಿಫೈನಲ್​ನಲ್ಲಿ ಮುಖಾಮುಖಿಯಾಗುವುದಿಲ್ಲ. ಆದರೆ ಎರಡೂ ತಂಡಗಳು ಸೆಮಿಫೈನಲ್​ನಲ್ಲಿ ಗೆದ್ದರೆ, ಫೈನಲ್​ನಲ್ಲಿ ಮುಖಾಮುಖಿಯಾಗಲಿವೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *