ಬೆಂಗಳೂರು, ಫೆ.5: ಬೆಂಗಳೂರು ಹಾಗೂ ರಾಜ್ಯದ ಇತರ ಭಾಗದಲ್ಲಿ ಇಂದು ಬಿಸಿಯ ತಾಪಾಮಾನ ಇದ್ದು, ಇಂದು ಗಾಳಿಯ ಮಟ್ಟದಲ್ಲೂ ಸುಧಾರಣೆ ಕಾಣಲಿದೆ ಎಂದು ತಜ್ಞರು ಹೇಳಿದ್ದಾರೆ. ಇಂದಿನ ವರದಿಯ ಪ್ರಕಾರ, ಕರ್ನಾಟಕದ ಪ್ರಮುಖ ನಗರಗಳ ವಾಯು ಗುಣಮಟ್ಟದ ಸೂಚ್ಯಂಕ ಹೇಗಿದೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ. ಬೆಂಗಳೂರಿನಲ್ಲಿ ಇಂದು ವಾಯು ಮಾಲಿನ್ಯದ ಮಟ್ಟ ಸ್ವಲ್ಪ ಹೆಚ್ಚಾಗಿದೆ. ವಿಶೇಷವಾಗಿ ಸಿಲ್ಕ್ ಬೋರ್ಡ್, ಪೀಣ್ಯ, ಮತ್ತು ವೈಟ್‌ಫೀಲ್ಡ್ ಭಾಗಗಳಲ್ಲಿ ನಿರ್ಮಾಣ ಕಾರ್ಯಗಳು ಮತ್ತು ವಾಹನ ಸಂಚಾರದಿಂದಾಗಿ AQI ಮಟ್ಟ 140 ದಾಟಿದೆ. ಮುಂಜಾನೆ ಮಂಜು ಇರುವುದರಿಂದ ಮಾಲಿನ್ಯಕಾರಕ ಕಣಗಳು (PM2.5) ಕೆಳಮಟ್ಟದಲ್ಲೇ ಉಳಿದು ಉಸಿರಾಟದ ತೊಂದರೆ ಇರುವವರಿಗೆ ಸ್ವಲ್ಪ ಕಿರಿಕಿರಿ ಉಂಟುಮಾಡಬಹುದು ಎಂದು ಹೇಳಿದ್ದಾರೆ. ಆದರೆ ಇದು ಮಾಧ್ಯಹ್ನದ ಹೊತ್ತಿಗೆ ಬದಲಾಗಬಹುದು.
ಬೆಂಗಳೂರಿನಲ್ಲಿ ಇಂದು ಹೊರಗೆ ಹೋಗುವಾಗ, ವಿಶೇಷವಾಗಿ ಮುಂಜಾನೆ ಮತ್ತು ಸಂಜೆ ವೇಳೆ ಮಾಸ್ಕ್ ಧರಿಸುವುದು ಉತ್ತಮ. ಶ್ವಾಸಕೋಶದ ಸಮಸ್ಯೆ ಅಥವಾ ಅಲರ್ಜಿ ಇರುವವರು ಹೆಚ್ಚು ಮಾಲಿನ್ಯವಿರುವ ಪ್ರದೇಶಗಳಿಂದ ದೂರವಿರಿ ಎಂದು ತಜ್ಞರು ಹೇಳಿದ್ದಾರೆ. ಬೆಂಗಳೂರಿಗೆ ಹೋಲಿಸಿದರೆ ರಾಜ್ಯದ ಇತರೆಡೆ ಮಾಲಿನ್ಯದ ಪ್ರಮಾಣ ಕಡಿಮೆ ಇದೆ. ಕರಾವಳಿ ತೀರದ ಗಾಳಿಯ ವೇಗ ಮತ್ತು ಸಮುದ್ರದ ಸಾಮೀಪ್ಯದಿಂದಾಗಿ ಇಲ್ಲಿ ಮಾಲಿನ್ಯ ಕಡಿಮೆ ಇರುತ್ತದೆ. ಮಂಗಳೂರಿನಲ್ಲಿ ಇಂದು ಗಾಳಿಯ ಮಟ್ಟ 62 ಇದ್ದು, ತೃಪ್ತಿದಾಯಕವಾಗಿದೆ. ಉಡುಪಿಯಲ್ಲಿ ಗಾಳಿಯ ಮಟ್ಟ 55 ಇದೆ. ಅಲ್ಲಿ ಕೂಡ ತೃಪ್ತಿದಾಯಕ. ಕಾರವಾರದಲ್ಲಿ 48 ಇದ್ದು, ಉತ್ತಮವಾಗಿದೆ ಎಂದು ಹೇಳಲಾಗಿದೆ.
ಪ್ರಮುಖ ನಗರಗಳ ಗಾಳಿಯ ಮಟ್ಟದ ವಿವರ:
ಉತ್ತರ ಕರ್ನಾಟಕದಲ್ಲಿ ಮಾತ್ರ ಗಾಳಿಯ ಮಟ್ಟ ಸಾಧಾರಣ ಸ್ಥಿತಿಯಲ್ಲಿದೆ. ಕಲಬುರಗಿಯಲ್ಲಿ 108 ಗಾಳಿಮಟ್ಟ ಇದೆ. ಇಲ್ಲಿ ಸಿಮೆಂಟ್ ಕಾರ್ಖಾನೆಗಳು ಮತ್ತು ಧೂಳಿನಿಂದಾಗಿ ಸ್ವಲ್ಪ ಹೆಚ್ಚಿರುತ್ತದೆ. ಧಾರವಾಡದಲ್ಲಿ 92 ಗಾಳಿಯ ಮಟ್ಟ ಇದ್ದು, ತೃಪ್ತಿದಾಯಕ ಎಂದು ಹೇಳಲಾಗಿದೆ. ಬೆಳಗಾವಿಯಲ್ಲಿ 78, ವಿಜಯಪುರದಲ್ಲಿ ಗಾಳಿಯ ಮಟ್ಟ 85 ಇದೆ. ಇಂದು ರಾಜ್ಯದ ಒಳನಾಡಿನ ಜಿಲ್ಲೆಗಳಲ್ಲಿ ಮುಂಜಾನೆ ಮಂಜು (Fog) ಹೆಚ್ಚಿರುವುದರಿಂದ ಇದು ಅಸ್ತಮಾ ಅಥವಾ ಉಸಿರಾಟದ ಸಮಸ್ಯೆ ಇರುವವರಿಗೆ ಸ್ವಲ್ಪ ತೊಂದರೆ ನೀಡಬಹುದು. ಬೆಂಗಳೂರನ್ನು ಹೊರತುಪಡಿಸಿ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಶುದ್ಧ ಗಾಳಿ ಇದೆ.
ಇದನ್ನೂ ಓದಿ: ಕರ್ನಾಟಕ ಹವಾಮಾನ ವರದಿ: ಚಳಿ ಮುಗಿಯುತ್ತಾ ಬಂತು, ಬೇಸಿಗೆ ಆರಂಭ ಆಗುವ ಮುನ್ಸೂಚನೆ
ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?
ಉತ್ತಮ- 0-50
ಮಧ್ಯಮ – 50-100
ಕಳಪೆ – 100-150
ಅನಾರೋಗ್ಯಕರ – 150-200
ಗಂಭೀರ – 200 – 300
ಅಪಾಯಕಾರಿ – 300 -500+
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ