IPL 2026: ಐಪಿಎಲ್​ಗಾಗಿ ಭಾರತಕ್ಕೆ ಬಂದಿಳಿದ ವಿರಾಟ್ ಕೊಹ್ಲಿ; ವಿಡಿಯೋ ವೈರಲ್

IPL 2026: ಐಪಿಎಲ್​ಗಾಗಿ ಭಾರತಕ್ಕೆ ಬಂದಿಳಿದ ವಿರಾಟ್ ಕೊಹ್ಲಿ; ವಿಡಿಯೋ ವೈರಲ್

ಕುಟುಂಬದೊಂದಿಗೆ ಲಂಡನ್‌ನಲ್ಲಿ ನೆಲೆಯೂರಿರುವ ವಿರಾಟ್ ಕೊಹ್ಲಿ ಇದೀಗ 2026 ರ ಐಪಿಎಲ್​ಗಾಗಿ ಭಾರತದಕ್ಕೆ ಬಂದಿಳಿದಿದ್ದಾರೆ. ವಿಮಾನ ನಿಲ್ದಾಣದಿಂದ ತನ್ನ ಮಡದಿ ಅನುಷ್ಕಾ ಶರ್ಮಾ ಅವರೊಂದಿಗೆ ಹೊರಬರುತ್ತಿರುವ ಅವರ ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಐಪಿಎಲ್‌ನ 19 ನೇ ಸೀಸನ್‌ಗಾಗಿ ವಿರಾಟ್ ಕೊಹ್ಲಿ ಲಂಡನ್‌ನಲ್ಲಿ ಸಿದ್ಧತೆಗಳನ್ನು ಆರಂಭಿಸಿದ್ದರು. ಅದರ ವಿಡಿಯೋಗಳು ಕೂಡ ವೈರಲ್ ಆಗಿದ್ದವು. ಆದಾಗ್ಯೂ, ಭಾರತಕ್ಕೆ ಬಂದ ನಂತರ, ಅವರು ಶೀಘ್ರದಲ್ಲೇ ಆರ್‌ಸಿಬಿ ಶಿಬಿರವನ್ನು ಸೇರಲಿದ್ದು, ತಮ್ಮ ಅಭ್ಯಾಸವನ್ನು ಮುಂದುವರೆಸಿಲಿದ್ದಾರೆ. ಆರ್‌ಸಿಬಿ ಪ್ರಸ್ತುತ ಐಪಿಎಲ್ ಹಾಲಿ ಚಾಂಪಿಯನ್ ಆಗಿರುವ ಕಾರಣ ತನ್ನ ಪ್ರಶಸ್ತಿಯನ್ನು ಉಳಿಸಿಕೊಳ್ಳಬೇಕೆಂಬ ಒತ್ತಡದಲ್ಲಿದೆ. ಹೀಗಾಗಿ ವಿರಾಟ್ ಕೊಹ್ಲಿಯಿಂದ ಈ ಬಾರಿಯೂ ಅದೇ ರೀತಿಯ ಪ್ರದರ್ಶನವನ್ನು ನಿರೀಕ್ಷಿಸಲಾಗಿದೆ.

Source link

Leave a Reply

Your email address will not be published. Required fields are marked *