ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮತ್ತೆ ಕ್ರಿಕೆಟ್ ಕಲರವ ಶುರುವಾಗಲಿದೆ. ಕಳೆದ ಕೆಲ ತಿಂಗಳುಗಳಿಂದ ನಿಷೇಧಕ್ಕೆ ಒಳಗಾಗಿದ್ದ ಮೈದಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಕಣಕ್ಕಿಳಿಯುವುದು ಖಚಿತವಾಗಿದೆ. ಈ ಖಚಿತತೆಯೊಂದಿಗೆ ಆರ್ಸಿಬಿ ಅಭಿಮಾನಿಗಳಿಗೆ ಮೂರು ಗುಡ್ ನ್ಯೂಸ್ ಕೂಡ ಸಿಕ್ಕಿದೆ. ಇದರ ಜೊತೆಗೆ ಒಂದು ಬ್ಯಾಡ್ ನ್ಯೂಸ್ ಕೂಡ ಇದೆ.
ಇಲ್ಲಿ ಗುಡ್ ನ್ಯೂಸ್ ಏನೆಂದರೆ… ಈ ಬಾರಿಯ ಐಪಿಎಲ್ನ ಪ್ರಮುಖ ಪಂದ್ಯಗಳು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲೇ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (KSCA) ಕಾರ್ಯದರ್ಶಿ ಸಂತೋಷ್ ಮೆನನ್ ಅವರು ಖಚಿತಪಡಿಸಿದ್ದಾರೆ. ಅದರಂತೆ ಐಪಿಎಲ್ 2026ರ ಮೂರು ಪ್ರಮುಖ ಪಂದ್ಯಗಳು ಬೆಂಗಳೂರಿನಲ್ಲಿ ನಡೆಯಲಿದೆ. ಆ ಪಂದ್ಯಗಳಾವುವು ಎಂದರೆ…
- ಉದ್ಘಾಟನಾ ಪಂದ್ಯ: ಇಂಡಿಯನ್ ಪ್ರೀಮಿಯರ್ ಲೀಗ್ನ ಉದ್ಘಾಟನಾ ಪಂದ್ಯಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಆತಿಥ್ಯವಹಿಸಲಿದೆ ಎಂದು ಕೆಎಸ್ಸಿಎ ಕಾರ್ಯದರ್ಶಿ ಸಂತೋಷ್ ಮೆನನ್ ತಿಳಿಸಿದ್ದಾರೆ. ಅಂದರೆ ಈ ಭಅರಿಯ ಐಪಿಎಲ್ ಶುರುವಾಗುವುದು ಬೆಂಗಳೂರಿನಲ್ಲಿ.
- ಪ್ಲೇಆಫ್ ಪಂದ್ಯ: ಉದ್ಘಾಟನಾ ಪಂದ್ಯವಲ್ಲದೇ, ಪ್ಲೇಆಫ್ ಸುತ್ತಿನ ಒಂದು ಪಂದ್ಯ ಕೂಡ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಜರುಗಲಿದೆ. ಅದು ಎಲಿಮಿನೇಟರ್ ಪಂದ್ಯ ಆಗಿರಬಹುದು ಇಲ್ಲಾ ಮೊದಲ ಕ್ವಾಲಿಫೈಯರ್ ಮ್ಯಾಚ್ ಆಗಿರಬಹುದು.
- ಫೈನಲ್ ಪಂದ್ಯ: ಈ ಬಾರಿಯ ಐಪಿಎಲ್ನ ಫೈನಲ್ ಪಂದ್ಯ ಕೂಡ ಚಿನ್ನಸ್ವಾಮಿ ಸ್ಟೇಡಿಯಂನಲ್ಲೇ ಆಯೋಜಿಸಲು ನಿರ್ಧರಿಸಲಾಗಿದೆ. ಅದರಂತೆ ಐಪಿಎಲ್ 2026ರ ಕೊನೆಯ ಪಂದ್ಯ ಕೂಡ ಬೆಂಗಳೂರಿನಲ್ಲೇ ನಡೆಯಲಿದೆ.
ಆರ್ಸಿಬಿ ತಂಡದ 5 ಪಂದ್ಯಗಳೊಂದಿಗೆ ಈ ಬಾರಿ ಹೆಚ್ಚುವರಿ 2 ಮ್ಯಾಚ್ಗಳೂ ಕೂಡ ಬೆಂಗಳೂರಿನಲ್ಲಿ ನಡೆಯುತ್ತಿರುವುದು ಆರ್ಸಿಬಿ ಅಭಿಮಾನಿಗಳ ಪಾಲಿಗೆ ಗುಡ್ ನ್ಯೂಸ್ ಎಂದೇ ಹೇಳಬಹುದು. ಇನ್ನು ಬ್ಯಾಡ್ ನ್ಯೂಸ್ ಯಾವುದು ಎಂದರೆ…
- ಪ್ರೇಕ್ಷಕರ ಮಿತಿ: ಈ ಬಾರಿಯ ಐಪಿಎಲ್ ಪಂದ್ಯಗಳಿಗೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪ್ರೇಕ್ಷಕರ ಮಿತಿ ಇರಲಿದೆ. ಅಂದರೆ ಕ್ರೀಡಾಂಗಣದ ಸುರಕ್ಷತೆಯ ದೃಷ್ಟಿಯಿಂದ ಪ್ರೇಕ್ಷಕರ ಸಂಖ್ಯೆಯನ್ನು 30 ರಿಂದ 35 ಸಾವಿರಕ್ಕೆ ಸೀಮಿತಗೊಳಿಸಲು ನಿರ್ಧರಿಸಲಾಗಿದೆ. ಅಂದರೆ ಈ ಬಾರಿ ಸಂಪೂರ್ಣ ಸೀಟಿಂಗ್ ಟಿಕೆಟ್ಗಳನ್ನು ಮಾರಾಟ ಮಾಡುವುದಿಲ್ಲ. ಹೀಗಾಗಿ ಸೀಮಿತ ಪ್ರೇಕ್ಷಕರಿಗೆ ಮಾತ್ರ ಸ್ಟೇಡಿಯಂನಲ್ಲಿ ಪಂದ್ಯ ವೀಕ್ಷಿಸಲು ಅವಕಾಶ ದೊರೆಯಲಿದೆ ಎಂದು ತಿಳಿದು ಬಂದಿದೆ.
ಆರ್ಸಿಬಿ 5+2 ಪಂದ್ಯ:
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈ ಬಾರಿ 2 ಹೋಮ್ ಗ್ರೌಂಡ್ನಲ್ಲಿ ಕಣಕ್ಕಿಳಿಯಲಿದೆ. ಅಂದರೆ ಲೀಗ್ ಹಂತದ 7 ಪಂದ್ಯಗಳಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 5 ಮ್ಯಾಚ್ಗಳನ್ನು ಮಾತ್ರ ಆಡಲಿದೆ.
ಇನ್ನುಳಿದ ಎರಡು ಪಂದ್ಯಗಳನ್ನು ಛತ್ತೀಸ್‌ಗಢದ ರಾಯ್‌ಪುರದಲ್ಲಿರುವ ಶಾಹೀದ್ ವೀರ್ ನಾರಾಯಣ್ ಸಿಂಗ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆಡಲಿದೆ.
ಇದನ್ನೂ ಓದಿ: RCB ತಂಡದ 2 ಪಂದ್ಯಗಳನ್ನು ಶಿಫ್ಟ್ ಮಾಡಲು ಇದುವೇ ಕಾರಣ..!
ಇದಾಗ್ಯೂ ಪ್ಲೇಆಫ್ ಪಂದ್ಯ ಹಾಗೂ ಫೈನಲ್ ಪಂದ್ಯ ಬೆಂಗಳೂರಿನಲ್ಲೇ ಜರುಗುತ್ತಿರುವುದರಿಂದ ಆರ್ಸಿಬಿ ಅಭಿಮಾನಿಗಳಿಗೆ ಒಟ್ಟು 7 ಪಂದ್ಯಗಳನ್ನು ವೀಕ್ಷಿಸಲು ಅವಕಾಶ ದೊರೆಯಲಿದೆ.